ಭಾರತೀಯ ಬಿಲಿಯನೇರ್ ಮಗಳ ಯುಕೆ ವಿವಿ ವ್ಯಾಸಂಗಕ್ಕೆ 12 ಸಿಬ್ಬಂದಿಗಳ ಸಹಾಯ!

Published: 11 Sep 2018 03:56 PM IST | Updated: 11 Sep 2018 03:58 PM IST
ಭಾರತೀಯ ಬಿಲಿಯನೇರ್ ಮಗಳ ಯುಕೆ ವಿವಿ ವ್ಯಾಸಂಗಕ್ಕೆ 12 ಸಿಬ್ಬಂದಿಗಳ ಸಹಾಯ!
ಭಾರತೀಯ ಬಿಲಿಯನೇರ್ ಮಗಳ ಯುಕೆ ವಿವಿ ವ್ಯಾಸಂಗಕ್ಕೆ ಸಹಾಯ ಮಾಡುವುದಕ್ಕಾಗಿ 12 ಸಿಬ್ಬಂಗಳನ್ನು ನೇಮಕ ಮಾಡಲಾಗುತ್ತಿದೆ. 

ಸ್ಕಾಟ್ ಲ್ಯಾಂಡ್ ನ ಯೂನಿವರ್ಸಿಟಿ ಆಫ್ ಸೇಂಟ್ ಆಂಡ್ರ್ಯೂ ವಿನಲ್ಲಿ ಪ್ರಥಮ ವರ್ಷದ ವ್ಯಾಸಂಗ ಮಾಡುತ್ತಿರುವ ಭಾರತೀಯ ಮೂಲದ ಬಿಲಿಯನೇರ್ ಮಗಳ ಸಹಾಯಕ್ಕಾಗಿ ಬರೊಬ್ಬರಿ 12 ಜನ ಸಿಬ್ಬಂದಿಗಳನ್ನು ನೇಮಕ ಮಾಡಲಾಗುತ್ತಿದೆ. 

ಮಗಳ ಸಹಾಯಕ್ಕಾಗಿ ಓರ್ವ ಹೌಸ್ ಮ್ಯಾನೇಜರ್, ಮೂವರು ಹೌಸ್ ಕೀಪರ್, ಉದ್ಯಾನವನ್ನು ನಿರ್ವಹಣೆ ಮಾಡುವುದಕ್ಕಾಗಿ ಓರ್ವ ಸಿಬ್ಬಂದಿ, ಒಬ್ಬ ಮಹಿಳಾ ಸೇವಕಿ, ಆಹಾರ ವ್ಯವಸ್ಥೆಯನ್ನು ಗಮನಿಸಲು ಪ್ರತ್ಯೇಕ ಸಿಬ್ಬಂದಿ,  ಖಾಸಗಿ ಬಾಣಸಿಗ ಮತ್ತು ಚಾಲಕನನ್ನು ನೇಮಕ ಮಾಡಲಾಗುತ್ತದೆ ಎಂದು ದಿ ಸನ್ ಪತ್ರಿಕೆ ವರದಿ ಮಾಡಿದೆ. 

ಮಗಳ ವಿದ್ಯಾಭ್ಯಾಸಕ್ಕಾಗಿಯೇ  ಪೋಷಕರು ಐಷಾರಾಮಿ ಮ್ಯಾನ್ಷನ್ ನ್ನು ಹೊಂದಿದ್ದು, ವಿಶ್ವವಿದ್ಯಾನಿಲಯದಿಂದ ಸಾಮಾನ್ಯ ವಿದ್ಯಾರ್ಥಿಗಳಿಗೆ ನೀಡಲಾಗುವ ವ್ಯವಸ್ಥೆಯನ್ನು ಪಡೆಯದೇ ಆಕೆ ಮ್ಯಾನ್ಷನ್ ನಲ್ಲಿ ಇರಲಿದ್ದಾಳೆ ಎಂದು ತಿಳಿದುಬಂದಿದೆ.

ತಮ್ಮ ಮಗಳ ಉಡುಗೆಗಳ ಅಗತ್ಯತೆಗಳನ್ನು ಪೂರೈಸಲು ಹಾಗೂ ಶಾಪಿಂಗ್ ಗಾಗಿಯೂ ಪ್ರತ್ಯೇಕವಾದ ಸಿಬ್ಬಂದಿಗಳನ್ನು ನೇಮಕ ಮಾಡಲು ಕುಟುಂಬ ಸದಸ್ಯರು ನಿರ್ಧರಿಸಿದ್ದು, ಉದ್ಯೋಗಕ್ಕಾಗಿ ಬೇಕಿರುವ ಅರ್ಹತೆಗಳನ್ನು ನೇಮಕಾತಿ ಸಂಸ್ಥೆ ಸಿಲ್ವರ್ ಸ್ವಾನ್ ನೋಡಿಕೊಳ್ಳಲಿದೆ. ಇನ್ನು ಯಾವ ಕ್ಷಣದಲ್ಲಿ ಬೇಕಾದರೂ ಆಹಾರ ವ್ಯವಸ್ಥೆ ಮಾಡುವುದು ಬಾಣಸಿಗರ ಜವಾಬ್ದಾರಿಯಾಗಿರಲಿದೆ. 

ಅಲ್ಟ್ರಾ ಹೈ ನೆಟ್ ವರ್ತ್ ಕುಟುಂಬ ನುರಿತ ಸಿಬ್ಬಂದಿಗಳಿಗಳಿಗಾಗಿ ಎದುರು ನೋಡುತ್ತಿದ್ದಾರೆ, ಇದಕ್ಕಾಗಿ ಜಾಹಿರಾತು ನೀಡಿರುವ ಪೋಷಕರು ಪ್ರತಿ ವರ್ಷವೂ 30,000 ಪೌಂಡ್ ಗಳ ವೇತನ ನೀಡುವುದಾಗಿ ಹೇಳಿದ್ದಾರೆ.
Posted by: SBV | Source: Online Desk

ಈ ವಿಭಾಗದ ಇತರ ಸುದ್ದಿ