ಭಾರತಕ್ಕೆ ಮರಳುವಿಕೆಯನ್ನು ನ್ಯಾಯಾಧೀಶರು ನಿರ್ಧರಿಸುತ್ತಾರೆ: ಸಾಲದ ದೊರೆ ವಿಜಯ್ ಮಲ್ಯ

Published: 08 Sep 2018 11:00 AM IST
ಸಾಲದ ದೊರೆ ವಿಜಯ್ ಮಲ್ಯ
ಲಂಡನ್: ಭಾರತಕ್ಕೆ ಹಿಂದಿರುಗುವಿಕೆಯನ್ನು ನ್ಯಾಯಾಧೀಶರೇ ನಿರ್ಧರಿಸುತ್ತಾರೆಂದು ಸಾಲದ ದೊರೆ ವಿಜಯ್ ಮಲ್ಯ ಅವರು ಶುಕ್ರವಾರ ಹೇಳಿದ್ದಾರೆ. 

ಸಾವಿರಾರು ಕೋಟಿ ಸಾಲ ಮಾಡಿ ಭಾರತೀಯ ಬ್ಯಾಂಕ್'ಗಳಿಗೆ ಪಂಗನಾಮ ಹಾಕಿ ವಿದೇಶದಲ್ಲಿ ವಿಜಯ್ ಮಲ್ಯ ಅವರು ಸ್ವತಂತ್ರ ಹಕ್ಕಿಯಂತೆ ಹಾರಾಡಿಕೊಂಡಿದ್ದಾರೆ. 

ಲಂಡನ್ ನಲ್ಲಿ ಸ್ವತಂತ್ರ ಹಕ್ಕಿಯಂತೆ ಹಾರಾಡಿಕೊಂಡಿರುವ ವಿಜಯ್ ಮಲ್ಯ ಅವರು ಓವಲ್ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದು, ವಿಜಯ್ ಮಲ್ಯ ಅವರನ್ನು ಕಂಡ ಪತ್ರಕರ್ತರೊಬ್ಬರು ಭಾರತಕ್ಕೆ ಹಿಂದಿರುಗುವ ಕುರಿತು ಪ್ರಶ್ನೆಯೊಂದನ್ನು ಕೇಳಿದ್ದಾರೆ. ಈ ವೇಳೆ ಉತ್ತರಿಸಿರುವ ಮಲ್ಯ, ಭಾರತಕ್ಕೆ ಮರಳುವಿಕೆ ಕುರಿತು ನ್ಯಾಯಾಧೀಶರೇ ನಿರ್ಧರಿಸುತ್ತಾರೆಂದು ಹೇಳಿದ್ದಾರೆ. 

ಬಳಿಕ ಮತ್ತೆ ಪತ್ರಕರ್ತ ಅದೇ ಪ್ರಶ್ನೆ ಕೇಳಿದ್ದಕ್ಕೆ ಸಿಡಿಮಿಡಿಕೊಂಡ ಮಲ್ಯ ಅವರು, ತಾನು ಯಾವುದೇ ಮಾಧ್ಯಮಗಳಿಗೂ ಸಂದರ್ಶನ ನೀಡುವುದಿಲ್ಲ ಎಂದು ಹೇಳಿ ಕಾರು ಹತ್ತಿ ಸ್ಥಳದಿಂದ ಹೊರಟು ಹೋಗಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 
Posted by: MVN | Source: ANI

ಈ ವಿಭಾಗದ ಇತರ ಸುದ್ದಿ