ರಾಜ್ಯ

ಬೆಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರಿಗೆ ಓಮಿಕ್ರಾನ್ ಪಾಸಿಟಿವ್, ಒಟ್ಟಾರೆ 23ಕ್ಕೆ ಏರಿಕೆ

Nagaraja AB

ಬೆಂಗಳೂರು: ಬೆಂಗಳೂರಿನಲ್ಲಿ ಓಮಿಕ್ರಾನ್ ರೂಪಾಂತರದ ನಾಲ್ಕು ಹೊಸ ಪ್ರಕರಣಗಳು ಒಂದೇ ಕುಟುಂಬದಲ್ಲಿ ಕಂಡುಬರುವುದರೊಂದಿಗೆ ರಾಜ್ಯದಲ್ಲಿ ಹೊಸ ರೂಪಾಂತರಿಯ ಒಟ್ಟು ಪ್ರಕರಣಗಳ ಸಂಖ್ಯೆ ಬುಧವಾರ 23ಕ್ಕೆ ಏರಿಕೆಯಾಗಿದೆ.

ಕೋರಮಂಗಲದ ರಹೇಜಾ ರೆಸಿಡೆನ್ಷಿ ಅಪಾರ್ಟ್ ಮೆಂಟ್ ನಲ್ಲಿ ಹೊಸ ಕ್ಲಸ್ಟರ್ ಪತ್ತೆಯಾಗಿದೆ. ಇತ್ತೀಚಿಗೆ ಇಂಗ್ಲೆಂಡ್ ನಿಂದ ವಾಪಸ್ಸಾಗಿದ್ದ 26 ವರ್ಷದ ಯುವತಿಗೆ ಸೋಂಕು ಕಾಣಿಸಿಕೊಳ್ಳುವುದರೊಂದಿಗೆ ಇತರರಿಗೂ ಹರಡಿದೆ. 

ವಿಮಾನ ನಿಲ್ದಾಣದಲ್ಲಿ ಆಕೆಗೆ ಪರೀಕ್ಷೆಸಿದಾಗ ನೆಗೆಟಿವ್ ಕಂಡುಬಂದಿತ್ತು ನಂತರ ರೋಗ ಲಕ್ಷಣಗಳು ಕಂಡುಬಂದಾಗ ಆಕೆ ಮತ್ತೆ ಪರೀಕ್ಷೆ ಮಾಡಿಸಿದ್ದು, ಪಾಸಿಟಿವ್ ದೃಢಪಟ್ಟಿದೆ. ಆಕೆ ಮಾದರಿಗಳನ್ನು ಜೀನೋಮ್ ಸಿಕ್ವೆನ್ಸಿಂಗ್ ಗಾಗಿ ಕಳುಹಿಸಲಾಗಿತ್ತು ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. 

ಈ ನಡುವಿನ ಅವಧಿಯಲ್ಲಿ ಆಕೆಯ ಕುಟುಂಬ ಸದಸ್ಯರಲ್ಲಿಯೂ ರೋಗ ಲಕ್ಷಣಗಳು ಕಂಡುಬಂದಿದ್ದು, ಪ್ರಾಥಮಿಕ ಸಂಪರ್ಕಿತರನ್ನು ಪರೀಕ್ಷಿಸಿ, ಎಲ್ಲರ ಮಾದರಿಗಳನ್ನು ಜೀನೋಮ್ ಸಿಕ್ವೆನ್ಸಿಂಗ್ ಗಾಗಿ ಕಳುಹಿಸಲಾಗಿತ್ತು. 26 ವರ್ಷದ ಯುವತಿ ಅಲ್ಲದೇ, 50 ವರ್ಷದ ಅವರ ತಾಯಿ, 56 ವರ್ಷದ ಅವರ ತಂದೆ ಹಾಗೂ 20 ವರ್ಷದ ಆಕೆಯ ತಂಗಿಯ ಜೀನೊಮ್ ಸಿಕ್ವೆನಸಿಂಗ್ ಫಲಿತಾಂಶ ಬುಧವಾರ ಬಂದಿದ್ದು, ಓಮಿಕ್ರಾನ್ ರೂಪಾಂತರ ದೃಢಪಟ್ಟಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ. ತ್ರಿಲೋಕ್ ಚಂದ್ರ ತಿಳಿಸಿದ್ದಾರೆ.

ಆಕೆಯೊಂದಿಗೆ ಅವರ ಕುಟುಂಬ ಸದಸ್ಯರಿಗೂ ಓಮಿಕ್ರಾನ್ ಪಾಸಿಟಿವ್ ಬಂದಿದ್ದು, ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅವರು ಸೌಮ್ಯ ರೋಗ ಲಕ್ಷಣ ಹೊಂದಿದ್ದಾರೆ. ದ್ವಿತೀಯ ಸಂಪರ್ಕಿತರೆಲ್ಲರಿಗೂ ನೆಗೆಟಿವ್ ವರದಿಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. 

ಮೊದಲ ಹಾಗೂ ಎರಡನೇ ಅಲೆ ವೇಳೆಯಲ್ಲಿ ಈ ಅಪಾರ್ಟ್ ಮೆಂಟ್ ನಲ್ಲಿ ಅನೇಕ ಪ್ರಕರಣಗಳು ಕಂಡುಬಂದಿದ್ದವು.  ಮೂರು ವಾರಗಳು, ಹುಟ್ಟುಹಬ್ಬದ ಪಾರ್ಟಿಯಲ್ಲಿ ಅನೇಕ ಮಂದಿ ಪಾಲ್ಗೊಂಡ ನಂತರ ಕ್ಲಸ್ಟರ್ ವರದಿಯಾಗಿದೆ. ಆ ಅಪಾರ್ಟ್ ಮೆಂಟ್ ಕಾಂಪ್ಲೆಕ್ಸ್ ನಲ್ಲಿ ಸಾವಿರಾರು ಜನರು ವಾಸಿಸುತ್ತಿದ್ದಾರೆ. ವಿದೇಶಗಳಿಂದ ಬಂದವರಿಗೆ ನೆಗೆಟಿವ್ ವರದಿ ಬರುವವರೆಗೂ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡುವಂತೆ ತಿಳಿಸಲಾಗಿದೆ ಎಂದು ಬಿಬಿಎಂಪಿ ಮೂಲಗಳು ಹೇಳಿವೆ.

SCROLL FOR NEXT