“ನಾವೇ ಇಷ್ಟು ಜನ ಸೇರಿದ್ದೇವೆ, ಇನ್ನು ಪ್ರಧಾನಿ ನರೇಂದ್ರ ಮೋದಿಯವರೇ ಕರೆ ಕೊಟ್ಟರೆ ಎಷ್ಟು ಜನ ಜಮಾಯಿಸಬಹುದು ಯೋಚಿಸಿ” ಎಂದ ಅವರು, ಜನರು ಕೇವಲ ಸಾಮಾಜಿಕ ಮಾಧ್ಯಮಗಳಿಗೆ ಸೀಮಿತವಾಗದೆ ಬೀದಿಗಿಳಿಯಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಪಕ್ಷವು ಸಿಜೆಪಿಗೆ(CJP) ಆರ್ಥಿಕ ನೆರವು ನೀಡುತ್ತಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಆರೋಪವನ್ನು ತಳ್ಳಿಹಾಕಿದ ಹರಿಪ್ರಸಾದ್, ಆರ್ಟಿಜಿಎಸ್ (RTGS) ಮೂಲಕ ಲಂಚ ಸ್ವೀಕರಿಸುವ ಬಗ್ಗೆ ವಿಜಯೇಂದ್ರ ಅವರಿಗೆ ಚೆನ್ನಾಗಿ ಗೊತ ...