ಕೇರಳ ರಾಜ್ಯಪಾಲ ಆರಿಫ್ ಖಾನ್ ರಾಮಲಲ್ಲಾ ಮುಂದೆ ತಲೆ ಬಾಗಿದ್ದು 'ಅಪರಾಧ': AIMIM ಆಕ್ರೋಶ

Vishwanath S

ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಆಯೋಧ್ಯೆಯ ರಾಮಮಂದಿರಕ್ಕೆ ಆಗಮಿಸಿ ರಾಮಲಲ್ಲಾನ ಮುಂದೆ ತಲೆಬಾಗಿ ನಮಸ್ಕರಿಸಿದರು.

'ಜನವರಿಯಲ್ಲಿ ಎರಡು ಬಾರಿ ಅಯೋಧ್ಯೆಗೆ ಬಂದಿದ್ದೆ, ಅಂದು ಇದ್ದ ಭಾವನೆ ಇಂದಿಗೂ ಇದೆ. ಹಲವು ಬಾರಿ ಅಯೋಧ್ಯೆಗೆ ಬಂದಿದ್ದೇನೆ. ಅಯೋಧ್ಯೆಗೆ ಬಂದು ಶ್ರೀರಾಮನಿಗೆ ಪೂಜೆ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಆರಿಫ್ ಖಾನ್ ಹೇಳಿದರು.

ಕೇರಳ ರಾಜ್ಯಪಾಲರ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಗವರ್ನರ್ ಆರಿಫ್ ಖಾನ್ ರಾಮಲಲ್ಲಾನ ಮೂರ್ತಿ ಮುಂದೆ ತಲೆ ಬಾಗಿಸುತ್ತಿರುವುದನ್ನು ಕಾಣಬಹುದು.

ಆರಿಫ್ ಖಾನ್ ರಾಮಲಲ್ಲಾನ ದರ್ಶನ ಪಡೆದಿರುವುದು ಅಪರಾಧ ಎಂದು AIMIM ನಾಯಕ ವಾರಿಸ್ ಪಠಾಣ್ ಹೇಳಿದ್ದಾರೆ.