ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್ ಹಿಂದೆ 'ಬ್ಲ್ಯಾಕ್'ಮೇಲ್ ಕಿಂಗ್‌' HDK ಕೈವಾಡ: ಡಿಸಿಎಂ ಡಿ.ಕೆ.ಶಿವಕುಮಾರ್ ಆರೋಪ

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಲೀಕ್ ಹಿಂದೆ ಬ್ಲ್ಯಾಕ್'ಮೇಲ್ ಕಿಂಗ್‌ ಹೆಚ್'ಡಿ.ಕುಮಾರಸ್ವಾಮಿಯವರ ಕೈವಾಡವಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಬುಧವಾರ ಆರೋಪಿಸಿದ್ದಾರೆ.
ಡಿಸಿಎಂ ಡಿಕೆ.ಶಿವಕುಮಾರ್
ಡಿಸಿಎಂ ಡಿಕೆ.ಶಿವಕುಮಾರ್

ಚಿಕ್ಕಮಗಳೂರು: ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಲೀಕ್ ಹಿಂದೆ ಬ್ಲ್ಯಾಕ್'ಮೇಲ್ ಕಿಂಗ್‌ ಹೆಚ್'ಡಿ.ಕುಮಾರಸ್ವಾಮಿಯವರ ಕೈವಾಡವಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಬುಧವಾರ ಆರೋಪಿಸಿದ್ದಾರೆ.

ಚಿಕ್ಕಮಗಳೂರಿನ ಹೆಲಿಪ್ಯಾಡ್‌ನಲ್ಲಿ ಮಾತನಾಡಿದ ಅವರು, ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ತಮ್ಮ ಕೈವಾಡ ಇದೆ ಎಂದು ಆರೋಪಿಸಿದ್ದ ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕುಮಾರಸ್ವಾಮಿ ಅವರಿಗೆ ಪೆನ್ ಡ್ರೈವ್'ನ ಸಂಪೂರ್ಣ ವಿಚಾರ ತಿಳಿದಿದೆ. ವಕೀಲರೊಬ್ಬರು (ದೇವರಾಜೇಗೌಡ) ಮತ್ತು ಇತರರು ಇದರ ಬಗ್ಗೆ ಮಾತನಾಡುತ್ತಿದ್ದಾರೆ. ಕುಮಾರಣ್ಣ (ಕುಮಾರಸ್ವಾಮಿ) ನನ್ನ ರಾಜೀನಾಮೆ ಬಯಸುತ್ತಿದ್ದಾರೆ, ಒಕ್ಕಲಿಗ ನಾಯಕರ ಪೈಪೋಟಿಯಂತೆ, ರಾಜೀನಾಮೆ ಬೇಕಂತೆ, ಕೊಡೋಣ ರಾಜೀನಾಮೆ.. ಮುಗಿಸೋದೇ ಅಲ್ವಾ ಅವರ ಕೆಲಸ, ಕಿಂಗ್ ಆಫ್ ಬ್ಲಾಕ್ ಮೇಲ್. ಆಫೀರ್ಸ್, ಪೊಲಿಟಿಷಿಯನ್ಸ್ ಗಳಿಗೆ ಹೆದರಿಸುತ್ತಿದ್ದಾರೆ, ಅವರದು ಇದೇ ಕೆಲಸ. ಚರ್ಚೆ ಮಾಡಲು ಇನ್ನೂ ಟೈಮ್ ಇದೆ, ವಿಧಾನಸಭೆ ಅಧಿವೇಶನ ಇದೆ, ಎಲ್ಲಾ ತೆಗೆದುಕೊಂಡು ಬರಲಿ ಚರ್ಚೆ ಮಾಡೋಣ ಎಂದು ಹೇಳಿದರು.

ಡಿಸಿಎಂ ಡಿಕೆ.ಶಿವಕುಮಾರ್
ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ನ್ಯಾಯಾಂಗ ತನಿಖೆಗೆ ಜೆಡಿಎಸ್ ಆಗ್ರಹ, ಮೈಸೂರಿನಲ್ಲಿ ಪ್ರತಿಭಟನೆಗೆ ಮುಂದು!

ಕೇಸಿನಲ್ಲಿ ಮೊದಲು ಅವರ ಹೆಸರು ಸ್ಟ್ಯಾಂಡ್ ಆಗಲಿ, ದೇವೇಗೌಡರು ನನ್ನ ಹೆಸರು ತೆಗೆದುಕೊಳ್ಳುವುದು ಬೇಡ ಅಂದರು. ಆದರೆ, ಕುಮಾರಸ್ವಾಮಿ ರೇವಣ್ಣರದ್ದು ಬೇರೆ ಫ್ಯಾಮಿಲಿ, ನಮ್ಮದೇ ಬೇರೆ ಫ್ಯಾಮಿಲಿ ಎಂದಿದ್ದಾರೆ. ಉಪ್ಪು ತಿಂದವನು ನೀರು ಕುಡಿಬೇಕು ಎಂದವರು ಈಗ ಯಾಕೆ ಉರಿ ಮಾಡಿಕೊಳ್ಳುತ್ತಿದ್ದಾರೆ. ಇವರೇನು ಲಾಯರ್ರಾ, ಜಡ್ಜಾ... ಹೋಗಿ ಕೋರ್ಟಿನಲ್ಲಿ ವಾದ ಮಾಡಲಿ.

ಶಿವಕುಮಾರ್, ಸಿದ್ದರಾಮಯ್ಯ, ಸುರ್ಜೆವಾಲಾ ಇನ್ವೆಸ್ಟಿಗೇಷನ್ ಟೀಮ್ ನಲ್ಲಿದ್ದಾರೆಂದು ಹೇಳಿದ್ದಾರೆ. ಕಥಾನಾಯಕ, ಡೈರೆಕ್ಟರ್, ಪ್ರೋಡ್ಯೂಸರ್ ಎಲ್ಲಾ ಕುಮಾರಸ್ವಾಮಿ ಅವರೇ ಇದ್ದಾರೆ, ಎಲ್ಲಾ ಗೊತ್ತಿದೆ. ಅವರ ಕಾರ್ಯಕರ್ತರು ಏನೋ ಇದ್ದಾರೆ ಅಂತೆ, ಮರ್ಯಾದೆ ಇದ್ದರೆ ಹೋಗಿ ಜೈಲು ಸೇರಿದವರಿಗೆ ಧೈರ್ಯ ತುಂಬಲಿ. ಇವರೆಲ್ಲರಿಗೂ ನನ್ನ ಹೆಸರು ಬರಬೇಕು ಅಷ್ಟೇ. ನನ್ನ ಮೇಲೆ ಆರೋಪ ಮಾಡದಿದ್ರೆ ಮಾರ್ಕೆಟ್‌ ಓಡಲ್ಲ. ನನ್ನ ಹೆಸರು ಇರದಿದ್ರೆ ನೀವು ಸುದ್ದಿ ತೋರಿಸುವುದಲ್ಲ ತಾನೇ.. ನನ್ನ ಹೆಸರು ಇಲ್ಲದಿದ್ರೆ ಪಾಪ ನಿದ್ದೆಯೇ ಬರಲ್ಲ ಎಂದು ವ್ಯಂಗ್ಯವಾಡಿದರು.‌

ಜೆಡಿಎಸ್‌ ಪ್ರತಿಭಟನೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿ, ಅವರು ಪ್ರತಿಭಟನೆ ಮಾಡಲಿ, ನನ್ನ ಹೆಸರು ಹೇಳದಿದ್ದರೆ ಯಾವುದು ನಡೆಯಲ್ಲ. ನನ್ನ ಹೆಸರು ಇಲ್ಲದೇ ಅವರಿಗೆ ನಿದ್ದೆಯೂ ಬರಲ್ಲ. ಬಿಜೆಪಿಯವರ ಕಡೆಯಿಂದ ಏನು ಮಾಡಬೇಕೋ ಅದನ್ನು ಮಾಡಿಸಿದ್ದಾರೆ. ಕುಮಾರಸ್ವಾಮಿ ಕಿಂಗ್‌ ಆಫ್‌ ಬ್ಲ್ಯಾಕ್‌ ಮೇಲ್‌, ಎಲ್ಲ ಅಧಿಕಾರಿಗಳಿಗೂ ಹೆದರಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com