
ಐಪಿಎಲ್ 2024ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಖನೌ ಸೂಪರ್‌ಜೈಂಟ್ಸ್ ನಡುವಿನ ಪಂದ್ಯದ ನಂತರ ವಿವಾದವೊಂದು ಬೆಳಕಿಗೆ ಬಂದಿದ್ದು, ಇದು ಕ್ರಿಕೆಟ್ ಅಭಿಮಾನಿಗಳು ಆಕ್ರೋಶಗೊಳ್ಳುವಂತೆ ಮಾಡಿದೆ.
ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಲಖನೌ ತಂಡ 10 ವಿಕೆಟ್‌ಗಳ ಸೋಲು ಅನುಭವಿಸಿತು. ಪಂದ್ಯದ ನಂತರ ಲಖನೌ ಸೂಪರ್‌ಜೈಂಟ್ಸ್ (LSG) ಮಾಲೀಕ ಸಂಜೀವ್ ಗೋಯೆಂಕಾ ತಂಡದ ನಾಯಕ ಕೆಎಲ್ ರಾಹುಲ್ (KL Rahul) ವಾಗ್ವಾದ ನಡೆಸಿದ್ದಾರೆ. ಕ್ಯಾಮೆರಾಗಳ ಮುಂದೆ ರಾಹುಲ್ ರನ್ನು ಆಕ್ರೋಶಭರಿತವಾಗಿ ಪ್ರಶ್ನಿಸುತ್ತಿರುವುದು ಕಂಡುಬಂದಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಂದ್ಯದಲ್ಲಿ ಸೋತ ನಂತರ, ಲಕ್ನೋ ಸೂಪರ್‌ಜೈಂಟ್ಸ್ (ಎಲ್‌ಎಸ್‌ಜಿ) ನಾಯಕ ಕೆಎಲ್ ರಾಹುಲ್ ಪೆವಿಲಿಯನ್ ಕಡೆಗೆ ಮರಳುತ್ತಿದ್ದರು. LJC ಮಾಲೀಕ ಸಂಜೀವ್ ಗೋಯೆಂಕಾ ಅವರನ್ನು ನೋಡಿ, ಅವರು ಅವರೊಂದಿಗೆ ಮಾತನಾಡಲು ನಿಲ್ಲಿಸಿದರು. ಇಬ್ಬರ ನಡುವಿನ ಈ ಸಂಭಾಷಣೆಯ ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಸಂಜೀವ್ ಗೋಯೆಂಕಾ ಕೋಪಗೊಂಡಿದ್ದಾರೆ. ಗೋಯೆಂಕಾ ಪ್ರಶ್ನೆಗೆ ಕ್ಯಾಪ್ಟನ್ ರಾಹುಲ್ ಏನನ್ನೋ ಹೇಳಲು ಪ್ರಯತ್ನಿಸುತ್ತಾರೆ. ಆದರೆ ಗೋಯೆಂಕಾ ಅದನ್ನು ನಿರ್ಲಕ್ಷಿಸಿ ಹೊರನಡೆದಿದ್ದಾರೆ. ಇಬ್ಬರ ನಡುವೆ ನಿಜವಾಗಿ ಏನಾಯಿತು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಇಬ್ಬರ ನಡುವೆ ವಾಗ್ವಾದ ನಡೆದಿದೆ ಎಂದು ಖಂಡಿತಾ ಭಾವಿಸಬಹುದು.
ಇನ್ನು ಮೈದಾನದಲ್ಲಿ ಮತ್ತು ಕ್ಯಾಮೆರಾಗಳ ಮುಂದೆ ಇಂತಹ ಸಂಭಾಷಣೆಗಳು ನಡೆಯಬಾರದು ಎಂದು ವ್ಯಾಖ್ಯಾನಕಾರರು ಹೇಳುತ್ತಿದ್ದಾರೆ. ಅಲ್ಲದೆ ಕನ್ನಡಿಗರು ಇದೆಲ್ಲ ಬೇಕ ಸುಮ್ಮನೆ ಆರ್ ಸಿಬಿಗೆ ಬಂದು ಬಿಡಿ ಎಂದು ಟ್ವೀಟ್ ಮಾಡುತ್ತಿದ್ದಾರೆ.
ಈ ವೀಡಿಯೋ ನೋಡಿದ ನಂತರ ಕೆಎಲ್ ರಾಹುಲ್ ಕೂಡಲೇ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತೊರೆಯಬೇಕು ಎಂದು ಹಲವರು ಕಮೆಂಟ್ ಮಾಡಿದ್ದಾರೆ. ರಾಹುಲ್ ಬ್ಯಾಟಿಂಗ್ ಬಗ್ಗೆ ಹಲವರು ಪ್ರಶ್ನೆ ಎತ್ತಿದ್ದಾರೆ. ಲಕ್ನೋ ಸೂಪರ್‌ಜೈಂಟ್ಸ್ ಐಪಿಎಲ್ 2024ರಲ್ಲಿ 12 ಪಂದ್ಯಗಳಲ್ಲಿ 6 ಅನ್ನು ಗೆದ್ದು ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
Advertisement