ಐಪಿಎಲ್ 2024: ರಾಜಸ್ಥಾನ್ ರಾಯಲ್ಸ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ ಗೆಲುವು, ಪ್ಲೇಆಫ್ ಕನಸು ಜೀವಂತ

ಐಪಿಎಲ್ 2024ರ 56ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಂಗಳವಾರ ಭರ್ಜರಿ ಗೆಲುವು ಸಾಧಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ
ಡೆಲ್ಲಿ ಕ್ಯಾಪಿಟಲ್ಸ್ ತಂಡ

ಮುಂಬೈ: ಐಪಿಎಲ್ 2024ರ 56ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಂಗಳವಾರ ಭರ್ಜರಿ ಗೆಲುವು ಸಾಧಿಸಿದೆ.

ಇಂದು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರು ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 221 ರನ್ ಸೇರಿಸಿತು.

ಗೆಲುವಿಗೆ 222 ರನ್ ಗಳ ಬೃಹತ್ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡ, 8 ವಿಕೆಟ್ ನಷ್ಟಕ್ಕೆ 201 ರನ್​ ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 20 ರನ್​ಗಳ ಗೆಲುವು ದಾಖಲಿಸಿತು.

ಡೆಲ್ಲಿ ಕ್ಯಾಪಿಟಲ್ಸ್ ತಂಡ
ಐಪಿಎಲ್ 2024: ಸೂರ್ಯಕುಮಾರ್ ಶತಕದ ನೆರವಿನಿಂದ ಹೈದರಾಬಾದ್ ವಿರುದ್ಧ ಮುಂಬೈ ಗೆಲುವು

ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು 12 ಅಂಕಗಳೊಂದಿಗೆ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಅಲ್ಲದೆ ಪ್ಲೇಆಫ್ ಕನಸನ್ನು ಜೀವಂತವಿರಿಸಿಕೊಳ್ಳುವಲ್ಲಿ ರಿಷಭ್ ಪಂತ್ ಪಡೆ ಯಶಸ್ವಿಯಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ಪರ ಪ್ರೇಸರ್ ಮೆಕ್​ಗುರ್ಕ್​ 20 ಎಸೆತಕ್ಕೆ 50 ರನ್​ ಬಾರಿಸಿದರೆ ಅಭಿಷೇಕ್ ಪೊರೆಲ್​ 65 ರನ್​ ಬಾರಿಸಿದರು. ಶಾಯ್​ ಹೋಪ್​ ವಿಫಲರಾಗಿ 1 ರನ್​ಗೆ ಔಟಾದಾಗ ಡೆಲ್ಲಿ ರನ್ ಗಳಿಕೆ ವೇಗ ಕಡಿಮೆಯಾಯಿತು. ಅಕ್ಷರ್ ಪಟೇಲ್​ ಹಾಗೂ ರಿಷಭ್​ ಪಂತ್​ ತಲಾ 15 ರನ್ ಬಾರಿಸಿದರು. ಆದರೆ, ಕೊನೇ ಹಂತದಲ್ಲಿ ಟ್ರಿಸ್ಟಾನ್​ ಸ್ಟಬ್ಸ್​​ 20 ಎಸೆತಕ್ಕೆ 41 ರನ್ ಬಾರಿಸಿ ದೊಡ್ಡ ಮೊತ್ತ ಸೇರಿಸಲು ನೆರವಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com