ಪ್ರಜ್ವಲ್ ಕೇಸ್ 'ವಿಶ್ವದ ಅತಿ ದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣ'; ನೂರಾರು ಹಿಂದು ಮಹಿಳೆಯರ ಮಾಂಗಲ್ಯ ಹರಣ: ಸಚಿವ ಕೃಷ್ಣ ಬೈರೇಗೌಡ

ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಸೆಕ್ಸ್ ವಿಡಿಯೋ ಪ್ರಕರಣ ವಿಶ್ವದ ಅತಿದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣವಾಗಿದ್ದು, ನೂರಾರು ಹಿಂದು ಮಹಿಳೆಯರ ಮಾಂಗಲ್ಯ ಹರಣ ಮಾಡಿದ ಪ್ರಕರಣ.
ಜಂಟಿ ಸುದ್ದಿಗೋಷ್ಠಿಯಲ್ಲಿ ಕೃಷ್ಣ ಬೈರೇಗೌಡ, ಎನ್ ಚೆಲುವರಾಯಸ್ವಾಮಿ, ರಾಮಲಿಂಗಾರೆಡ್ಡಿ
ಜಂಟಿ ಸುದ್ದಿಗೋಷ್ಠಿಯಲ್ಲಿ ಕೃಷ್ಣ ಬೈರೇಗೌಡ, ಎನ್ ಚೆಲುವರಾಯಸ್ವಾಮಿ, ರಾಮಲಿಂಗಾರೆಡ್ಡಿ

ಬೆಂಗಳೂರು: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಸೆಕ್ಸ್ ವಿಡಿಯೋ ಪ್ರಕರಣ ವಿಶ್ವದ ಅತಿದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣವಾಗಿದ್ದು, ನೂರಾರು ಹಿಂದು ಮಹಿಳೆಯರ ಮಾಂಗಲ್ಯ ಹರಣ ಮಾಡಿದ ಪ್ರಕರಣ ಎಂದು ಸಚಿವ ಕೃಷ್ಣಬೈರೇಗೌಡ ಅವರು ಬುಧವಾರ ಹೇಳಿದ್ದಾರೆ.

ಜೆಡಿಎಸ್‌ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕ ಜಿ ದೇವರಾಜೇಗೌಡ ಅವರ ಸರಣಿ ಆರೋಪಗಳ ನಂತರ ಇಂದು ಕಾಂಗ್ರೆಸ್ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ನಾಲ್ವರು ಸಚಿವರು ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ನನ್ನ ಜ್ಞಾನದ ಪ್ರಕಾರ, ಪ್ರಜ್ವಲ್ ರೇವಣ್ಣ ಪ್ರಕರಣ ಪ್ರಪಂಚದ ಅತಿದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣವಾಗಿದ್ದು, ಇದರ ಬಗ್ಗೆ ಚರ್ಚೆಯಾಗಬೇಕು. ಮಹಿಳೆಯರ ಮಾನದ ಬಗ್ಗೆ ಮಾತನಾಡಬೇಕಾಗಿತ್ತು. ಆದರೆ ಬೇರೆಯದೆ ವಿಚಾರ ಚರ್ಚೆ ಆಗುತ್ತಿದೆ. ಗಮನ ಬೇರೆಡೆ ಸೆಳೆದು ಹಗರಣವನ್ನು ಮುಚ್ಚಿಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದರು.

ಜಂಟಿ ಸುದ್ದಿಗೋಷ್ಠಿಯಲ್ಲಿ ಕೃಷ್ಣ ಬೈರೇಗೌಡ, ಎನ್ ಚೆಲುವರಾಯಸ್ವಾಮಿ, ರಾಮಲಿಂಗಾರೆಡ್ಡಿ
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್ ಹಿಂದೆ 'ಬ್ಲ್ಯಾಕ್'ಮೇಲ್ ಕಿಂಗ್‌' HDK ಕೈವಾಡ: ಡಿಸಿಎಂ ಡಿ.ಕೆ.ಶಿವಕುಮಾರ್ ಆರೋಪ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರ ಜೊತೆ ರಾಸಲೀಲೆ ನಡೆಸಿದ ವಿಡಿಯೋ ತುಣುಕುಗಳ ಪೆನ್ ಡ್ರೈವ್‌ ವಿತರಣೆಯಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಪಾತ್ರವಿದೆ ಎಂದು ಜೆಡಿಎಸ್ ಮತ್ತು ಬಿಜೆಪಿ ನಾಯಕರು ಆರೋಪಿಸಿದ ನಂತರ, ಕೃಷ್ಣ ಬೈರೇಗೌಡ, ರಾಮಲಿಂಗಾರೆಡ್ಡಿ, ಎನ್ ಚೆಲುವರಾಯಸ್ವಾಮಿ ಮತ್ತು ಎಂಸಿ ಸುಧಾಕರ್ ಅವರನ್ನು ಪಕ್ಷ ಮತ್ತು ಸರ್ಕಾರವನ್ನು ರಕ್ಷಿಸಲು ಡಿಕೆಶಿ ಕಣಕ್ಕಿಳಿಸಿದ್ದಾರೆ.

ಪ್ರಕರಣದ ತನಿಖೆಗೆ ಕಾಂಗ್ರೆಸ್ ಸರ್ಕಾರ ವಿಶೇಷ ತನಿಖಾ ತಂಡವನ್ನುಎಸ್‌ಐಟಿ) ರಚಿಸಿದ್ದರೆ, ಬಿಜೆಪಿ ಮತ್ತು ಜೆಡಿ(ಎಸ್) ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಮತ್ತು ಹಿಂದೆ ಇರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

‘ಇಷ್ಟೊಂದು ಹಿಂದೂ ಮಹಿಳೆಯರ ಮಾಂಗಲ್ಯವನ್ನು ಕಿತ್ತುಕೊಂಡು, ಕುಟುಂಬಗಳನ್ನು ಒಡೆದು ಹಾಕಿದ ಮತ್ತೊಂದು ಪ್ರಕರಣ ಇದ್ದರೆ ತಿಳಿಸಿ’ ಎಂದ ಕೃಷ್ಣ ಬೈರೇಗೌಡ, "ಇದು ಪ್ರಮುಖ ಪ್ರಕರಣವಾಗಿದೆ. ಆರೋಪಗಳ ಬಗ್ಗೆ ತನಿಖೆ ಮಾಡಬೇಕು, ಸಂತ್ರಸ್ತರಿಗೆ ನ್ಯಾಯ ಸಿಗಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಇದು ನಮ್ಮ ಉದ್ದೇಶ ಎಂದರು.

"ಆದರೆ ನಡೆಯುತ್ತಿರುವ ಚರ್ಚೆಯ ದಿಕ್ಕನ್ನು ನೋಡಿದರೆ, ಅತಿದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣದ" ಆರೋಪಿಗಳನ್ನು ರಕ್ಷಿಸಲು ಯತ್ಮಿಸಲಾಗುತ್ತಿದೆ ಮತ್ತು ಪ್ರಕರಣವನ್ನು ಮುಚ್ಚಿಹಾಕಲು "ಯೋಜಿತ ಪ್ರಯತ್ನ" ಮತ್ತು "ಸರ್ಜಿಕಲ್ ಸ್ಟ್ರೈಕ್" ನಡೆಯುತ್ತಿದೆ ಎಂದು ಆರೋಪಿಸಿದರು.

ಜಂಟಿ ಸುದ್ದಿಗೋಷ್ಠಿಯಲ್ಲಿ ಕೃಷ್ಣ ಬೈರೇಗೌಡ, ಎನ್ ಚೆಲುವರಾಯಸ್ವಾಮಿ, ರಾಮಲಿಂಗಾರೆಡ್ಡಿ
ಪ್ರಜ್ವಲ್ ಪ್ರಕರಣ: ರೇವಣ್ಣ, ಬಾಬಣ್ಣ ಸೇರಿ ಮೂವರ ಬಂಧನ; 3ನೇ ಆರೋಪಿ ಬಗ್ಗೆ ಮಾಹಿತಿ ನೀಡಿದರೆ ತನಿಖೆ ಮೇಲೆ ಪರಿಣಾಮ- ಪರಮೇಶ್ವರ

ಪ್ರಕರಣದ ಆರೋಪಿಯ ಬಳಿ ಕೆಲಸ ಮಾಡುತ್ತಿದ್ದವನು ಬಿಜೆಪಿ ನಾಯಕನಿಗೆ ಪೆನ್ ಡ್ರೈವ್ ಕೊಟ್ಟರು. ಆತನಿಗೆ ಸಾಕ್ಷಿ ಕೊಟ್ಟು ಒಂದು ವರ್ಷದ ಮೇಲಾಗಿದೆ. ಇದನ್ನು ತೆಗೆದುಕೊಂಡವನು ವಕೀಲ ನ್ಯಾಯದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವವನು ಏಕೆ ಇದನ್ನು ಮೊದಲೇ ಪೊಲೀಸರ ಗಮನಕ್ಕೆ ತರಲಿಲ್ಲ. ಆತ ಕೊಟ್ಟಿದಿದ್ದರೇ ಬೀದಿಯಲ್ಲಿ ಯಾರ ಮಾನವೂ ಹರಾಜಾಗುತ್ತಿರಲಿಲ್ಲ. ಪೊಲೀಸರ ಮೇಲೆ ನಂಬಿಕೆ ಇಲ್ಲದಿದ್ದರೆ ಮುಖ್ಯನ್ಯಾಯಮೂರ್ತಿಗಳಿಗೆ ನೀಡಬಹುದಿತ್ತು. ಅಪರಾಧವನ್ನು ಮುಚ್ಚಿಟ್ಟಿರುವುದು ಕೂಡ ಅಷ್ಟೇ ಅಪರಾಧ ಎಂದರು.

“ಪ್ರಹ್ಲಾದ್ ಜೋಶಿ, ಮೋದಿ ಅವರು ಜೆಡಿಎಸ್ ವಿರುದ್ದ ಮಾತನಾಡಲು ಆಗುತ್ತಿಲ್ಲ. ಅದಕ್ಕಾಗಿ, ಕಾಂಗ್ರೆಸ್ ವಿರುದ್ದ ಮಾತನಾಡುತ್ತಿದ್ದಾರೆ. ಲೈಂಗಿಕ ದೌರ್ಜನ್ಯ ನಡೆಸು ಎಂದು ಕಾಂಗ್ರೆಸ್ ಹೇಳಿತ್ತೇ? ಅರವತ್ತು ವರ್ಷದ ಮಹಿಳೆಯನ್ನು ಅಪಹರಣ ಮಾಡಲು ಕಾಂಗ್ರೆಸ್ ಹೇಳಿತ್ತೇ? ಬಿಜೆಪಿಗರು ಅಪಹರಣ ಮಾಡಿದ್ದೂ ಸುಳ್ಳು ಎಂದು ಹೇಳುತ್ತಾರೆ” ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com