IPL 2024: ನೀತಿ ಸಂಹಿತೆ ಉಲ್ಲಂಘನೆ; ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್‌ಗೆ ಭಾರಿ ದಂಡ!

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧದ ಪಂದ್ಯದಲ್ಲಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ರಾಜಸ್ಥಾನ ರಾಯಲ್ಸ್ (ಆರ್‌ಆರ್) ತಂಡದ ನಾಯಕ ಸಂಜು ಸ್ಯಾಮ್ಸನ್ ಅವರಿಗೆ ಪಂದ್ಯ ಶುಲ್ಕದ ಶೇ 30ರಷ್ಟು ದಂಡ ವಿಧಿಸಲಾಗಿದೆ.
ಸಂಜು ಸ್ಯಾಮ್ಸನ್‌
ಸಂಜು ಸ್ಯಾಮ್ಸನ್‌

ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧದ ಪಂದ್ಯದಲ್ಲಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ರಾಜಸ್ಥಾನ ರಾಯಲ್ಸ್ (ಆರ್‌ಆರ್) ತಂಡದ ನಾಯಕ ಸಂಜು ಸ್ಯಾಮ್ಸನ್ ಅವರಿಗೆ ಪಂದ್ಯ ಶುಲ್ಕದ ಶೇ 30ರಷ್ಟು ದಂಡ ವಿಧಿಸಲಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ನೀಡಿದ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಮೊದಲ ಓವರ್​​ನಲ್ಲೇ ಔಟಾದ ನಂತರ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಸಂಜು ಸ್ಯಾಮ್ಸನ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಸತತ ವಿಕೆಟ್ ಪತನದ ನಡುವೆಯೂ ಏಕಾಂಗಿ ಹೋರಾಟ ನಡೆಸಿದರು. ಆದರೆ, ಮುಕೇಶ್ ಕುಮಾರ್​ ಅವರ ಬೌಲಿಂಗ್‌ನಲ್ಲಿ 15.4 ಓವರ್‌ನ ಎಸೆತದಲ್ಲಿ ಸ್ಯಾಮ್ಸನ್​ ಶಾಯ್ ಹೋಪ್​ಗೆ ಕ್ಯಾಚ್​ ನೀಡಿದರು.

ಕ್ಯಾಚ್ ತೆಗೆದುಕೊಳ್ಳುವಾಗ ಹೋಪ್ ಅವರ ಕಾಲುಗಳು ಬೌಂಡರಿ ಗೆರೆಗೆ ತಾಗಿವೆಯೇ ಎಂಬುದು ಪ್ರಶ್ನೆಯಾಗಿತ್ತು. ಥರ್ಡ್ ಅಂಪೈರ್ ಸ್ಯಾಮ್ಸನ್ ಔಟ್ ಎಂದು ತೀರ್ಪು ನೀಡಿದರು.

46 ಎಸೆತಗಳಲ್ಲಿ 8 ಬೌಂಡರಿ, 6 ಸಿಕ್ಸರ್ ಸಹಿತ 86 ರನ್ ಸಿಡಿಸಿದ್ದ ಸಂಜುಗೆ ಅವರನ್ನು ಔಟ್ ಎಂದು ಹೇಳಿದ್ದು ಐಪಿಎಲ್​ನಲ್ಲಿ ವಿವಾದಕ್ಕೆ ಕಾರಣವಾಯಿತು. ಅಂಪೈರ್​​ಗಳ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸ್ಯಾಮ್ಸನ್ ಅಂಪೈರ್‌ಗಳ ಜೊತೆ ವಾಗ್ವಾದ ನಡೆಸಿದರು. ಸರಿಯಾಗಿ ಪರಿಶೀಲನೆ ನಡೆಸದೆ ಔಟ್ ನೀಡಿವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಕ್ಯಾಚ್ ಹಿಡಿಯುವ ಅವಧಿಯಲ್ಲಿ ಹೋಪ್​ ಕಾಲು ಬೌಂಡರಿ ಗೆರೆಗೆ ತಾಗಿರುವುದು ರಿಪ್ಲೇನಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಆದರೂ ಔಟ್ ನೀಡಿರುವುದು ಅಚ್ಚರಿ ಮೂಡಿಸಿದೆ.

ಸಂಜು ಸ್ಯಾಮ್ಸನ್‌
RR vs GT: ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್‌ಗೆ 12 ಲಕ್ಷ ರೂ. ದಂಡ!

ಔಟ್ ನೀಡಿದ ಬಳಿಕ ಆರಂಭದಲ್ಲಿ ಪೆವಿಲಿಯನ್ ಕಡೆಗೆ ನಡೆಯಲು ಪ್ರಾರಂಭಿಸಿದ ಸಂಜು, ಮತ್ತೆ ಹಿಂತಿರುಗಿ ಆನ್-ಫೀಲ್ಡ್ ಅಂಪೈರ್‌ಗಳೊಂದಿಗೆ ವಾಗ್ವಾದ ನಡೆಸಿದರು.

'ಐಪಿಎಲ್‌ನ ನೀತಿ ಸಂಹಿತೆಯ ಆರ್ಟಿಕಲ್ 2.8 ರ ಅಡಿಯಲ್ಲಿ ಸ್ಯಾಮ್ಸನ್ ಮೊದಲನೇ ಹಂತದ ಅಪರಾಧ ಎಸಗಿದ್ದಾರೆ. ಪಂದ್ಯದ ತೀರ್ಪುಗಾರರ ನಿರ್ಧಾರವು ಅಂತಿಮವಾಗಿದ್ದು, ನೀತಿ ಸಂಹಿತೆಯ ಹಂತ 1ರ ಉಲ್ಲಂಘನೆಗಾಗಿ ಸಂಜು ಸ್ಯಾಮ್ಸನ್ ಅವರಿಗೆ ದಂಡ ವಿಧಿಸಲಾಗಿದೆ' ಎಂದು ಐಪಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಏಪ್ರಿಲ್ 10 ರಂದು, ಜೈಪುರದಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಸ್ಲೋ ಓವರ್ ರೇಟ್ ಕಾಯ್ದುಕೊಂಡ ನಂತರ ಸ್ಯಾಮ್ಸನ್‌ಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com