• Tag results for ದಂಡ

ಮೃತ ಕುಟುಂಬಕ್ಕೆ ಉದ್ಯಮಿಯಿಂದ 1 ಕೋಟಿ ರೂ. ಪರಿಹಾರ: ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಕೇರಳ ವ್ಯಕ್ತಿಗೆ ಪುನರ್ಜನ್ಮ!

ಕಾರು ಅಪಘಾತದ ವೇಳೆ ಮಗುವಿನ ಸಾವಿಗೆ ಕಾರಣನಾಗಿದ್ದ ಚಾಲಕ ಕೇರಳ ಮೂಲದ ಬೆಕ್ಸ್ ಕೃಷ್ಣನ್ ಗೆ ಯುಎಇ ಸುಪ್ರೀಂ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಇದೀಗ ಎನ್‌ಆರ್‌ಐ ಉದ್ಯಮಿ ಎಂಎ ಯೂಸುಫ್ ಸಹಾಯಹಸ್ತ ಚಾಚಿದ್ದರಿಂದ ಕೃಷ್ಣನ್ ಗೆ ಪುನರ್ಜನ್ಮ ಸಿಕ್ಕಿದೆ.

published on : 3rd June 2021

ಸಾಮೂಹಿಕ ಲಸಿಕೆ ಪ್ರಶ್ನಿಸಿದ್ದ ನಿವೃತ್ತ ಸೇನಾಧಿಕಾರಿಗೆ ರೂ.50 ಸಾವಿರ ದಂಡ ವಿಧಿಸಿದ ಹೈಕೋರ್ಟ್

ಕ್ಲಿನಿಕಲ್ ಟ್ರಯಲ್ ಪೂರ್ಣಗೊಳಿಸದೆ ಕೊರೋನಾ ಲಸಿಕೆ ನೀಡುತ್ತಿರುವುದನ್ನು ಸ್ಥಗಿತಗೊಳಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್, ಅರ್ಜಿದಾರರಿಗೆ ರೂ.50 ಸಾವಿರ ದಂಡ ವಿಧಿಸಿ ಆದೇಶಿಸಿದೆ. 

published on : 27th May 2021

ಬಂಗಾಳ ಚುನಾವಣೆ: ಕೋವಿಡ್ ಸುರಕ್ಷತಾ ಮಾನದಂಡ ಉಲ್ಲಂಘನೆ ಬಳಿಕ ರೋಡ್ ಶೋ, ದೊಡ್ಡ ರ್ಯಾಲಿಗಳಿಗೆ ಇಸಿ ನಿಷೇಧ!

ರಾಜಕೀಯ ಪಕ್ಷಗಳು ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಕೋವಿಡ್ -19 ಮಾನದಂಡಗಳ ತೀವ್ರ ಉಲ್ಲಂಘನೆ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಎಲ್ಲಾ ರೋಡ್ ಶೋ, ಮೆರವಣಿಗೆ ಮತ್ತು ಬೈಕ್ ರ್ಯಾಲಿಗಳನ್ನು ಚುನಾವಣಾ ಆಯೋಗ ನಿಷೇಧಿಸಿದೆ.

published on : 22nd April 2021

ಮಿಸ್ಟರಿ ಥ್ರಿಲ್ಲರ್ ಕಥಾನಕಕ್ಕಾಗಿ ಮತ್ತೊಮ್ಮೆ ಒಂದಾದ 'ದಂಡುಪಾಳ್ಯ' ಶ್ರೀನಿವಾಸ್ ರಾಜು, ಪೂಜಾ ಗಾಂಧಿ!

ನಟಿ ಪೂಜಾ ಗಾಂಧಿ ತಮ್ಮ ಚೊಚ್ಚಲ ಚಿತ್ರ "ಮುಂಗಾರು ಮಳೆ" ಜತೆಗೆ ಕನ್ನಡಿಗರ ಮನೆ ಮಾತಾಗಿದ್ದರು. ನಂತರ, ನಿರ್ದೇಶಕ ಶ್ರೀನಿವಾಸ್ ರಾಜು ಅವರ "ದಂಡುಪಾಳ್ಯ" ಸರಣಿಗಳಲ್ಲಿ ಅವರ ದಿಟ್ಟ ಪಾತ್ರದೊಂದಿಗೆ, ಅವರು ಮತ್ತೆ ಖ್ಯಾತಿಗೆ ಏರಿದರು

published on : 22nd April 2021

ಭಾನುವಾರ ಲಾಕ್‌ಡೌನ್, 2ನೇ ಬಾರಿ ಮಾಸ್ಕ್ ಧರಿಸದಿದ್ದರೆ ರೂ. 10,000 ದಂಡ: ಉತ್ತರ ಪ್ರದೇಶ ಸರ್ಕಾರ ಘೋಷಣೆ

ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾವೈರಸ್ ಪ್ರಕರಣಗಳ ಹಿನ್ನೆಲೆ ಉತ್ತರ ಪ್ರದೇಶ ಸರ್ಕಾರವು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಭಾನುವಾರ ಮಾರುಕಟ್ಟೆಗಳನ್ನು ಮುಚ್ಚಲು ಹೇಳಿದ್ದು "ಸಂಡೇ ಲಾಕ್ ಡೌನ್" ಘೋಷಿಸಿದೆ. 

published on : 16th April 2021

ಕೇವಲ 5 ದಿನಗಳಲ್ಲಿ 231 ಕೇಸ್ ದಾಖಲಿಸಿ, 58 ಸಾವಿರ ರೂ. ದಂಡ ಸಂಗ್ರಹಿಸಿದ ಬಿಎಂಆರ್ ಸಿಎಲ್! ಯಾಕೆ ಗೊತ್ತಾ?

ಮೆಟ್ರೋ ರೈಲುಗಳಲ್ಲಿ ಸರಿಯಾಗಿ ಮಾಸ್ಕ್ ಧರಿಸುವಿಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಬಗ್ಗೆ ಎರಡು ವಾರಗಳ ಅರಿವು ಮೂಡಿಸುವ ಕಾರ್ಯಕ್ರಮದ ನಂತರ, ನಿಯಮ ಉಲ್ಲಂಘಿಸುವವರ ವಿರುದ್ಧ ದೂರು ದಾಖಲಿಸಿಕೊಳ್ಳಲು ಬಿಎಂಆರ್ ಸಿಎಲ್ ಆರಂಭಿಸಿದೆ.

published on : 12th April 2021

ಹೆಲ್ಮೆಟ್ ಇಲ್ಲದೇ ಮೊಬೈಲ್ ನಲ್ಲಿ ಮಾತನಾಡಿಕೊಂಡು ಮೂವರ ಸವಾರಿ: ಮಹಿಳಾ ಪೇದೆಗಳಿಗೆ ಬಿತ್ತು ದಂಡ!

ಹೆಲ್ಮಟ್ ಧರಿಸದೇ ಮೊಬೈಲ್ ನಲ್ಲಿ ಮಾತನಾಡಿಕೊಂಡು ತ್ರಿಬಲ್ ರೈಡಿಂಗ್ ಹೋಗುತ್ತಿದ್ದ ಮೂವರು ಮಹಿಳಾ ಪೇದೆಗಳಿಗೆ 3,300 ರು ದಂಡ ವಿಧಿಸಲಾಗಿದೆ.

published on : 12th April 2021

ಕೋವಿಡ್-19 ಮಾರ್ಗಸೂಚಿ ಉಲ್ಲಂಘನೆ: 2.64 ಲಕ್ಷ ರೂ. ದಂಡ ವಸೂಲಿ

ಕೋವಿಡ್-19 ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ದ ಪೂರ್ವ ವಿಭಾಗದ ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಕಳೆದ 48 ಗಂಟೆಗಳಲ್ಲಿ ಒಟ್ಟು 1058 ದಂಡ ವಸೂಲಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. 

published on : 9th April 2021

ಅಂಬಾನಿ ಸಹೋದರರು, ಕುಟುಂಬಸ್ಥರಿಗೆ ಸೆಬಿಯಿಂದ 25 ಕೋಟಿ ರೂ. ದಂಡ!

ಎರಡು ದಶಕಗಳ ಹಿಂದಿನ ಪ್ರಕರಣವೊಂದರಲ್ಲಿ ಮುಕೇಶ್ ಅಂಬಾನಿ, ಅನಿಲ್ ಅಂಬಾನಿ, ಅವರ ಹೆಂಡತಿಯರು ಹಾಗೂ ಇತರ ಕೆಲ ಕುಟುಂಬ ಸದಸ್ಯರಿಗೆ  ಸೆಬಿ 25 ಕೋಟಿ ರೂ. ದಂಡವನ್ನು ಸೆಬಿ ವಿಧಿಸಿದೆ. ಮುಕೇಶ್ ಮತ್ತು ಅನಿಲ್ ಅಂಬಾನಿ ಅಲ್ಲದೇ, ನೀತಾ ಅಂಬಾನಿ, ಟಿನಾ ಅಂಬಾನಿ, ಕೆ. ಡಿ. ಅಂಬಾನಿ ಮತ್ತಿತರ ಕುಟುಂಬ ಸದಸ್ಯರಿಗೂ ದಂಡ ವಿಧಿಸಲಾಗಿದೆ.

published on : 8th April 2021

42 ರೂ. ಹೆಚ್ಚುವರಿ ಹಣ ಪಡೆದ ಬಾರ್ ಮಾಲೀಕನಿಗೆ ದುಬಾರಿ ದಂಡ!

ಎಮ್‌ಆರ್‌ಪಿಗಿಂತ 42 ರೂ ಹೆಚ್ಚುವರಿ ಶುಲ್ಕ ವಿಧಿಸಿದ್ದಕ್ಕಾಗಿ ಮದ್ಯದಂಗಡಿ ಮಾಲೀಕರಿಗೆ ಗ್ರಾಹಕ ವಿವಾದ ಪರಿಹಾರ ಆಯೋಗ ದುಬಾರಿ ದಂಡ ವಿಧಿಸಿ ಆದೇಶ ಹೊರಡಿಸಿದೆ.

published on : 2nd April 2021

ಸರಿಯಾಗಿ ಮಾಸ್ಕ್ ಧರಿಸದವರ ವಿರುದ್ಧ ದಂಡಾಸ್ತ್ರ ಪ್ರಯೋಗಕ್ಕೆ ನಮ್ಮ ಮೆಟ್ರೋ ಮುಂದು: 250 ರೂ. ದಂಡ!

ಮೆಟ್ರೋ ರೈಲು ಹಾಗೂ ನಿಲ್ದಾಣಕ್ಕೆ ಬರುವ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಹಾಗೂ ಸೂಕ್ತ ರೀತಿಯಲ್ಲಿ ಮಾಸ್ಕ್ ಧರಿಸದೇ ಇರುವ ಕುರಿತು ಸಾಕಷ್ಟು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಎಂಆರ್'ಸಿಎಲ್, ಇದೀಗ ನಿಯಮ ಉಲ್ಲಂಘಿಸುವವರ ವಿರುದ್ಧ ದಂಡಾಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. 

published on : 1st April 2021

ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಭೀತಿ: ಸೋಂಕು ತಡೆಗೆ ದುಬಾರಿ 'ದಂಡಾಸ್ತ್ರ' ಪ್ರಯೋಗ, ಬಿಗಿ ಮಾರ್ಗಸೂಚಿ ಪ್ರಕಟಣೆ!

ರಾಜ್ಯದಲ್ಲಿ ದಿನ ಕಳೆದಂತೆ ಮಹಾಮಾರಿ ಕೊರೋನಾ ವೈರಸ್ ಆರ್ಭಟ ಹೆಚ್ಚಾಗುತ್ತಿದ್ದು, ಕೊರೋನಾ 2ನೇ ಅಲೆಯ ಲಕ್ಷಣಗಳು ಸ್ಪಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಕೊರೋನಾ ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ದುಬಾರಿ ದಂಡಾಸ್ತ್ರ ಪ್ರಯೋಗಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. 

published on : 25th March 2021

ಚಲಿಸುತ್ತಿದ್ದ ದ್ವಿಚಕ್ರ ವಾಹನ ಅಡ್ಡಗಟ್ಟಿದ ಪೊಲೀಸ್; ತಪ್ಪಿಸಿಕೊಳ್ಳುವ ಭರದಲ್ಲಿ ಬೈಕ್ ಸವಾರ ಸಾವು; ಪೊಲೀಸರಿಗೆ ಥಳಿಸಿದ ಗ್ರಾಮಸ್ಥರು

ಸಂಚಾರ ಪೊಲೀಸರ ತಪಾಸಣೆ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳುವ ವೇಳೆ ಬೈಕಿನಿಂದ ಬಿದ್ದ ಬೈಕ್ ಸವಾರನ ಮೇಲೆ ಟಿಪ್ಪರ್ ಹರಿದು ಆತ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮೈಸೂರಿನ ಹಿನಕಲ್ ರಿಂಗ್ ರಸ್ತೆಯ ಆರ್‌ಎಂಪಿ ವೃತ್ತದ ಬಳಿ ಸೋಮವಾರ ಸಂಜೆ ನಡೆದಿದೆ.

published on : 23rd March 2021

ಎರಡನೇ ಟಿ20: ನಿಧಾನಗತಿಯ ಬೌಲಿಂಗ್ ಮಾಡಿದ್ದ ಭಾರತಕ್ಕೆ ದಂಡ

ಎರಡನೇ ಟಿ20 ಪಂದ್ಯವನ್ನು ಗೆದ್ದ ಭಾರತ, ಐದು ಪಂದ್ಯಗಳ ಸರಣಿಯಲ್ಲಿ ಒಂದು ಒಂದರಿಂದ ಸಮಬಲ ಸಾಧಿಸಿದೆ. ಆದರೆ ಈ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದಕ್ಕೆ ಭಾರತ ತಂಡಕ್ಕೆ ದಂಡ ವಿಧಿಸಲಾಗಿದೆ.

published on : 16th March 2021

ತನಿಖೆಯ ವೇಳೆ ಗ್ಯಾಜೆಟ್‌ಗಳ ವಶಕ್ಕೆ ಮಾನದಂಡ ರೂಪಿಸಿದ ಹೈಕೋರ್ಟ್

ಕ್ರಿಮಿನಲ್ ಪ್ರಕರಣಗಳ ತನಿಖೆಯ ಭಾಗವಾಗಿ ಶೋಧ ಕಾರ್ಯಾಚರಣೆ ವೇಳೆ ವಶಕ್ಕೆ ಪಡೆಯಲಾಗುವ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್ ಮತ್ತು ಕಂಪ್ಯೂಟರ್‌ಗಳಂತಹ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಮತ್ತು ಇ-ಮೇಲ್ ಖಾತೆಗಳನ್ನು ನಿರ್ವಹಿಸುವಾಗ ಪೊಲೀಸರು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಕರ್ನಾಟಕ ಹೈಕೋರ್ಟ್ ಪ್ರಕಟಿಸಿದೆ. 

published on : 13th March 2021
1 2 3 4 >