• Tag results for fine

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಹಾಕದಿದ್ದರೆ 200 ರೂ ದಂಡ: ಆರೋಗ್ಯ ಸಚಿವ ಬಿ ಶ್ರೀರಾಮುಲು

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ವೈಯಕ್ತಿಕ ಕಾಳಜಿ, ಸುರಕ್ಷತೆ ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.

published on : 29th May 2020

'ಸಿಂಗಂ' ರೀತಿ ಸ್ಟಂಟ್ ಮಾಡಲು ಹೋದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗೆ ಬಿತ್ತು ಭಾರಿ ದಂಡ!

ಅಜಯ್ ದೇವಗನ್ ಅಭಿನಯದ 'ಸಿಂಗಂ' ಚಿತ್ರದಲ್ಲಿನ ಜನಪ್ರಿಯ ಸಾಹಸ ದೃಶ್ಯದಂತೆ ಸ್ಟಂಟ್ ಮಾಡಲು ಹೋಗಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರು ಎಡವಟ್ಟು ಮಾಡಿಕೊಂಡಿದ್ದಾರೆ. 

published on : 12th May 2020

ಬೆಂಗಳೂರು: ಮಾಸ್ಕ್ ಧರಿಸದಿದ್ದಕ್ಕೆ ಒಂದೇ ದಿನದಲ್ಲಿ ರೂ.51 ಸಾವಿರ ದಂಡ!

ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸಿದವರಿಂದ ಬಿಬಿಎಂಪಿ ಮಾರ್ಷಲ್ ಗಳು ಶನಿವಾರ ಒಂದೇ ದಿನ ಬರೋಬ್ಬರಿ ರೂ.51 ಸಾವಿರ ದಂಡ ವಸೂಲಿ ಮಾಡಿದ್ದಾರೆ. 

published on : 3rd May 2020

ಮಾಸ್ಕ್ ಧರಿಸದಿದ್ದವರಿಗೆ ಭಾರೀ ದಂಡ: ಮೊದಲ ದಿನವೇ ರೂ.2,600 ದಂಡ ವಸೂಲಿ ಮಾಡಿದ ಅಧಿಕಾರಿಗಳು

ಕೊರೋನಾ ವೈರಸ್ ಆರ್ಭಟ ರಾಜ್ಯದಲ್ಲಿ ಹೆಚ್ಚಾಗುತ್ತಿದ್ದು, ಈ ನಡುವೆ ಮಾಸ್ಕ್ ಧರಿಸದೇ ರಸ್ತೆಗಳಲ್ಲಿ ಓಡಾಡುವ ಸಾರ್ವಜನಿಕರಿಗೆ ಬಿಬಿಎಂಪಿ ಭಾರಿ ದಂಡ ವಿಧಿಸುತ್ತಿದೆ. ಈಗಾಗಲೇ ಕಾರ್ಯಾಚರಣೆಯನ್ನು ಆರಂಭಿಸಿರುವ ಬಿಬಿಎಂಪಿ ಅಧಿಕಾರಿಗಳು ಮೊದಲ ದಿನವೇ ರೂ.2,600 ದಂಡ ವಸೂಲಿ ಮಾಡಿದ್ದಾರೆ. 

published on : 2nd May 2020

ಶಿವಮೊಗ್ಗ: ಕಂಡಕಂಡಲ್ಲಿ ಉಗಿದರೆ ಭಾರೀ ದಂಡ!

ಎಲ್ಲೆಂದರಲ್ಲಿ ಉಗಿಯುವವರು, ಮಾಸ್ಕ್‌ ಹಾಕದೆ ನಗರದಾದ್ಯಂತ ಓಡಾಡುತ್ತಿರುವವರಿಗೆ ಈಗ ಮಹಾನಗರ ಪಾಲಿಕೆ ಬಿಸಿ ಮುಟ್ಟಿಸುತ್ತಿದೆ. ದಿಢೀರ್‌ ಕಾರ್ಯಾಚರಣೆ ನಡೆಸಿದ ಪಾಲಿಕೆ ಅಧಿಕಾರಿಗಳು ರಸ್ತೆಯಲ್ಲಿ ಉಗುಳಿದವರಿಗೆ ದಂಡ ಹಾಕಿದ್ದಾರೆ

published on : 30th April 2020

ಲಾಕ್‌ಡೌನ್‌ ನಿಯಮ ಉಲ್ಲಂಘನೆ ಮಾಡಿದ ಖ್ಯಾತ ಟೀಂ ಇಂಡಿಯಾ ಆಟಗಾರನಿಗೆ 500 ರು. ದಂಡ!

ಕೊರೊನಾ ವೈರಸ್‌ ಇಂದು ವಿಶ್ವದಾದ್ಯಂತ ಹಬ್ಬಿದ್ದು ಸೋಂಕು ಹೆಚ್ಚು ಹರಡದಂತೆ ತಡೆಯುವ ಉದ್ದೇಶದಿಂದ ಇಂದು ಬಹುತೇಕ ಎಲ್ಲ ರಾಷ್ಟ್ರಗಳು ಲಾಕ್‌ಡೌನ್‌ ಮೊರೆ ಹೋಗಿವೆ. ಭಾರತದಲ್ಲೂ ಏಪ್ರಿಲ್‌ 14ರವರೆಗೆ 21 ದಿನಗಳ ಲಾಕ್‌ಡೌನ್‌ ಜಾರಿಯಲ್ಲಿದೆ. ಇನ್ನು ಈ ಲಾಕ್‌ಡೌನ್‌ ಅವಧಿಯನ್ನು ಮುಂದಿನ 2 ತಿಂಗಳವರೆಗೆ ವಿಸ್ತರಿಸುವ ಕುರಿತಾಗಿಯೂ ಚಿಂತನೆ ನಡೆದಿದೆ.  

published on : 10th April 2020

ವಾರ್ಡ್ ಮರು ವಿಂಗಡಣೆ, ಮೀಸಲು ಪಟ್ಟಿ ಒದಗಿಸದಿದ್ದರೆ ದಿನಕ್ಕೆ ರೂ.5 ಲಕ್ಷ ದಂಡ: ರಾಜ್ಯ ಸರ್ಕಾರಕ್ಕೆ 'ಹೈ' ಎಚ್ಚರಿಕೆ

ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಮಾ.31ರೊಳಗೆ ವಾರ್ಡ್ ಮರು ವಿಂಗಡಣೆ ಹಾಗೂ ಮೀಸಲು ಪಟ್ಟಿಯನ್ನು ಒದಗಿಸದಿದ್ದರೆ ದಿನಕ್ಕೆ ರೂ.5 ಲಕ್ಷ ದಂಡ ವಿಧಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಹೈಕೋರ್ಟ್ ಶುಕ್ರವಾರ ಎಚ್ಚರಿಕೆ ನೀಡಿದೆ. 

published on : 14th March 2020

ಅಕ್ರಮ ಗಣಿಗಾರಿಕೆ: ಮಂಡ್ಯ ಜಿಪಂ ಸದಸ್ಯನಿಗೆ ೧೧ ಕೋಟಿ ರೂ. ದಂಡ ವಿಧಿಸಿದ ಗಣಿ ಇಲಾಖೆ

ಅನಧಿಕೃತ ಕಲ್ಲು ಗಣಿಗಾರಿಕೆ ಮತ್ತು ಸಾಗಾಣಿಕೆ ಮಾಡಿರುವ ಆರೋಪದ ಮೇಲೆ ಮಂಡ್ಯ ಜಿಲ್ಲಾಪಂಚಾಯಿತಿ ಸದಸ್ಯರೊಬ್ಬರಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಸುಮಾರು ೧೧ ಕೋಟಿಗೂ ಹೆಚ್ಚುದಂಡ ವಿಧಿಸಿದೆ.!

published on : 13th March 2020

ಟಿವಿ ಸೆಟ್ ಗಳು, ಪವರ್ ಬ್ಯಾಂಕ್ ಗಳ ಮೇಲಿನ ಜಿಎಸ್ ಟಿ ಪ್ರಯೋಜನಗಳನ್ನು ತಲುಪಿಸದ ಸ್ಯಾಮ್ ಸಂಗ್ ಗೆ 37ಲಕ್ಷ  ದಂಡ!

ಟೆಲಿವಿಷನ್ ಸೆಟ್‌ಗಳು ಮತ್ತು ಪವರ್ ಬ್ಯಾಂಕುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಡಿತದ ಪ್ರಯೋಜನಗಳನ್ನು ಗ್ರಾಹಕರಿಗೆ ತಲುಪಿಸದ ಕಾರಣಕ್ಕಾಗಿ ಸ್ಯಾಮ್‌ಸಂಗ್ ಇಂಡಿಯಾ ಕಂಪನಿಗೆ ರಾಷ್ಟ್ರೀಯ ಲಾಭೋದ್ದೇಶ ವಿರೋಧಿ ಪ್ರಾಧಿಕಾರ (ಎನ್‌ಎಎ) 37.85 ಲಕ್ಷ ರೂ. ದಂಡವನ್ನು ವಿಧಿಸಿದೆ.

published on : 3rd March 2020

ಮಕ್ಕಳು ಕನ್ನಡ ಮಾತನಾಡಿದ್ರೆ ದಂಡ: ರಾಜ್ಯದ ಈ ಶಾಲೆಯ ಸುತ್ತೋಲೆಗೆ ಪ್ರಾಧಿಕಾರ ಆಕ್ಷೇಪ

ನಗರದಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಮಕ್ಕಳು ಕನ್ನಡ ಮಾತನಾಡಿದರೆ ದಂಡ ವಿಧಿಸಲು ಶಾಲೆಯ ಆಡಳಿತ ಮಂಡನಿ ನಿರ್ಧಾರ ಕೈಗೊಂಡಿದ್ದು, ಈ ಕುರಿತು ಸುತ್ತೋಲೆಯನ್ನು ಹೊರಡಿಸಿದೆ. ಶಾಲೆಯ ಈ ಕ್ರಮಕ್ಕೆ ಇದೀಗ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಕ್ಷೇಪ ವ್ಯಕ್ತಪಡಿಸಿದೆ. 

published on : 14th February 2020

ಟ್ರಾಫಿಕ್ ಉಲ್ಲಂಘನೆ: ದಂಡವನ್ನು ಮತ್ತಷ್ಟು ಏರಿಕೆ ಮಾಡಲು ಸರ್ಕಾರ ಚಿಂತನೆ

ರಸ್ತೆ ನಿಯಮ ಉಲ್ಲಂಘನೆ ಮಾಡುವವರ ಮೇಲೆ ಹೇರಲಾಗುವ ದಂಡವನ್ನು ಮತ್ತಷ್ಟು ಏರಿಕೆ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. 

published on : 13th February 2020

ಕಿವೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲೂ ನಿಧಾನಗತಿಯ ಬೌಲಿಂಗ್, ಭಾರತಕ್ಕೆ ದಂಡ

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ದಾಳಿ ನಡೆಸಿ ದಂಡನೆಗೆ ಒಳಗಾಗಿದೆ. ಪರಿಣಾಮ ಪಂದ್ಯದ ಸಂಭಾವನೆಯ ಪ್ರತಿಷತ 80 ರಷ್ಟು ದಂಡ ರೂಪದಲ್ಲಿ ಕಟ್ಟಬೇಕಿದೆ

published on : 5th February 2020

ಏಪ್ರಿಲ್ 1ರಿಂದ ಎನ್'ಪಿಆರ್ ಆರಂಭ: ತಪ್ಪು ಮಾಹಿತಿ ನೀಡಿದವರಿಗೆ ರೂ.1000 ದಂಡ

ಏಪ್ರಿಲ್ 1 ರಿಂದ ದೇಶದಾದ್ಯಂತ ಎನ್'ಪಿಆರ್ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದು, ಪ್ರಕ್ರಿಯೆ ಸಂದರ್ಭದಲ್ಲಿ ಗಣತಿದಾರರಿಗೆ ಜನರು ತಪ್ಪು ಅಥವಾ ಸುಳ್ಳು ಮಾಹಿತಿ ನೀಡುವುದು, ಮಾಹಿತಿ ನೀಡಲು ನಿರಾಕರಿಸುವುದನ್ನು ಮಾಡಿದರೆ ರೂ.1000ಕ ದಂಟ ತೆರಲಾಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

published on : 17th January 2020

ಅಂಕಪಟ್ಟಿ ನೀಡದೇ ಸತಾಯಿಸಿದ ರಾಣಿ ಚೆನ್ನಮ್ಮ ವಿ.ವಿ.ಗೆ ರೂ.1 ಲಕ್ಷ ದಂಡ: ಜಿಲ್ಲಾ ಗ್ರಾಹಕರ ಪರಿಹಾರ ವೇದಿಕೆ ಆದೇಶ

ಪದವಿ ಮುಗಿಸಿದ ವಿದ್ಯಾರ್ಥಿನಿಯೊಬ್ಬಳಿಗೆ ಅಂಕಪಟ್ಟಿ ನೀಡದೇ ರಾಣಿಚೆನ್ನಮ್ಮ ವಿಶ್ವವಿದ್ಯಾಲಯ ಸೇವಾ ನ್ಯೂನತೆ ಎಸಗಿರುವುದರಿಂದ ದೂರುದಾರ ವಿದ್ಯಾರ್ಥಿನಿಗೆ ಪರಿಹಾರ ರೂಪವಾಗಿ 1 ಲಕ್ಷ ರೂ ಹಾಗೂ ಮಾನಸಿಕ ವೇದನೆಗಾಗಿ ಒಂದು ಸಾವಿರ ರೂ ಪರಿಹಾರ ನೀಡಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶ ನೀಡಿದೆ.

published on : 14th January 2020

ಎಂ ಎಂ ಹಿಲ್ಸ್ ರಸ್ತೆಯಲ್ಲಿ ವಾಹನ ನಿಲ್ಲಿಸುವವರಿಗೆ ಸ್ಥಳದಲ್ಲೇ ದಂಡ: ಅರಣ್ಯ ಇಲಾಖೆ ಬಿಗಿ ಕ್ರಮ

ಮಲೆ ಮಹದೇಶ್ವರ ಬೆಟ್ಟಕ್ಕೆ ಸಾಗುವ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸುವುದರ ಮೂಲಕ ನಿಯಮ ಉಲ್ಲಂಘಿಸುವವರಿಗೆ 2 ಸಾವಿರ ರೂಪಾಯಿ ದಂಡ ವಿಧಿಸುವ ಬಿಗಿ ಕ್ರಮವನ್ನು ಅರಣ್ಯ ಇಲಾಖೆ ತೆಗೆದುಕೊಂಡಿದೆ ಎಂದು ಅರಣ್ಯಾಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

published on : 7th January 2020
1 2 3 4 5 6 >