ತೈವಾನ್ ನಲ್ಲಿ ಭೀಕರ ಭೂಕಂಪ; ಹಾನಿ ಅಪಾರ, ಪರಿಸ್ಥಿತಿ ಘೋರ!

Srinivas Rao BV

ತೈವಾನ್ ನಲ್ಲಿ ಏ.03 ರಂದು ಪ್ರಬಲ ಭೂಕಂಪ ಸಂಭವಿಸಿದ್ದು, 25 ವರ್ಷಗಳಲ್ಲೇ ಕಂಡು ಕೇಳರಿಯದ ಪ್ರಮಾಣದ ಭೂಕಂಪ ಇದಾಗಿದೆ.

ಹುವಾಲಿಯನ್‌ನಲ್ಲಿರುವ ಐದು ಅಂತಸ್ತಿನ ಕಟ್ಟಡವು ಹೆಚ್ಚು ಹಾನಿಗೊಳಗಾದಂತೆ ಕಂಡುಬಂದಿದೆ, ಅದರ ಮೊದಲ ಮಹಡಿ ಕುಸಿದಿದೆ ಮತ್ತು ಉಳಿದವು ವಾಲುತ್ತಿದೆ.

ಶಾಲೆಗಳು ತಮ್ಮ ವಿದ್ಯಾರ್ಥಿಗಳನ್ನು ಕ್ರೀಡಾ ಮೈದಾನಗಳಿಗೆ ಸ್ಥಳಾಂತರಿಸಿ, ಅವರನ್ನು ಹಳದಿ ಸುರಕ್ಷತಾ ಹೆಲ್ಮೆಟ್‌ಗಳೊಂದಿಗೆ ಸಜ್ಜುಗೊಳಿಸಿದ್ದವು

23 ಮಿಲಿಯನ್ ಜನರಿರುವ ದ್ವೀಪದಾದ್ಯಂತ ರೈಲು ಸೇವೆಯನ್ನು, ತೈಪೆಯಲ್ಲಿ ಸುರಂಗಮಾರ್ಗ ಸೇವೆಯನ್ನು ಭೂಕಂಪದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಯಿತು. ತೈಪೆಯಲ್ಲಿ ಹೊಸದಾಗಿ ನಿರ್ಮಿಸಲಾದ ನೆಲದ ಮೇಲಿನ ಮಾರ್ಗ ಭಾಗಶಃ ಬೇರ್ಪಟ್ಟಿತ್ತು.

ಇತ್ತೀಚಿನ ವರ್ಷಗಳಲ್ಲಿ ತೈವಾನ್‌ನ ಅತ್ಯಂತ ಭೀಕರವಾದ ಭೂಕಂಪವು ಸೆಪ್ಟೆಂಬರ್ 21, 1999 ರಂದು 7.7 ರ ತೀವ್ರತೆಯೊಂದಿಗೆ ಸಂಭವಿಸಿ, 2,400 ಸಾವುಗಳಿಗೆ ಕಾರಣವಾಗಿತ್ತು, ಆಗ ಸುಮಾರು 100,000 ಜನರು ಗಾಯಗೊಂಡಿದ್ದರು ಮತ್ತು ಸಾವಿರಾರು ಕಟ್ಟಡಗಳನ್ನು ನಾಶವಾಗಿತ್ತು.

ನ್ಯೂ ತೈಪೆ ನಗರದಲ್ಲಿನ ಹಾನಿಗೊಳಗಾದ ಕಟ್ಟಡದಲ್ಲಿ ಬದುಕುಳಿದವರನ್ನು ಹುಡುಕುತ್ತಿರುವ ತುರ್ತು ರಕ್ಷಣಾ ಕಾರ್ಯಾಚರಣೆಯ ಕಾರ್ಯಕರ್ತರು.