Athiya Pregnant? ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಕನ್ನಡಿಗ ಕೆಎಲ್ ರಾಹುಲ್

Vishwanath S

ನಟ ಸುನೀಲ್ ಶೆಟ್ಟಿ ಪ್ರಸ್ತುತ ಮಾಧುರಿ ದೀಕ್ಷಿತ್ ಜೊತೆಗೆ ಜನಪ್ರಿಯ ಡ್ಯಾನ್ಸ್ ರಿಯಾಲಿಟಿ ಶೋ, ಡ್ಯಾನ್ಸ್ ದೀವಾನೆಯಲ್ಲಿ ತೀರ್ಪುಗಾರರಲ್ಲಿ ಒಬ್ಬರಾಗಿದ್ದಾರೆ. ಇತ್ತೀಚಿನ ಸಂಚಿಕೆಯು ಅಜ್ಜಿಯರ ವಿಶೇಷ ವಿಷಯವನ್ನು ಹೊಂದಿತ್ತು.

ವಿಶೇಷ ಸಂಚಿಕೆಯಲ್ಲಿ ಕಾರ್ಯಕ್ರಮದ ನಿರೂಪಕಿ ಭಾರತಿ ಸಿಂಗ್ ಅವರು ಸುನಿಲ್ ಅವರನ್ನು ಅಜ್ಜನಾಗುವಾಗ ಹೇಗೆ ವರ್ತಿಸಬೇಕು ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನಟ, ಹೌದು ಮುಂದಿನ ಸೀಸನ್ ಬಂದಾಗ ವೇದಿಕೆ ಮೇಲೆ ನಾನಾ ತೋರಿಸುತ್ತೇನೆ ಎಂದಿದ್ದಾರೆ.

ಇದೀಗ ಸುನಿಲ್ ಶೆಟ್ಟಿಯ ಹೇಳಿಕೆ ಮಹತ್ವ ಪಡೆದುಕೊಂಡಿದ್ದು, ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆಯೇ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.

ನಾಲ್ಕು ವರ್ಷಗಳ ಡೇಟಿಂಗ್ ನಂತರ, KL ರಾಹುಲ್ 2023ರ ಜನವರಿ 23 ರಂದು ದಕ್ಷಿಣ ಭಾರತದ ಸಂಪ್ರದಾಯದಂತೆ ಅಥಿಯಾ ಶೆಟ್ಟಿಯನ್ನು ವಿವಾಹವಾದರು.

File