ಪ್ರಧಾನಿ ಶೇಕ್ ಹಸೀನಾ ರಾಜಿನಾಮೆ: ಬಾಂಗ್ಲಾದಲ್ಲಿ ಸೇನಾಡಳಿತ, ಹಿಂದೂಗಳ ಕಗ್ಗೋಲೆ
Vishwanath S
ಬಾಂಗ್ಲಾದೇಶದಲ್ಲಿನ ಹಿಂಸಾಚಾರ, ಪ್ರಕ್ಷುಬ್ಧತೆಗೆ ಬೆದರಿದ ಶೇಕ್ ಹಸೀನಾ ಜೀವ ಭಯದಲ್ಲಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಭಾರತಕ್ಕೆ ಪರಾರಿಯಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಸೇನೆಯು ಮಧ್ಯಂತರ ಸರ್ಕಾರವನ್ನು ಸ್ಥಾಪಿಸಲಿದೆ ಎಂದು ಅಲ್ಲಿನ ಸೇನಾ ಮುಖ್ಯಸ್ಥ ವಾಕರ್-ಉಜ್-ಝಮಾನ್ ಘೋಷಿಸಿದರು.
ರಾಜೀನಾಮೆಗೆ ಒತ್ತಡ ಹೆಚ್ಚಾದ ನಂತರ ಶೇಕ್ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ದೇಶದಿಂದ ತೊರೆದು ಢಾಕಾದಿಂದ ಸಿ -130 ಸೇನಾ ವಿಮಾನದಲ್ಲಿ ಭಾರತದ ಗಾಜಿಯಾಬಾದ್‌ನ ಹಿಂಡನ್ ವಾಯುನೆಲೆಗೆ ಬಂದಿಳಿದಿದರು.
ಸೇನೆಯಲ್ಲಿ ನಂಬಿಕೆ ಇಡಿ. ಎಲ್ಲಾ ಹತ್ಯೆಗಳನ್ನು ತನಿಖೆ ಮಾಡುತ್ತೇವೆ ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಗುಂಡಿನ ದಾಳಿಯಲ್ಲಿ ಸೇನೆ ಮತ್ತು ಪೊಲೀಸರು ಪಾಲ್ಗೊಳ್ಳಬಾರದು ಎಂದು ಆದೇಶಿಸಿದ್ದೇನೆ ಎಂದರು.
ಶೇಕ್ ಹಸೀನಾ ಢಾಕಾ ತೊರೆದ ನಂತರ ಅವರ ಅರಮನೆಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರರು, ಪಿಠೋಪಕರಣಗಳು, ಗಾಜುಗಳನ್ನು ಪುಡಿ ಪುಡಿ ಮಾಡಿ, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಮತ್ತು ಹಿಂಸಾಚಾರದಲ್ಲಿ ಈವರೆಗೂ 100ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ.
ಪ್ರಧಾನಿ ಶೇಖ್ ಹಸೀನಾ ರಾಜಿನಾಮೆಗೆ ಆಗ್ರಹಿಸಿ ಬೀದಿಗಿಳಿದ ಲಕ್ಷಾಂತರ ಪ್ರತಿಭಟನಕಾರರು.
ಪ್ರತಿಭಟನಕಾರರು ಸಿಕ್ಕ ಸಿಕ್ಕ ಜಾಗಗಳಲ್ಲಿ ಬೆಂಕಿ ಹಚ್ಚಿದ್ದು ಹಲವು ಕಟ್ಟಡಗಳು ಬೆಂಕಿಗಾಹುತಿಯಾಗಿದೆ.
ಪ್ರತಿಭಟನೆಯ ದೃಶ್ಯ
ರಸ್ತೆಗಿಳಿದ ಪ್ರತಿಭಟನಕಾರರು ಶೇಖ್ ಹಸೀನಾ ವಿರುದ್ಧ ಘೋಷಣೆಗಳನ್ನು ಕೂಗಿದರು.
ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ರಂಗ್‌ಪುರ ಪಟ್ಟಣದ ಪರಶುರಾಮ್ ಪೊಲೀಸ್ ಠಾಣೆ ವ್ಯಾಪ್ತಿಯ 4 ವಾರ್ಡ್‌ನಲ್ಲಿ ಇಬ್ಬರು ಹಿಂದೂಗಳನ್ನು ಇಸ್ಲಾಂ ತೀವ್ರಗಾಮಿಗಳು ಹತ್ಯೆ ಮಾಡಿದ್ದಾರೆ.