ಜೀವ ಭಯದಲ್ಲಿ ಭಾರತಕ್ಕೆ ಶೇಕ್ ಹಸೀನಾ ಪರಾರಿ; ಬಾಂಗ್ಲಾದೇಶ ಸೇನೆ ವಶಕ್ಕೆ!

ಶೇಕ್ ಹಸೀನಾ ಢಾಕಾ ತೊರೆದ ನಂತರ ಅವರ ಅರಮನೆಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರರು, ಪಿಠೋಪಕರಣಗಳು, ಗಾಜುಗಳನ್ನು ಪುಡಿ ಪುಡಿ ಮಾಡಿ, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಢಾಕಾದಲ್ಲಿ ಸ್ಮಾರಕದ ಮೇಲೇರಿದ ಉದ್ರಿಕ್ತ ಪ್ರತಿಭಟನಾಕಾರರು
ಢಾಕಾದಲ್ಲಿ ಸ್ಮಾರಕದ ಮೇಲೇರಿದ ಉದ್ರಿಕ್ತ ಪ್ರತಿಭಟನಾಕಾರರು
Updated on

ಢಾಕಾ: ನೆರೆಯ ಬಾಂಗ್ಲಾದೇಶದಲ್ಲಿನ ಹಿಂಸಾಚಾರ, ಪ್ರಕ್ಷುಬ್ಧತೆಗೆ ಬೆದರಿದ ಶೇಕ್ ಹಸೀನಾ ಜೀವ ಭಯದಲ್ಲಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಭಾರತಕ್ಕೆ ಪರಾರಿಯಾದ ನಂತರ ಸೇನೆಯು ಮಧ್ಯಂತರ ಸರ್ಕಾರವನ್ನು ಸ್ಥಾಪಿಸಲಿದೆ ಎಂದು ಅಲ್ಲಿನ ಸೇನಾ ಮುಖ್ಯಸ್ಥ ವಾಕರ್-ಉಜ್-ಝಮಾನ್ ಘೋಷಿಸಿದ್ದಾರೆ.

ರಾಜೀನಾಮೆಗೆ ಒತ್ತಡ ಹೆಚ್ಚಾದ ನಂತರ ಶೇಕ್ ಹಸೀನಾ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ದೇಶದಿಂದ ಪರಾರಿಯಾಗಿದ್ದಾರೆ. ಢಾಕಾ ತೊರೆದ ನಂತರ ಅವರು ಸಿ -130 ಸೇನಾ ವಿಮಾನದಲ್ಲಿ ಗಾಜಿಯಾಬಾದ್‌ನ ಹಿಂಡನ್ ವಾಯುನೆಲೆಗೆ ಬಂದಿಳಿದಿದ್ದಾರೆ.

ಭಾರತೀಯ ವಾಯುಪಡೆಯ C-17 ಮತ್ತು C-130J ಸೂಪರ್ ಹರ್ಕ್ಯುಲಸ್ ವಿಮಾನ ಹ್ಯಾಂಗರ್‌ಗಳ ಬಳಿ ಅವರ ವಿಮಾನವನ್ನು ನಿಲ್ಲಿಸಲಾಗುತ್ತದೆ. ಆ ವಿಮಾನ ಭಾರತೀಯ ವಾಯುಪ್ರದೇಶದ ಪ್ರವೇಶದಿಂದ ಗಾಜಿಯಾಬಾದ್‌ನ ಹಿಂಡನ್ ವಾಯುನೆಲೆಗೆ ಬರುವವರೆಗೂ ಭಾರತೀಯ ವಾಯುಪಡೆ ಮತ್ತು ಭದ್ರತಾ ಏಜೆನ್ಸಿಗಳು ಮೇಲ್ವಿಚಾರಣೆ ಮಾಡಿವೆ ಎಂದು ಮೂಲಗಳಿಂದ ತಿಳಿದುಬಂದಿದೆ ಎಂದು ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಈ ಮಧ್ಯೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಸೇನಾ ಮುಖ್ಯಸ್ಥ, ವಾಕರ್-ಉಜ್-ಝಮಾನ್, ಶಾಂತಿ ಕಾಪಾಡಲು ಜನತೆಗೆ ಕರೆ ನೀಡಿದರು. ಗಲಭೆ ಸಂಬಂಧಿತ ಪ್ರತಿ ಸಾವಿಗೆ ಕಾರಣವಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕರಿಗೆ ಭರವಸೆ ನೀಡಿದರು. ಇಂದು ರಾತ್ರಿಯೊಳಗೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಮರು ಸ್ಥಾಪಿಸಲು ಮತ್ತು ಪರಿಹಾರವನ್ನು ಕಂಡುಕೊಳ್ಳಲು ಮಿಲಿಟರಿ ಬದ್ಧವಾಗಿದೆ ಎಂದು ಅವರು ಒತ್ತಿ ಹೇಳಿದರು.

"ಸೇನೆಯಲ್ಲಿ ನಂಬಿಕೆ ಇಡಿ. ಎಲ್ಲಾ ಹತ್ಯೆಗಳನ್ನು ತನಿಖೆ ಮಾಡುತ್ತೇವೆ, ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಗುಂಡಿನ ದಾಳಿಯಲ್ಲಿ ಸೇನೆ ಮತ್ತು ಪೊಲೀಸರು ಪಾಲ್ಗೊಳ್ಳಬಾರದು ಎಂದು ಆದೇಶಿಸಿದ್ದೇನೆ. ಈಗ ಶಾಂತವಾಗಿದ್ದು, ನಮಗೆ ನೆರವಾಗಬೇಕಾಗಿರುವುದು ವಿದ್ಯಾರ್ಥಿಗಳ ಕರ್ತವ್ಯ ಎಂದರು.

ಶೇಕ್ ಹಸೀನಾ ಢಾಕಾ ತೊರೆದ ನಂತರ ಅವರ ಅರಮನೆಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರರು, ಪಿಠೋಪಕರಣಗಳು, ಗಾಜುಗಳನ್ನು ಪುಡಿ ಪುಡಿ ಮಾಡಿ, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಇದು ಒಂದು ತಿಂಗಳಿಗೂ ಹೆಚ್ಚು ಕಾಲ ನಡೆದ ಸರ್ಕಾರದ ವಿರೋಧಿ ಪ್ರತಿಭಟನೆಯ ಪರಾಕಾಷ್ಠೆಯಾಗಿದೆ. ಹಸೀನಾ ಅವರ ಅಧಿಕೃತ ನಿವಾಸದ ಗೇಟ್‌ಗಳನ್ನು ಮುರಿದು ಒಳಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸೇನಾ ಮುಖ್ಯಸ್ಥರು, ಬಾಂಗ್ಲಾದೇಶ ರಾಷ್ಟ್ರೀಯ ಪಕ್ಷ (ಬಿಎನ್‌ಪಿ), ಜಾತಿಯಾ ಪಕ್ಷ, ಜಮಾತ್-ಎ-ಇಸ್ಲಾಮಿಯ ಪ್ರತಿನಿಧಿಗಳನ್ನು ಭೇಟಿಯಾಗಿರುವುದಾಗಿ ದೃಢಪಡಿಸಿದರು. ಶಿಕ್ಷಕರಾದ ಅಫಿಸ್ ನಜ್ರುಲ್ ಮತ್ತು ಜೊನಾಯೆತ್ ಸಾಕಿ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು ಎಂದು ಬಾಂಗ್ಲಾದೇಶದ ಮಾಧ್ಯಮ ಮೂಲಗಳನ್ನು ಉಲ್ಲೇಖಿಸಿ ANI ಸುದ್ದಿಸಂಸ್ಥೆ ಈ ಮಾಹಿತಿಯನ್ನು ಹಂಚಿಕೊಂಡಿದೆ.

ಮಧ್ಯಂತರ ಸರ್ಕಾರದ ಸದಸ್ಯರ ಪಟ್ಟಿ
ಮಧ್ಯಂತರ ಸರ್ಕಾರದ ಸದಸ್ಯರ ಪಟ್ಟಿ

ಈಗ ಬಂಗಭಬನ್ ಗೆ (ರಾಷ್ಟ್ರಧ್ಯಕ್ಷರ ಕಚೇರಿ) ಹೋಗುತ್ತೇವೆ. ಮಧ್ಯಂತರ ಸರ್ಕಾರ ರಚನೆ ಕುರಿತು ವಿಸ್ತೃತ ಚರ್ಚೆ ನಡೆಯಲಿದೆ. ವಿದ್ಯಾರ್ಥಿಗಳು ಶಾಂತಚಿತ್ತರಾಗಿರಿ. ದೇಶದಾದ್ಯಂತ ಕರ್ಫ್ಯೂ ವಿಧಿಸುವ ಅಥವಾ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸುವ ಅಗತ್ಯವಿಲ್ಲ ಎಂದು ಸೇನಾ ಮುಖ್ಯಸ್ಥರು ಹೇಳಿದ್ದಾರೆ.

ಢಾಕಾದಲ್ಲಿ ಸ್ಮಾರಕದ ಮೇಲೇರಿದ ಉದ್ರಿಕ್ತ ಪ್ರತಿಭಟನಾಕಾರರು
Bangladesh ತೊರೆದು ಭಾರತಕ್ಕೆ ಶೇಖ್ ಹಸೀನಾ ಪರಾರಿ; ಪ್ರಧಾನಿ ಪ್ಯಾಲೇಸ್ ಗೆ ನುಗ್ಗಿ ಸಿಕ್ಕ ವಸ್ತುಗಳ ಕೊಂಡೊಯ್ದ ಪ್ರತಿಭಟನಾಕಾರರು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com