• Tag results for ಭಾರತ

ಅಖಿಲ ಭಾರತ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಬಿ.ವಿ. ಶ್ರೀನಿವಾಸ್ ನೇಮಕ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬುಧವಾರ ಬಿ.ವಿ.ಶ್ರೀನಿವಾಸ್ ಅವರನ್ನು ಪಕ್ಷದ ಯುವ ವಿಭಾಗವಾದ ಭಾರತೀಯ ಯುವ ಕಾಂಗ್ರೆಸ್ (ಐವೈಸಿ)ನ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ.

published on : 2nd December 2020

ಮೂರನೇ ಏಕದಿನ: ಪಾಂಡ್ಯ, ಜಡೇಜಾ ಅಬ್ಬರದ ಬ್ಯಾಟಿಂಗ್; ಅಸೀಸ್ ಪಡೆಗೆ ಗೆಲ್ಲಲು 303 ರನ್ ಗುರಿ

ಬುಧವಾರ ಇಲ್ಲಿನ ಮನುಕಾ ಓವಲ್‌ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಹಾಗೂ ಅಂತಿಮ ಓಡಿಐ ಪಂದ್ಯದಲ್ಲಿ ಭಾರತ 5 ವಿಕೆಟ್ ನಷ್ಟಕ್ಕೆ302 ರನ್ ಕಲೆಹಾಕುವ ಮೂಲಕ ಅತಿಥೇಯ ಅಸೀಸ್ ಗೆ ಗೆಲ್ಲಲು 303 ರನ್ ಗುರಿ ನೀಡಿದೆ.

published on : 2nd December 2020

ಶ್ವೇತ ಭವನದಿಂದ ನಿರ್ಗಮಿಸುವುದಕ್ಕೂ ಮುನ್ನ ಭಾರತ, ಮೋದಿ ಕುರಿತು ಟ್ರಂಪ್ ಪುತ್ರಿ ಇವಾಂಕ ಹೇಳಿದ್ದೇನು ಅಂದ್ರೆ...

ಜನವರಿ ಯಲ್ಲಿ ಅಮೆರಿಕದ ಅಧ್ಯಕ್ಷರಾಗಿ ಜೋ ಬೈಡನ್ ಅಧಿಕಾರ ವಹಿಸಿಕೊಳ್ಳಲಿದ್ದು, ಹಾಲಿ ಅಧ್ಯಕ್ಷ ಟ್ರಂಪ್ ಶ್ವೇತ ಭವನದಿಂದ ನಿರ್ಗಮಿಸಲಿದ್ದಾರೆ. 

published on : 2nd December 2020

ಭಾರತೀಯ ರೈಲ್ವೆಯಲ್ಲಿ ಬೃಹತ್ 1.4 ಲಕ್ಷ ನೇಮಕಾತಿ ಪ್ರಕ್ರಿಯೆ: ಡಿ.15ರಂದು ಪರೀಕ್ಷೆ ಆರಂಭ 

ಭಾರತೀಯ ರೈಲ್ವೆಯಲ್ಲಿ ಅತಿದೊಡ್ಡ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು 1 ಲಕ್ಷದ 40 ಸಾವಿರದ 640 ಹುದ್ದೆಗಳ ಭರ್ತಿಗೆ ಡಿಸೆಂಬರ್ 15ರಿಂದ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳು ವಿವಿಧ ವರ್ಗಗಳಲ್ಲಿ ನಡೆಯಲಿದೆ. 

published on : 2nd December 2020

ಭಾರತದಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗಳ ಸಂಖ್ಯೆ 4.28 ಲಕ್ಷಕ್ಕೆ ಇಳಿಕೆ

ಭಾರತದಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗಳ ಸಂಖ್ಯೆ 4,28,644ಕ್ಕೆ ಇಳಿದಿದ್ದು, ಸದ್ಯ ಒಟ್ಟು ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳು ಕೇವಲ ಶೇ 4.6ರಷ್ಟಿವೆ.

published on : 2nd December 2020

ಕೋವಿಡ್-19: ದೇಶಾದ್ಯಂತ 24 ಗಂಟೆಗಳಲ್ಲಿ 36,604 ಹೊಸ ಕೇಸ್ ಪತ್ತೆ, ಸೋಂಕಿತರ ಸಂಖ್ಯೆ 95 ಲಕ್ಷ

ದೇಶದಲ್ಲಿಂದು 36,604 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖಅಯೆ 95 ಲಕ್ಷ ಗಡಿಯತ್ತ ಸಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. 

published on : 2nd December 2020

ಆಫ್ರಿಕಾದಲ್ಲಿ ಅತಿದೊಡ್ಡ ಹೂಡಿಕೆ ದೇಶವಾಗಲು ಭಾರತದ ಇಚ್ಛೆ: ದೂರ ಸಂಪರ್ಕ ಕಾರ್ಯದರ್ಶಿ

ತಮ್ಮ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಗಾಢವಾಗಿಸುವ ಹೆಜ್ಜೆಯ ಭಾಗವಾಗಿ ಭಾರತ, ಆಫ್ರಿಕಾ ದೇಶಗಳಲ್ಲಿ ಅತಿದೊಡ್ಡ ಹೂಡಿಕೆ ದೇಶವಾಗುವುದನ್ನು ಬಯಸಿದೆ. ಸದ್ಯ ಭಾರತ, ಆಫ್ರಿಕಾದಲ್ಲಿ ಐದನೇ ಅತಿದೊಡ್ಡ ಹೂಡಿಕೆದಾರರ ರಾಷ್ಟ್ರವಾಗಿದೆ.

published on : 2nd December 2020

‘ಜೀವನ ಪರ್ಯಂತ ಸೇವೆ’ ಬಿಎಸ್‌ಎಫ್ ಧ್ಯೇಯವಾಕ್ಯ: ಕೇಂದ್ರ ಗೃಹ ಸಚಿವ ಅಮಿತ್ ಶಾ

ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗಡಿ ಭದ್ರತಾ ಪಡೆಯ 56ನೇ ಸಂಸ್ಥಾಪನಾ ದಿನದಂದು ಶುಭಾಶಯ ಕೋರಿದ್ದಾರೆ.

published on : 1st December 2020

ರೈತರ ಪ್ರತಿಭಟನೆ ಕುರಿತು ಕೆನಡಾ ಪ್ರಧಾನಿ ಹೇಳಿಕೆ ಅನಪೇಕ್ಷಿತ ಹಾಗೂ ಅನಗತ್ಯ: ಭಾರತ

ಕೇಂದ್ರ ಸರ್ಕಾರದ ನೂತನ ಕೃಷಿ ಕಾಯಿದೆಗಳನ್ನು ವಿರೋಧಿಸಿ ಕಳೆದ ಆರು ದಿನಗಳಿಂದ ಬೃಹತ್ ಪ್ರತಿಭಟನೆ ನಡೆಸುತ್ತಿರುವ ರೈತರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಕೆನಡಾ ಪ್ರಧಾನಿ ಜಸ್ಟೀನ್ ಟ್ರಡೋ ಅವರಿಗೆ ತೀಕ್ಷ್ಮವಾಗಿ ಪ್ರತಿಕ್ರಿಯಿಸಿರುವ ಭಾರತ, ಅವರ ಹೇಳಿಕೆ ಅನಪೇಕ್ಷಿತ ಮತ್ತು ಅನಗತ್ಯ ಎಂದಿದೆ.

published on : 1st December 2020

ಭಾರತದ ರೈತರ ಪ್ರತಿಭಟನೆಗೆ ಕೆನಡಾ ಪ್ರಧಾನಿಯಿಂದಲೂ ಬೆಂಬಲ!

ಶಾಂತಿಯುತ ಪ್ರತಿಭಟನೆಗೆ ಕೆನಡಾ ಎಂದಿಗೂ ಬೆಂಬಲಿಸಲಿದೆ ಎಂದು ಹೇಳುವ ಮೂಲಕ ಭಾರತದಲ್ಲಿ ರೈತರು ಹೊಸ ಕೃಷಿ ಮಸೂದೆಯನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

published on : 1st December 2020

ನಾಳೆ ಭಾರತ-ಆಸ್ಟ್ರೇಲಿಯಾ ನಡುವೆ 3ನೇ ಏಕದಿನ ಪಂದ್ಯ: ಗೆಲುವಿನ ಲಯ ಕಂಡುಕೊಳ್ಳಲು ಟೀಂ ಇಂಡಿಯಾ ತವಕ

ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಬುಧವಾರ (ಡಿಸೆಂಬರ್‌ 2ರಂದು) ಮನುಕಾ ಓವಲ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್‌ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

published on : 1st December 2020

ಕದನ ವಿರಾಮ ಉಲ್ಲಂಘಿಸಿ ಪಾಕ್ ಸೇನೆಯಿಂದ ಗುಂಡಿನ ದಾಳಿ: ಓರ್ವ ಭಾರತೀಯ ಯೋಧ ಹುತಾತ್ಮ

ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್ ಸೇನೆ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ್ದು ಪರಿಣಾಮ ಓರ್ವ ಭಾರತೀಯ ಯೋಧ ಹುತಾತ್ಮರಾಗಿದ್ದಾರೆ. 

published on : 1st December 2020

ಚೀನಾ ತಂಟೆಗೆ ಭಾರತದ ಉತ್ತರ: ಹಡಗು ಧ್ವಂಸಗೊಳಿಸುವ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ!

ಲಡಾಖ್ ನಲ್ಲಿ ಪದೇ ಪದೇ ಕಾಲು ಕೆರೆದು ಖ್ಯಾತೆ ತೆಗೆಯುತ್ತಿರುವ ಚೀನಾ ಸೇನೆಗೆ ತನ್ನ ಕಾರ್ಯದ ಮೂಲಕವೇ ತಿರುಗೇಟು ನೀಡಿರುವ ಭಾರತೀಯ ಸೇನೆ ಯುದ್ಧ ನೌಕೆಗಳನ್ನು ಧ್ವಂಸ ಮಾಡಬಲ್ಲ ಬ್ರಹ್ಮೋಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆ ಮಾಡಿದೆ.

published on : 1st December 2020

ಭಾರತ-ಪಾಕ್ ದ್ವಿಪಕ್ಷೀಯ ಸರಣಿ ಬಗ್ಗೆ ಐಸಿಸಿ ಅಧ್ಯಕ್ಷರಿಂದ ಮಹತ್ವದ ಹೇಳಿಕೆ!

ಹೊಸದಾಗಿ ನೇಮಕಗೊಂಡಿರುವ ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಭಾರತ- ಪಾಕಿಸ್ತಾನ ದ್ವಿಪಕ್ಷೀಯ ಸರಣಿ ಕುರಿತು ಹೇಳಿಕೆ ನೀಡಿದ್ದು, ಕ್ರಿಕೆಟ್ ಗೆ ಸಂಬಂಧಿಸಿದಂತೆ ಭಾರತ-ಪಾಕಿಸ್ತಾನಗಳನ್ನು ಒಗ್ಗೂಡಿಸಲು ಸಾಧ್ಯವಾದಷ್ಟು ಯತ್ನಿಸುವುದಾಗಿ ಹೇಳಿದ್ದಾರೆ.

published on : 1st December 2020

ಕೋವಿಡ್-19: ಭಾರತದಲ್ಲಿ 31,118 ಹೊಸ ಕೊರೋನಾ ಸೋಂಕು ಪ್ರಕರಣಗಳು, 482 ಮಂದಿ ಸಾವು

ಭಾರತದಲ್ಲಿ ಕೊರೋನಾ ಸೋಂಕಿತ ಪ್ರಕರಣ ಮಂಗಳವಾರ 94 ಲಕ್ಷದ 62 ಸಾವಿರದ 810ಕ್ಕೆ ಏರಿಕೆಯಾಗಿದೆ. 31 ಸಾವಿರದ 118 ಹೊಸ ಪ್ರಕರಣಗಳು ಪತ್ತೆಯಾಗಿವೆ.

published on : 1st December 2020
1 2 3 4 5 6 >