• Tag results for india

ಯು.ಕೆ ರೂಪಾಂತರಿಗೆ, ಉತ್ತರ ಭಾರತ, ಡಬ್ಬಲ್ ಮ್ಯುಟೆಂಟ್ ವೈರಾಣುವಿಗೆ ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಹೈರಾಣ!

ಅತಿ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿರುವ ಬ್ರಿಟನ್ ರೂಪಾಂತರಿ ಕೊರೋನಾ ಉತ್ತರ ಭಾರತದಲ್ಲಿ ತಲೆನೋವಾಗಿ ಪರಿಣಮಿಸಿದರೆ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕಗಳು ಡಬಲ್ ಮ್ಯುಟೆಂಟ್ ವೈರಾಣುವಿಗೆ ಹೈರಾಣಾಗಿವೆ. 

published on : 6th May 2021

ಸ್ವಿಸ್ ಆರ್ಚರಿ ವಿಶ್ವಕಪ್: ಕೋವಿಡ್-19 ಉಲ್ಬಣ ಹಿನ್ನಲೆ ಭಾರತೀಯ ಆಟಗಾರರಿಗೆ ವೀಸಾ ನಿರಾಕರಣೆ!

ಸ್ವಿಟ್ಜರ್ಲೆಂಡ್ ನಲ್ಲಿ ಆಯೋಜನೆಯಾಗಿರುವ ಆರ್ಚರಿ ವಿಶ್ವಕಪ್ ನಲ್ಲಿ ಭಾರತದ ಸ್ಪರ್ಧೆಯೇ ಇಲ್ಲದಂತಾಗಿದ್ದು, ಭಾರತದಲ್ಲಿ ಕೋವಿಡ್ ಸೋಂಕು ಉಲ್ಪಣವಾಗಿರುವ ಹಿನ್ನಲೆಯಲ್ಲಿ ಭಾರತೀಯ ಆಟಗಾರರಿಗೆ ವೀಸಾ ನಿರಾಕರಿಸಲಾಗಿದೆ.

published on : 6th May 2021

ಕೋವಿಡ್‌ ಲಸಿಕೆಗಳಿಗೆ ಪೇಟೆಂಟ್ ಮನ್ನಾ: ಭಾರತ, ದಕ್ಷಿಣ ಆಫ್ರಿಕಾ ಪ್ರಸ್ತಾವನೆಗೆ ಅಮೆರಿಕ ಬೆಂಬಲ

ಕೋವಿಡ್ ಲಸಿಕೆಯ ಉತ್ಪಾದನೆ, ಪೂರೈಕೆಯನ್ನು ಹೆಚ್ಚಿಸಲು ಲಸಿಕೆಯ ಪೇಟೆಂಟ್ ಜಾರಿಯನ್ನು ತಾತ್ಕಾಲಿಕವಾಗಿ ಮನ್ನಾ ಮಾಡಬೇಕು ಎಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ವಿಶ್ವ ವ್ಯಾಪಾರ ಸಂಘಟನೆ(ಡಬ್ಲ್ಯೂಟಿಒ)ಗೆ....

published on : 6th May 2021

ಕೋವಿಡ್-19 ಹೆಚ್ಚಳ: ಭಾರತದಿಂದ ಬರುವ ಪ್ರಯಾಣಿಕರಿಗೆ ಶ್ರೀಲಂಕಾ ನಿರ್ಬಂಧ

ಕೋವಿಡ್-19 ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದಿಂದ ಬರುವ ಪ್ರಯಾಣಿಕರಿಗೆ ಶ್ರೀಲಂಕಾ ನಿರ್ಬಂಧ ವಿಧಿಸಿದೆ. 

published on : 6th May 2021

ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಸಹಕರಿಸುವಂತೆ ಭಾರತಕ್ಕೆ ಪಾಕಿಸ್ತಾನ ಕೋರ್ಟ್ ಸೂಚನೆ!

ಮರಣದಂಡನೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಇಸ್ಲಾಮಾಬಾದ್ ಹೈಕೋರ್ಟ್, ಕುಲಭೂಷಣ್ ಜಾಧವ್ ಅವರ ಕಾನೂನು ಪ್ರಕ್ರಿಯೆಗಳಿಗೆ ಸಹಕರಿಸುವಂತೆ ಭಾರತಕ್ಕೆ ಸೂಚಿಸಿದೆ ಮತ್ತು ಪ್ರಕರಣದ ವಿಚಾರಣೆಗೆ ಹಾಜರಾಗುವುದರಿಂದ ಸಾರ್ವಭೌಮತ್ವಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಹೇಳಿದೆ.

published on : 6th May 2021

ದೇಸಿ ಅವತಾರದೊಂದಿಗೆ ಪಬ್ ಜಿ ಗೇಮ್ ಭಾರತಕ್ಕೆ ಮರು ಪ್ರವೇಶ 

ಮಕ್ಕಳ ಅಚ್ಚುಮೆಚ್ಚಿನ ಮೊಬೈಲ್ ಗೇಮ್ ಪಬ್ ಜಿ ಭಾರತದಲ್ಲಿ ಬ್ಯಾಟ್ಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ ಎಂಬ ಹೆಸರಿನಲ್ಲಿ ಮರು ಆರಂಭವಾಗುತ್ತಿದೆ. ದಕ್ಷಿಣ ಕೊರಿಯಾ ಮೂಲದ ಕ್ರಾಫ್ಟನ್, ಕಂಪೆನಿ ಅಭಿವೃದ್ಧಿಪಡಿಸಿರುವ ಪಬ್ ಜಿ ಭಾರತದಲ್ಲಿ ಮರು ಆರಂಭವಾಗುತ್ತಿದೆ ಎಂದು ಗುರುವಾರ ತಿಳಿಸಿದೆ.

published on : 6th May 2021

ಕೊರೋನಾ: ತಾಯಿ ಬಳಿಕ ಸೋದರಿಯನ್ನೂ ಕಳೆದುಕೊಂಡ ಟೀಂ ಇಂಡಿಯಾ ಕ್ರಿಕೆಟ್ ತಾರೆ ವೇದಾ ಕೃಷ್ಣಮೂರ್ತಿ

ಭಾರತೀಯ ಮಹಿಳಾ ಕ್ರಿಕೆಟ್ ತಾರೆ ವೇದಾ ಕೃಷ್ಣಮೂರ್ತಿಯವರ ಸೋದರಿ ವತ್ಸಲಾ ಶಿವಕುಮಾರ್ (42) ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

published on : 6th May 2021

ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆ: 24 ಗಂಟೆಗಳಲ್ಲಿ 4,12,262 ಹೊಸ ಪ್ರಕರಣಗಳು, 3,980 ಸಾವು

ದೇಶದಲ್ಲಿ ಕೊರೋನಾ ಎರಡನೇ ಅಲೆ ತಾಂಡವವಾಡುತ್ತಿದ್ದು ಪ್ರತಿನಿತ್ಯವೂ ಲಕ್ಷಾಂತರ ಮಂದಿ ಸೋಂಕಿಗೆ ಒಳಗಾಗುತ್ತಿದ್ದಾರೆ, ಸಾವಿರಾರು ಮಂದಿ ಬಲಿಯಾಗುತ್ತಿದ್ದಾರೆ.

published on : 6th May 2021

ಸಾರ್ವಜನಿಕರ ನೆರವಿಗೆ ನಿಂತ ಸೇನೆ: ಏರ್ ಫೋರ್ಸ್ ನಿಲ್ದಾಣದಲ್ಲಿ 100 ಬೆಡ್ ಗಳ ಕೋವಿಡ್ ಕೇರ್ ಕೇಂದ್ರ ಆರಂಭ

ಬೆಂಗಳೂರು ನಗರದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿರುವಂತೆಯೇ ಇತ್ತ ಸಾರ್ವಜನಿಕರ ನೆರವಿಗೆ ಸೇನೆ ಧಾವಿಸಿದ್ದು, 100 ಬೆಡ್ ಗಳ ಕೋವಿಡ್ ಕೇರ್ ಕೇಂದ್ರವನ್ನು ತೆರೆದಿದೆ.

published on : 6th May 2021

ಸಿಂಧಗಿ ಸೇರಿ ವಿವಿಧ ರಾಜ್ಯಗಳ 8 ವಿಧಾನಸಭಾ ಕ್ಷೇತ್ರ, 3 ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ಮುಂದೂಡಿಕೆ

ದೇಶದಲ್ಲಿನ ಸದ್ಯದ ಕೋವಿಡ್‍-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮೂರು ಲೋಕಸಭಾ ಕ್ಷೇತ್ರಗಳು ಮತ್ತು ಎಂಟು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ಮುಂದೂಡಲು ಕೇಂದ್ರ ಚುನಾವಣಾ ಆಯೋಗ ಬುಧವಾರ ನಿರ್ಧರಿಸಿದೆ.

published on : 5th May 2021

ವಿಶ್ವಪ್ರಸಿದ್ಧ ಸಾಂಕ್ರಾಮಿಕ ರೋಗ ತಜ್ಞ ಡಾ.ರಾಜೇಂದ್ರ ಕಪಿಲಾ ಕೊರೋನಾಗೆ ಬಲಿ!

ವಿಶ್ವಪ್ರಸಿದ್ಧ ಸಾಂಕ್ರಾಮಿಕ ರೋಗ ತಜ್ಞ ಡಾ. ರಾಜೇಂದ್ರ ಕಪಿಲಾ ಅವರು ಕೊರೋನಾಗೆ ಬಲಿಯಾಗಿದ್ದಾರೆ. 

published on : 5th May 2021

ಕೋವಿಡ್ ನಿಂದಾಗಿ ಐಪಿಎಲ್ ಮುಂದೂಡಿಕೆ: ಬಿಸಿಸಿಐಗೆ 2,000 ಕೋಟಿ ರೂ. ನಷ್ಟ!

ಬಯೋ-ಬಬಲ್ ನಲ್ಲಿದ್ದರೂ ಐಪಿಎಲ್ ಆಟಗಾರರಿಗೆ ಕೊರೋನಾ ವಕ್ಕರಿಸಿದ್ದರಿಂದ ಅನಿವಾರ್ಯವಾಗಿ ಈ ಬಾರಿಯ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದ್ದು ಇದರಿಂದಾಗಿ ಈ ವರ್ಷದ ಲೀಗ್‌ಗೆ ಮೀಸಲಿಟ್ಟಿರುವ ಪ್ರಸಾರ ಮತ್ತು ಪ್ರಾಯೋಜಕತ್ವದ ಹಣದ 2000 ಕೋಟಿ ರೂ.ಗಳನ್ನು ಬಿಸಿಸಿಐ ಕಳೆದುಕೊಳ್ಳಲಿದೆ.

published on : 5th May 2021

ರಾಜ್ಯಗಳಲ್ಲಿ ಇನ್ನೂ 94 ಲಕ್ಷ ಕೋವಿಡ್-19 ಲಸಿಕೆ ಲಭ್ಯವಿದೆ: ಕೇಂದ್ರ ಆರೋಗ್ಯ ಸಚಿವಾಲಯ

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 94.47 ಲಕ್ಷ ಕೋವಿಡ್‌–19 ಲಸಿಕೆಯ ಡೋಸ್‌ಗಳು ಲಭ್ಯವಿದೆ. ಮುಂದಿನ ಮೂರು ದಿನಗಳೊಳಗೆ ಹೆಚ್ಚುವರಿಯಾಗಿ 36 ಲಕ್ಷಗಳಷ್ಟು ಡೋಸ್‌ಗಳನ್ನು ಸರಬರಾಜು ಮಾಡಲಾಗುವುದು’ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಹೇಳಿದೆ.

published on : 5th May 2021

ದಿನದಿಂದ ದಿನಕ್ಕೆ ಕೊರೋನಾ ಸೋಂಕು ಏರಿಕೆ: ಲಾಕ್ ಡೌನ್ ಹೇರಿಕೆಗೆ ಹೆಚ್ಚುತ್ತಿರುವ ಒತ್ತಡ!

ಕೊರೋನಾ ವೈರಸ್ ಹರಡುವುದನ್ನು ತಡೆಯಲು ಸೋಂಕಿನ ಕೊಂಡಿಯನ್ನು ಕತ್ತರಿಸಲು ದೇಶಾದ್ಯಂತ ಸಂಪೂರ್ಣ ಲಾಕ್ ಡೌನ್ ಒಂದೇ ಏಕೈಕ ಪರಿಹಾರ ಎಂದು ಸಿಐಐ ಅಧ್ಯಕ್ಷ ಉದಯ್ ಕೊಟಾಕ್ ಕರೆ ನೀಡಿದ ಬಳಿಕ ಕಾರ್ಪೊರೇಟ್ ಜಗತ್ತಿನ ಹಲವು ನಾಯಕರು ಅವರ ಮಾತಿಗೆ ಬೆಂಬಲ ಸೂಚಿಸುತ್ತಿದ್ದಾರೆ.

published on : 5th May 2021

ಭಾರತದಲ್ಲಿ ಕೊರೋನಾ ಅಬ್ಬರ: ದೇಶದಲ್ಲಿಂದು 3.82 ಲಕ್ಷ ಹೊಸ ಕೇಸ್ ಪತ್ತೆ, 3,780 ಮಂದಿ ಸಾವು

ಭಾರತದಲ್ಲಿ ಮಹಾಮಾರಿ ಕೊರೋನಾ ವೈರಸ್ ಅಬ್ಬರ ಎಂದಿನಂತೆ ಮುಂದುವರೆದಿದ್ದು, ಬುಧವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 3,82 ಲಕ್ಷ ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. 

published on : 5th May 2021
1 2 3 4 5 6 >