- Tag results for resignation
![]() | ಲಂಕಾ ಅಧ್ಯಕ್ಷರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗೆ ಪ್ರಧಾನಿ ವಿಕ್ರಮ ಸಿಂಘೆ ಬೆಂಬಲ!ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಲಂಕಾದಲ್ಲಿ ವಿಲಕ್ಷಣ ಬೆಳವಣಿಗೆಯಲ್ಲಿ ಲಂಕಾ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ರಾಷ್ಟ್ರಾಧ್ಯಕ್ಷರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. |
![]() | ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ: ನಾಲ್ಕನೇ ಬಾರಿಗೆ ಸ್ಥಾನಕ್ಕೆ ರಾಜೀನಾಮೆ ನೀಡಲು ಐಪಿಎಸ್ ಅಧಿಕಾರಿ ಡಾ. ಪಿ.ರವೀಂದ್ರನಾಥ್ ಮುಂದು!ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ವಿಭಾಗಕ್ಕೆ ಇತ್ತೀಚೆಗಷ್ಟೇ ವರ್ಗಾವಣೆಯಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಡಾ.ಪಿ.ರವೀಂದ್ರನಾಥ್ ಅವರು ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. |
![]() | ಸಭಾಪತಿಯಾಗಿ ಬಸವರಾಜ ಹೊರಟ್ಟಿ ಬಿಜೆಪಿ ಸೇರ್ತೀನಿ ಅನ್ನೋದು ಮಹಾ ಅಪರಾಧ: ಬಿಕೆ ಹರಿಪ್ರಸಾದ್ಸಭಾಪತಿ ಬಸವರಾಜ ಹೊರಟ್ಟಿಯವರು ಮೇಲ್ಮನೆ ಗೌರವ ಕಾಪಾಡಿಲ್ಲ ಸಭಾಪತಿಯಾಗಿ ಬಿಜೆಪಿ ಪಕ್ಷ ಸೇರ್ತೀನಿ ಅನ್ನೋದು ಮಹಾ ಅಪರಾಧ, ತಕ್ಷಣವೇ ಸಭಾಪತಿ ಹುದ್ದೆಗೆ ರಾಜೀನಾಮೆ ಕೊಡಲಿ ಎಂದು ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಒತ್ತಾಯಿಸಿದರು. |
![]() | ಸಾಲು ಸಾಲು ವೈಫಲ್ಯಗಳ ಸರದಾರ ಆರಗ ಜ್ಞಾನೇಂದ್ರರನ್ನು ಸಂಪುಟದಿಂದ ತಕ್ಷಣ ಕಿತ್ತುಹಾಕಬೇಕು: ಸಿದ್ದರಾಮಯ್ಯರಾಜ್ಯ ಸರ್ಕಾರವೇ ಅಡಿಯಿಂದ ಮುಡಿವರೆಗೆ ಭ್ರಷ್ಟಗೊಂಡಿರುವಾಗ ಪಿಎಸ್ಐ ನೇಮಕಾತಿ ಹಗರಣದ ಸಿಐಡಿ ತನಿಖೆ ನಿಷ್ಪಕ್ಷಪಾತವಾಗಿ ನಡೆಯಲಾರದು. ಹೈಕೋರ್ಟ್ ನ್ಯಾಯಮೂರ್ತಿಯ ಮೇಲುಸ್ತುವಾರಿಯ ತನಿಖೆಯೊಂದೇ ಪರಿಹಾರ. |
![]() | ಸಚಿವ ಸ್ಥಾನಕ್ಕೆ ಕೆ ಎಸ್ ಈಶ್ವರಪ್ಪ ರಾಜೀನಾಮೆ ಕೊಟ್ಟಾಯ್ತು, ಈಗ ಬಂಧನಕ್ಕೆ ಕಾಂಗ್ರೆಸ್ ಬಿಗಿಪಟ್ಟು; ಪ್ರತಿತಂತ್ರ ಹೆಣೆಯುತ್ತಿರುವ ಕೇಸರಿ ಪಡೆಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕೆ ಎಸ್ ಈಶ್ವರಪ್ಪನವರ ಹೆಸರು ಬಂದು ಆರೋಪಕ್ಕೆ ಗುರಿಯಾಗಿರುವುದರಿಂದ ಗ್ರಾಮೀಣಾಭಿವೃದ್ಧಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿಯಾಗಿದೆ. ಕಾಂಗ್ರೆಸ್ ನಾಯಕರು ಈಶ್ವರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿ ಪಟ್ಟು ಹಿಡಿದು ಅಹೋರಾತ್ರಿ ಧರಣಿ ನಡೆಸಿದ್ದರು. |
![]() | ಶ್ರೀಲಂಕಾದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು: ಎಲ್ಲಾ ಸಚಿವರು ರಾಜೀನಾಮೆ, ಪ್ರಧಾನಿಯಾಗಿ ರಾಜಪಕ್ಸೆ ಮುಂದುವರಿಕೆತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾದಲ್ಲಿ ಭಾನುವಾರ ತಡರಾತ್ರಿ ಪ್ರಮುಖ ಬೆಳವಣಿಗೆಯೊಂದು ಸಂಭವಿಸಿದೆ. ಶ್ರೀಲಂಕಾದ ಸಂಸತ್ತಿನ ಎಲ್ಲಾ ಸಚಿವರುಗಳು ತಮ್ಮ ತಮ್ಮ ಸ್ಥಾನಗಳಿಗೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದವರಲ್ಲಿ ರಾಜಪಕ್ಸೆ ಅವರ ಪುತ್ರ ನಮಲ್ ರಾಜಪಕ್ಸ ಕೂಡ ಸೇರಿದ್ದಾರೆ. |
![]() | ಕಾಂಗ್ರೆಸ್ ಪಕ್ಷಕ್ಕೆ ಸಿಎಂ ಇಬ್ರಾಹಿಂ ಅಧಿಕೃತ ಗುಡ್ ಬೈ: ಸೋನಿಯಾಗೆ ರಾಜಿನಾಮೆ ಪತ್ರ ರವಾನೆ!ಕಾಂಗ್ರೆಸ್ ಪಕ್ಷದಿಂದ ಒಂದು ಕಾಲು ಆಚೆ ಇಟ್ಟಿದ್ದ ಹಿರಿಯ ನಾಯಕ ಸಿಎಂ ಇಬ್ರಾಹಿಂ ಅವರು ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದು, ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ತಮ್ಮ ರಾಜಿನಾಮೆ ಪತ್ರ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ. |
![]() | ಹಿಜಾಬ್ ವಿವಾದ: ತುಮಕೂರಿನಲ್ಲಿ ಅತಿಥಿ ಉಪನ್ಯಾಸಕಿ ರಾಜೀನಾಮೆ; 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಮೇಲೆ ಕೇಸುಹಿಜಾಬ್ ವಿವಾದ ಮತ್ತಷ್ಟು ತಾರಕಕ್ಕೇರುತ್ತಿದೆ. ಹೈಕೋರ್ಟ್ ವಿಚಾರಣೆಯನ್ನು ನಡೆಸುತ್ತಿದ್ದು ಅಂತಿಮ ತೀರ್ಪನ್ನು ಮುಂದೂಡುತ್ತಲೇ ಬಂದಿದೆ. ಇಂದು ಶುಕ್ರವಾರ ಮತ್ತೆ ಹೈಕೋರ್ಟ್ ನ ತ್ರಿಸದಸ್ಯ ಪೀಠ ವಿಚಾರಣೆಯನ್ನು ಮುಂದುವರಿಸಲಿದೆ. |
![]() | ಬಿಜೆಪಿ ಪಕ್ಷಕ್ಕೆ ತಲೆನೋವಾದ ಉತ್ತರಾಖಂಡ ಸಚಿವ ಹರಕ್ ಸಿಂಗ್ ರಾವತ್ ರಾಜೀನಾಮೆ ಬೆದರಿಕೆಇದರಿಂದ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮುನ್ನ ಉತ್ತರಾಖಂಡದಲ್ಲಿ ಬಿಜೆಪಿ ಪಕ್ಷಕ್ಕೆ ಭಾರಿ ಹಿನ್ನಡೆಯಾಗುವ ಸಾಧ್ಯತೆ ಇದೆ. |
![]() | ಉತ್ತರಾಖಂಡ್: ಬಿಜೆಪಿ ಓರ್ವ ಶಾಸಕ, ಕ್ಯಾಬಿನೆಟ್ ಸಚಿವ ಹರಕ್ ಸಿಂಗ್ ರಾವತ್ ದಿಢೀರ್ ರಾಜೀನಾಮೆ, "ಕೈ" ಸೇರುವ ಸಾಧ್ಯತೆಉತ್ತರಾಖಂಡ್ ನಲ್ಲಿ ಕ್ಯಾಬಿನೆಟ್ ಸಚಿವ ಹರಕ್ ಸಿಂಗ್ ರಾವತ್ ರಾಜೀನಾಮೆ ಘೋಷಿಸಿದ ಬೆನ್ನಲ್ಲೇ ಶಾಸಕರೊಬ್ಬರು ರಾಜೀನಾಮೆ ನೀಡಿದ್ದಾರೆ. |
![]() | ಕೊಟ್ಟ ಮಾತಿನಂತೆ ಲೋಕಸಭೆ ಸ್ಥಾನಕ್ಕೆ 2014ರಲ್ಲಿ ರಾಜೀನಾಮೆ ನೀಡುವ ಆಶಯ ಪ್ರಕಟಿಸಿದ್ದ ದೇವೇಗೌಡರು: ಮನವಿ ತಿರಸ್ಕರಿಸಿದ್ದ ಮೋದಿ2014ರಲ್ಲಿ ಬಿಜೆಪಿ 276 ಸೀಟುಗಳನ್ನು ಗೆದ್ದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ತಾವು ಲೋಕಸಭೆಯಿಂದ ನಿವೃತ್ತಿ ಹೊಂದುವುದಾಗಿ ದೇವೇಗೌಡರು ಸವಾಲು ಹಾಕಿದ್ದರು. |
![]() | ಲಖಿಂಪುರ್ ಖೇರಿ ಹಿಂಸಾಚಾರ: ದೆಹಲಿ ಸರ್ಕಾರಿ ಕಾರ್ಯಕ್ರಮಕ್ಕೆ ಅಜಯ್ ಮಿಶ್ರಾ ಹಾಜರು; ರಾಜೀನಾಮೆಗೆ ಪ್ರಿಯಾಂಕಾ ಗಾಂಧಿ ಪಟ್ಟುಲಖಿಂಪುರ್ ಖೇರಿ ಘಟನೆ ಸಂಬಂಧ ಸಂತ್ರಸ್ತ ಕುಟುಂಬಗಳಿಗೆ ಇನ್ನೂ ನ್ಯಾಯ ದೊರೆತಿಲ್ಲ, ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಮಿಶ್ರಾ ತೆನಿ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. |
![]() | ನೈತಿಕತೆಯೊಂದಿಗೆ ರಾಜಿಯಾಗಲು ಸಾಧ್ಯವಿಲ್ಲ: ರಾಜೀನಾಮೆ ಕುರಿತು ಮೌನ ಮುರಿದ ನವಜೋತ್ ಸಿಂಗ್ ಸಿಧುಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ ಹಠಾತ್ ರಾಜೀನಾಮೆ ನೀಡಿದ ಒಂದು ದಿನದ ಬಳಿಕ ನವಜೋತ್ ಸಿಂಗ್ ಸಿಧು ಅವರು ಮೌನ ಮುರಿದ್ದು, ನೈತಿಕತೆಯೊಂದಿಗೆ ರಾಜಿಯಾಗಲು ಸಾಧ್ಯವಿಲ್ಲ ಎಂದು ಬುಧವಾರ ಹೇಳಿದ್ದಾರೆ. |
![]() | ಹೊರಗಿನವರಾದ ಸಿಧುವಿಗೆ ಉನ್ನತ ಸ್ಥಾನ ಕೊಟ್ಟಿದ್ದು ದೊಡ್ಡ ತಪ್ಪು: ಕಾಂಗ್ರೆಸ್ ನಾಯಕರ ಪಶ್ಚಾತ್ತಾಪಮೊದಲು ಸಿಧು ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡಬೇಕಿತ್ತು, ಪಕ್ಷದ ಸಿದ್ಧಾಂತ ಕಾರ್ಯವೈಖರಿಯನ್ನು ಅರ್ಥ ಮಾಡಿಕೊಳ್ಳಬೇಕಿತ್ತು ನಂತರ ಅವರಿಗೆ ಉನ್ನತ ಸ್ಥಾನ ನೀಡಿದರೆ ಅದರಲ್ಲಿ ಅರ್ಥವಿರುತ್ತಿತ್ತು. |
![]() | ತುಮಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಸುರೇಶ್ ಗೌಡ ರಾಜೀನಾಮೆ: ಹಲವು ಅನುಮಾನಗಳಿಗೆ ಎಡೆ!ತುಮಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಮೊನ್ನೆ ಸೋಮವಾರ ರಾತ್ರಿ ಮಾಜಿ ಶಾಸಕ ಬಿ ಸುರೇಶ್ ಗೌಡ ರಾಜೀನಾಮೆ ನೀಡಿದ್ದಾರೆ. ಪಕ್ಷದೊಳಗಿನ ಆಂತರಿಕ ಒತ್ತಡದಿಂದ ಅವರು ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಹೇಳಲಾಗುತ್ತಿದೆ. |