

ಖಾಸಗಿ ಬ್ಯಾಂಕಿನ ಮಹಿಳಾ ಉದ್ಯೋಗಿಯೊಬ್ಬರು ರೆಡ್ಡಿಟ್ ಪೋಸ್ಟ್‌ನಲ್ಲಿ ತನ್ನ ಮ್ಯಾನೇಜರ್ ತನ್ನ ಅನಾರೋಗ್ಯ ಪೀಡಿತ ತಾಯಿಯನ್ನು ನೋಡಿಕೊಳ್ಳಲು ರಜೆ ನಿರಾಕರಿಸಿದ್ದರಿಂತ ತಾನು ಅನಿವಾರ್ಯವಾಗಿ ಕೆಲಸವನ್ನು ತ್ಯಜಿಸುವಂತಾಯಿತು ಎಂದು ಹೇಳಿಕೊಂಡಿದ್ದಾರೆ. 'ನಿಮ್ಮ ತಾಯಿ ಬೇಗ ಚೇತರಿಸಿಕೊಳ್ಳದಿದ್ದರೆ, ಅವರನ್ನು ವೈದ್ಯಕೀಯ ಅಥವಾ ಆಶ್ರಯ ಗೃಹದಲ್ಲಿ ಇರಿಸಿ, ನೀವು ಕಚೇರಿಗೆ ಬನ್ನಿ' ಎಂದು ಮ್ಯಾನೇಜರ್ ಹೇಳಿದ್ದರು ಎಂದು ಉದ್ಯೋಗಿ ಆರೋಪಿಸಿದ್ದಾರೆ.
ಮ್ಯಾನೇಜರ್ ಅವರ ಹೇಳಿಕೆಯು 'ಅಸಂವೇದನಾಶೀಲ' ಎಂದು ಹೇಳಲಾಗಿದ್ದು, ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ ಮತ್ತು ಟಾಕ್ಸಿಕ್ ಕೆಲಸದ ಸ್ಥಳದ ಬಗ್ಗೆ ತೀವ್ರ ಕಳವಳ ಉಂಟುಮಾಡಿದೆ.
ಪೋಸ್ಟ್‌ನಲ್ಲಿ, ತನ್ನ ತಾಯಿ ತಪ್ಪಾದ ಔಷಧಿ ಸೇವನೆಯಿಂದಾಗಿ ತೀವ್ರ ಅಸ್ವಸ್ಥರಾಗಿದ್ದು, ಕೆಲವು ದಿನ ರಜೆ ಬೇಕೆಂದು ಕೇಳಿದ್ದೆ. ಆದರೆ ರಜೆ ನಿರಾಕರಿಸಲಾಯಿತು.
'ಹೀಗಾಗಿ ನಾನು ತನ್ನ ತಾಯಿಯೊಂದಿಗೆ ಇರಬೇಕಾಯಿತು. ಅದಾದ ನಂತರ, ರಾಜೀನಾಮೆ ನೀಡಬೇಕಾಯಿತು. ನಾನು ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿದ್ದೇನೆ. ಇಂತಹ ಕೆಲಸದ ಸ್ಥಳಗಳಲ್ಲಿ 'ಸರಿಯಾದ' ಪ್ರತಿಕ್ರಿಯೆ ಏನೆಂದು ನನಗೆ ಪ್ರಾಮಾಣಿಕವಾಗಿ ತಿಳಿದಿಲ್ಲವಾದ್ದರಿಂದ ನಾನು ಇದನ್ನು ಇಲ್ಲಿ ಪೋಸ್ಟ್ ಮಾಡುತ್ತಿದ್ದೇನೆ. ಇಂತಹ ಪರಿಸ್ಥಿತಿಯಲ್ಲಿ 'ನೀವು ಏನು ಮಾಡುತ್ತಿದ್ದಿರಿ?' ಎಂದು ಪ್ರಶ್ನಿಸಿದ್ದಾರೆ.
ಈ ಪೋಸ್ಟ್‌ಗೆ ಹಲವರು ಪ್ರತಿಕ್ರಿಯಿಸಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಅದು ಸರಿ. ಅವರ ಮುಂದೆ ಕೇವಲ ಎರಡು ಆಯ್ಕೆಗಳಿದ್ದವು. ಒಂದು ಎಂದಿನಂತೆ ಕೆಲಸ ಮಾಡುವುದು ಅಥವಾ ಆಕೆಯ ತಾಯಿಯೊಂದಿಗೆ ಇರುವುದು' ಎಂದು ಶ್ರೀ_ಮೌಲಿಕ್ ಎಂಬ ಬಳಕೆದಾರರು r/IndianWorkplace ಸಬ್‌ರೆಡಿಟ್‌ನಲ್ಲಿನ ಪೋಸ್ಟ್‌ನಲ್ಲಿ ಬರೆದಿದ್ದಾರೆ.
'ಈ ಸಲಹೆಯನ್ನು ಲಿಖಿತವಾಗಿ ನೀಡಲು ವ್ಯವಸ್ಥಾಪಕರನ್ನು ಕೇಳಿ ಮತ್ತು ಅವರ ಸ್ವರ ಬದಲಾವಣೆ ಮತ್ತು ಅಹಂಕಾರ ಕುಸಿಯುವುದನ್ನು ನೋಡಿ' ಎಂದು ಒಬ್ಬ ಬಳಕೆದಾರರು ಸಲಹೆ ನೀಡಿದ್ದಾರೆ.
'ಛೇ, ನನಗೆ ಆಕೆಯ ಬಗ್ಗೆ ಮತ್ತು ಆಕೆ ಅನುಭವಿಸಿದ ಭಾವನೆಗಳ ಬಗ್ಗೆ ಸಹಾನುಭೂತಿ ಇದೆ. ಈ ರೀತಿಯ ಕ್ರೂರ ಶೋಷಣೆಗೆ ಪ್ರತೀಕಾರ ತೀರಿಸಿಕೊಳ್ಳಲು ಕಾನೂನುಬದ್ಧ ಮಾರ್ಗವಿರಬೇಕು' ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.
'ಇದು ನಿಜಕ್ಕೂ ದುರದೃಷ್ಟಕರ. ಅವರನ್ನು ಕೆಲಸದಿಂದ ವಜಾ ಮಾಡುವ ಬದಲು ಅವರು ಏಕೆ ರಾಜೀನಾಮೆ ನೀಡಬೇಕಾಯಿತು?' ಎಂದು ಮೂರನೆಯವರು ಬರೆದಿದ್ದಾರೆ.
Advertisement