ನೀರಜ್ ಚೋಪ್ರಾ ಮತ್ತು ಅರ್ಷದ್ ನದೀಮ್: ಮೈದಾನದಲ್ಲಿ ಪ್ರತಿಸ್ಪರ್ಧಿಗಳು, ಜೀವನದಲ್ಲಿ ಸ್ನೇಹಿತರು

Online Team

ನದೀಮ್ ಮತ್ತು ನೀರಜ್ ಚೋಪ್ರಾ ಈ ಹಿಂದೆ 11 ಬಾರಿ ಮುಖಾಮುಖಿಯಾಗಿದ್ದು 10ರಲ್ಲಿ ನೀರಜ್ ಚೋಪ್ರಾ ಮೇಲುಗೈ ಸಾಧಿಸಿದ್ದರು. ಆದರೆ ನಿನ್ನೆ ನದೀಮ್ ಮೊದಲ ಬಾರಿಗೆ ಜಾವೆಲಿನ್ ಥ್ರೋನಲ್ಲಿ 92.97 ಮೀಟರ್‌ ಎಸೆದು ದಾಖಲೆಯೊಂದಿಗೆ ಒಲಿಂಪಿಕ್ ಚಿನ್ನದ ಪದಕವನ್ನು ಪಡೆದರು.

ನೀರಜ್ ಚೋಪ್ರಾ 89.45 ಮೀಟರ್‌ ದೂರ ಭರ್ಜಿ ಎಸೆದು 2ನೇ ಸ್ಥಾನ ಪಡೆದರು.

"ಕ್ರಿಕೆಟ್ ಪಂದ್ಯಗಳು ಮತ್ತು ಇತರ ಕ್ರೀಡೆಗಳಿಗೆ ಬಂದಾಗ ಪೈಪೋಟಿ ಇರುತ್ತದೆ, ಆದರೆ ಅದೇ ಸಮಯದಲ್ಲಿ, ಕ್ರೀಡೆಯನ್ನು ಅನುಸರಿಸುತ್ತಿರುವ ಎರಡೂ ದೇಶಗಳ ಯುವಕರು ನಮ್ಮನ್ನು ಅನುಸರಿಸುವುದು ಮತ್ತು ಅವರ ಕ್ರೀಡಾ ಐಕಾನ್‌ಗಳನ್ನು ಅನುಸರಿಸುವುದು ಮತ್ತು ಅವರ ದೇಶಕ್ಕಾಗಿ ಪ್ರಶಸ್ತಿಗಳನ್ನು ತರುವುದು ಒಳ್ಳೆಯದು."

- ಅರ್ಷದ್ ನದೀಮ್.

1988 ರ ಸಿಯೋಲ್ ಒಲಿಂಪಿಕ್ಸ್‌ನಲ್ಲಿ ಬಾಕ್ಸರ್ ಹುಸೇನ್ ಷಾ ಮಧ್ಯಮ ತೂಕ ವಿಭಾಗದಲ್ಲಿ ಕಂಚಿನ ಪದಕವನ್ನು ಪಡೆದ ದೀರ್ಘ ಕಾಲದ ನಂತರ ಪಾಕಿಸ್ತಾನಕ್ಕೆ ಮೊದಲ ವೈಯಕ್ತಿಕ ಪದಕವನ್ನು ನದೀಮ್ ತಂದುಕೊಟ್ಟಿದ್ದಾರೆ.

ನೀರಜ್ ಚೋಪ್ರಾ ಅವರ ತಾಯಿ ಅರ್ಷದ್ ನದೀಮ್ ಅವರ ಸಾಧನೆಯನ್ನು ಶ್ಲಾಘಿಸಿದರು, ಅವರನ್ನು "ತನ್ನ ಮಗು" ಎಂದು ಕರೆದರು ಮತ್ತು ಎಲ್ಲಾ ಕ್ರೀಡಾಪಟುಗಳ ಶ್ರಮವನ್ನು ಶ್ಲಾಘಿಸಿದರು.

ನದೀಮ್ ಮತ್ತು ನೀರಜ್ ಚೋಪ್ರಾ ಮೈದಾನದಲ್ಲಿ ತೀವ್ರ ಸ್ಪರ್ಧಿಗಳಾಗಿದ್ದರೂ, ಉತ್ತಮ ಸ್ನೇಹಿತರು. ಕೆಲವು ತಿಂಗಳ ಹಿಂದೆ, ಗುಣಮಟ್ಟದ ಜಾವೆಲಿನ್ ಖರೀದಿಸಲು ಹಣಕ್ಕಾಗಿ ನದೀಮ್ ಸಾಮಾಜಿಕ ಮಾಧ್ಯಮದಲ್ಲಿ ಮನವಿ ಮಾಡಿದಾಗ, ನೀರಜ್ ಚೋಪ್ರಾ ತಮ್ಮ ಬೆಂಬಲವನ್ನು ನೀಡಲು ಮುಂದಾದವರಲ್ಲಿ ಮೊದಲಿಗರು.

ನೀರಜ್ ಚೋಪ್ರಾ ಅವರು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಆಗಸ್ಟ್ 6, ಮಂಗಳವಾರ ಇಲ್ಲಿ ನಡೆದ ಅರ್ಹತಾ ಸುತ್ತಿನಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿ 89.34 ಮೀಟರ್‌ ಎಸೆದು ಒಲಿಂಪಿಕ್ ಕ್ರೀಡಾಕೂಟದ ಪುರುಷರ ಜಾವೆಲಿನ್ ಥ್ರೋ ಫೈನಲ್‌ಗೆ ಪ್ರವೇಶಿಸಿದ್ದರು.

"Rivalry ಇದೆ ಆದರೆ..."