ಒಲಿಂಪಿಕ್ಸ್ 2024: ಅಧಿಕ ತೂಕ; ಕುಸ್ತಿಪಟು ವಿನೇಶ್ ಫೋಗಟ್ ಅನರ್ಹ; ನಿವೃತ್ತಿ ಘೋಷಣೆ

Online Team

ವೃತ್ತಿಪರ ಕ್ರೀಡೆಗಳಲ್ಲಿ ಇದು ಸಾಮಾನ್ಯವಾಗಿ ಎಂದಿಗೂ ಹೀಗೆ ಆಗುವುದಿಲ್ಲ. ಆದರೆ ವಿನೇಶ್ ಫೋಗಟ್ ಪ್ರಕರಣದಲ್ಲಿ ಇದು ನಡೆದಿದೆ.

ವಿನೇಶ್ 100 ಗ್ರಾಂ ಹೆಚ್ಚು ತೂಕ ಹೊಂದಿದ್ದರು. ಇದರಿಂದಾಗಿ ಚಿನ್ನದ ಪದಕದ ಪಂದ್ಯದ ದಿನದ ಬೆಳಿಗ್ಗೆ ತೂಕ ಪರಿಶೀಲನೆ ನಂತರ ಆಕೆಯನ್ನು ಅನರ್ಹಗೊಳಿಸಲಾಯಿತು.

ನಿಯಮಗಳ ಪ್ರಕಾರ, ಸ್ಪರ್ಧೆಯ ಎರಡೂ ದಿನಗಳು ಅವಳ ತೂಕ 50 ಕೆಜಿ ಯೊಳಗೇ ಇರಬೇಕು. ಏಕೆಂದರೆ ಅವರು 50 ಕೆಜಿ ತೂಕದ ವರ್ಗದಲ್ಲಿ ಕುಸ್ತಿ ಪಂದ್ಯವನ್ನು ಆಡಬೇಕಿತ್ತು.

ಮಂಗಳವಾರ ಬೆಳಿಗ್ಗೆ, ಆಕೆಯ ತೂಕವು 50 ಕೆಜಿಗೆ ಸಮನಾಗಿತ್ತು. ಆದರೆ ಸೆಮೆಫೈನಲ್ ಪಂದ್ಯದ ನಂತರ ಅವಳು ಸ್ವಲ್ಪ ಹೆಚ್ಚು ತೂಕ ಹೊಂದಿದ್ದಳು.

ಒಂದೇ ದಿನದಲ್ಲಿ ತೂಕವನ್ನು ಕಳೆದುಕೊಳ್ಳಲು ವಿನೇಶ್ ಫೋಗಟ್ ಸೈಕ್ಲಿಂಗ್, ಸ್ಕಿಪ್ಪಿಂಗ್ ಸೇರಿದಂತೆ ಎಲ್ಲಾ ಪ್ರಯತ್ನ ಮಾಡಿದಳು. ಆದರೂ, 100 ಗ್ರಾಂ ಹೆಚ್ಚು ತೋರಿತ್ತು. ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​(ಐಒಎ) ಇದನ್ನು ಪ್ರತಿಭಟಿಸಿತು ಆದರೆ ನಿಯಮಗಳ ಅನ್ವಯ ಏನೂ ಹೆಚ್ಚು ಮಾಡಲಾಗಲಿಲ್ಲ.

ನನ್ನ ವಿರುದ್ಧ ಕುಸ್ತಿ ಗೆದ್ದಿದೆ. ನಾನು ಸೋತಿದ್ದೇನೆ. ಕ್ಷಮಿಸಿ, ಈಗ ನನ್ನಲ್ಲಿ ಹೆಚ್ಚಿನ ಶಕ್ತಿ ಇಲ್ಲ ಎಂದು ಹೇಳುವ ಮೂಲಕ ಕುಸ್ತಿಪಟು ವಿನೇಶ್‌ ಫೋಗಟ್‌ ಭಾವುಕ ಸಂದೇಶದೊಂದಿಗೆ ಕುಸ್ತಿಗೆ ನಿವೃತ್ತಿ ಘೋಷಿಸಿದ್ದಾರೆ.

ಕೂದಲಿಗೆ ಕತ್ತರಿ, ರಕ್ತ ತೆಗೆದಿದ್ದೂ ಸೇರಿ ತೂಕ ಇಳಿಕೆಗೆ ಎಲ್ಲಾ ಕ್ರಮ