ಬೆಂಗಳೂರು: 78ನೇ ಸ್ವಾತಂತ್ರ್ಯ ದಿನಾಚರಣೆ ಪರೇಡ್ ರಿಹರ್ಸಲ್

Online Team

ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಪರೇಡ್ ಮೈದಾನವು ಅದ್ಧೂರಿ ಸ್ವಾತಂತ್ರ್ಯ ದಿನಾಚರಣೆಗೆ ಸಂಪೂರ್ಣ ಸಿದ್ಧಗೊಂಡಿದೆ.

TNIE / Shashidhar Byrappa

ಈ ಬಾರಿ 400 ಮಂದಿ ಶಾಲಾ ಮಕ್ಕಳಿಂದ ‘ಕಾಂಗ್ರೆಸ್ ಸರ್ಕಾರದ ಐದು ಮಹತ್ವಾಕಾಂಕ್ಷೆ ಖಾತ್ರಿ ಯೋಜನೆ’ ಕುರಿತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

TNIE / Shashidhar Byrappa

ಕಳೆದ ಮೂರು ದಿನಗಳಿಂದ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳ ತಾಲೀಮು ನಡೆಯುತ್ತಿದೆ. ಈ ಬಾರಿ ಸುಮಾರು 8,000 ಜನರು ಭಾಗವಹಿಸಲಿದ್ದಾರೆ.

TNIE / Shashidhar Byrappa

ಶಾಲಾ ವಿದ್ಯಾರ್ಥಿಗಳೊಂದಿಗೆ ಬಿಎಸ್ಎಫ್ ಮತ್ತು ಪೊಲೀಸ್ ಸಿಬ್ಬಂದಿ ತಾಲೀಮು ನಡೆಸಿದರು.

TNIE / Shashidhar Byrappa

ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ, ಶ್ರೀಪಾದ ದೇವರಾಜ್ ಮತ್ತು ತಂಡದಿಂದ ನಾಡಗೀತೆ ಹಾಗೂ ರೈತ ಗೀತೆ, 750 ಶಾಲಾ ಮಕ್ಕಳಿಂದ "ಜಯಭಾರತಿ" ನೃತ್ಯ ನಾಟಕ, 700 ಶಾಲಾ ಮಕ್ಕಳಿಂದ ರಾಣಿ ಅಬ್ಬಕ್ಕ ದೇವಿ ನಾಟಕ ಇರುತ್ತದೆ.

TNIE / Shashidhar Byrappa

ಜೊತೆಗೆ, ಮಲ್ಲಕಂಬ, ಕಳರಿಪಯಟ್ಟು, ಪ್ಯಾರಾ ಟ್ರೂಪ್, ಮೋಟಾರ್ ಸೈಕಲ್ ಶೋ ಸೇರಿದಂತೆ ಹಲವು ರೋಚಕ ಪ್ರದರ್ಶನಗಳೂ ಇರುತ್ತದೆ.

TNIE / Shashidhar Byrappa

3 ಜನ ಡಿಸಿಪಿ, 6 ಜನ ಎಸಿಪಿ, 19 ಜನ ಇನ್ಸ್​ಪೆಕ್ಟರ್, 32 ಪಿಎಸ್ಐ, 111 ಎಎಸ್ಐ ಹಾಗೂ 430 ಕಾನ್ಸಟೇಬಲ್​​​ಗಳು ಸೇರಿದಂತೆ ನೂರಾರು ಸಿಬ್ಬಂದಿ‌ಯನ್ನು ಮೈದಾನದ ಸುತ್ತಮುತ್ತ ಟ್ರಾಫಿಕ್ ಕಂಟ್ರೋಲ್‌ಗೆ ನೇಮಕ‌ ಮಾಡಲಾಗಿದೆ.

TNIE / Shashidhar Byrappa
ಸ್ವಾತಂತ್ರ್ಯ ದಿನಾಚರಣೆ ಪರೇಡ್ ಗೆ ಸಿದ್ಧತೆ