ಪೊಲೀಸ್ ದಬ್ಬಾಳಿಕೆ ವಿರೋಧಿಸಿ ಬಿಜೆಪಿಯಿಂದ ಬಂಗಾಳ ಬಂದ್ | IN PICS

Online Team

ಆಗಸ್ಟ್ 27, ಮಂಗಳವಾರದಂದು ರಾಜ್ಯ ಸಚಿವಾಲಯಕ್ಕೆ ನಡೆದ ''ನಬನ್ನಾ ಅಭಿಜನ್' ರ‍್ಯಾಲಿಯಲ್ಲಿ ನಡೆದ ಶಾಂತಿಯುತ ಪ್ರತಿಭಟನೆ ವೇಳೆ ಪೊಲೀಸರು ದಬ್ಬಾಳಿಕೆ ವಿರೋಧಿಸಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಆಗಸ್ಟ್ 28 ರಂದು 12 ಗಂಟೆಗಳ ಬಂಗಾಳ ಬಂದ್‌ಗೆ ಕರೆ ನೀಡಿದೆ.

ರಾಜ್ಯ ಸಚಿವಾಲಯದ ಸುತ್ತಲೂ ಹೆಚ್ಚಿನ ಭದ್ರತೆಯ ನಡುವೆ ಪ್ರತಿಭಟನಾಕಾರರು ಹೌರಾದ ಸಂತ್ರಗಚಿ ಪ್ರದೇಶದಲ್ಲಿ ಜಮಾಯಿಸಿದ್ದರು. ಕೋಲ್ಕತಾದ ಕಾಲೇಜ್ ಸ್ಕ್ವೇರ್‌ನಿಂದ 'ನಬನ್ನಾ ಅಭಿಜನ್' ಎಂಬ ರ‍್ಯಾಲಿ ಮಂಗಳವಾರ ಪ್ರಾರಂಭವಾಗಿತ್ತು.

ಉತ್ತರ 24 ಪರಗಣ ಜಿಲ್ಲೆಯಲ್ಲಿರುವ ಭಟ್ಪಾರಾದಲ್ಲಿ ಟಿಎಂಸಿ ಕಾರ್ಯಕರ್ತರು ತಮ್ಮ ಕಾರಿಗೆ ಗುಂಡು ಹಾರಿಸಿದ್ದಾರೆ ಎಂದು ಬಿಜೆಪಿ ನಾಯಕ ಪ್ರಿಯಾಂಗು ಪಾಂಡೆ ಹೇಳಿದ್ದಾರೆ.

ಬಂದ್ ಗೆ ಕರೆ ನೀಡಿರುವ ಬಿಜೆಪಿ ಪಕ್ಷವನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.

ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ನಿಭಾಯಿಸಿದ್ದಕ್ಕಾಗಿ ತೀವ್ರ ಟೀಕೆಗಳನ್ನು ಎದುರಿಸುತ್ತಿರುವ ಸಿಎಂ, ಬಂದ್ ಬಂಗಾಳವನ್ನು ದೂಷಿಸುವ ಮತ್ತೊಂದು ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.

"ನಾವು ಈ ಬಂದ್‌ಗೆ ಬೆಂಬಲ ನೀಡುವುದಿಲ್ಲ.... ಬಿಜೆಪಿಯು ಯುಪಿ, ಎಂಪಿ ಮತ್ತು ಮಣಿಪುರದ ಸಿಎಂಗಳ ರಾಜೀನಾಮೆಗೆ ಎಂದಿಗೂ ಒತ್ತಾಯಿಸಿಲ್ಲ... ನಾವು ನಿನ್ನೆಯ ಚಿತ್ರಗಳನ್ನು ನೋಡಿದ್ದೇವೆ (ನಬನ್ನಾ ಅಭಿಜನ್ ರ‍್ಯಾಲಿ), ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಿದ ಪೊಲೀಸರಿಗೆ ನಾನು ನಮಸ್ಕರಿಸುತ್ತೇನೆ.." ಎಂದು ಮಮತಾ ಹೇಳಿದ್ದಾರೆ.

ಬಿಜೆಪಿ ಬೆಂಬಲಿಗರು ಮತ್ತು ಟಿಎಂಸಿ ಕಾರ್ಯಕರ್ತರು ಮುಖಾಮುಖಿಯಾದ ಕಾರಣ ಉದ್ವಿಗ್ನತೆ ಉಂಟಾಗಿತ್ತು.

ಹಿಂಸಾಚಾರವಾಗುವ ಸಾಧ್ಯತೆ ಕಾರಣ ಸರ್ಕಾರಿ ಬಸ್ ಚಾಲಕರು ಮತ್ತು ಕಂಡಕ್ಟರ್‌ಗಳು ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸುವಂತೆ ಆಡಳಿತ ಸೂಚನೆ ನೀಡಿತ್ತು.

ಪಶ್ಚಿಮ ಬಂಗಾಳ ಬಂದ್: ಟಿಎಂಸಿ ದಾಳಿ