'ನನ್‌ ಹುಡ್ಗ'.. ಕೊನೆಗೂ ಬಾಯ್‌ಫ್ರೆಂಡ್‌ ಪರಿಚಯಿಸಿದ 'ಕನ್ನಡತಿ' ರಂಜನಿ ರಾಘವನ್‌!

Srinivasa Murthy VN

ಪುಟ್ಟಗೌರಿ ಮದುವೆ, ಕನ್ನಡತಿ ಧಾರಾವಾಹಿ ಖ್ಯಾತಿಯ ನಟಿ ರಂಜನಿ ರಾಘವನ್‌ ತಮ್ಮ ಭಾವಿ ಪತಿಯನ್ನು ಪರಿಚಯಿಸಿದ್ದಾರೆ.

ನಟಿ ರಂಜನಿ ರಾಘವನ್ ತಮ್ಮ ಲೈಫ್‌ ಪಾರ್ಟ್ನರ್‌ ಯಾರು ಎಂಬುದನ್ನು ಪರಿಚಯಿಸಿದ್ದಾರೆ.

ಪೋಟೋದಲ್ಲಿ ವ್ಯಕ್ತಿಯೊಬ್ಬರ ಜೊತೆ ಮಿರರ್‌ ಸೆಲ್ಫಿ ತೆಗೆದುಕೊಂಡಿರುವ ರಂಜನಿ, ಹಿಂದೆ ಇರುವ ವ್ಯಕ್ತಿ ನಟಿಯ ಬೆನ್ನಿನ ಮೇಲೆ ಕೈಇಟ್ಟು ಪೋಸ್‌ ನೀಡಿದ್ದಾರೆ.

ಈ ಪೋಸ್ಟ್‌ಗೆ ಕ್ಯಾಪ್ಷನ್‌ ಆಗಿ ಸಾಗರ್‌ ಭಾರಧ್ವಜ್-ರಂಜನಿ ರಾಘವನ್‌ ಎಂದು ಬರೆದಿದ್ದು, ಮಾತ್ರವಲ್ಲದೇ ನನ್ನ ಹುಡುಗ, ಲೈಫ್‌ ಪಾರ್ಟ್ನರ್‌ ಎಂದು ಟ್ಯಾಗ್‌ ನೀಡಿದ್ದಾರೆ.

ಸದ್ಯ ರಂಜನಿ ಅವರು ಶೇರ್‌ ಮಾಡಿರುವ ಈ ಪೋಸ್ಟ್‌ ವ್ಯಾಪಕ ವೈರಲ್ ಆಗಿದ್ದು, ಜೋಡಿಗೆ ಶುಭಾಶಯಗಳ ಸುರಿಮಳೆಯೇ ಸುರಿಯುತ್ತಿದೆ.

ಅಂದಹಾಗೆ ಮದುವೆ ಹಾಗೂ ನಿಶ್ಚಿತಾರ್ಥದ ದಿನಾಂಕದ ಬಗ್ಗೆ ನಟಿ ರಂಜನಿ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

ವೃತ್ತಿಯಲ್ಲಿ ಅಥ್ಲೆಟ್​ ಆಗಿರುವ ಸಾಗರ್ ಭಾರಧ್ವಜ್ ರನ್ನರ್, ಸೈಕಲಿಸ್ಟ್​, ಬೈಕರ್ ಕೂಡ ಆಗಿದ್ದಾರೆ.

ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಂಜನಿ ಅವರ ‘ಕಾಂಗರೂ’ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ.

2017ರಲ್ಲಿ ‘ರಾಜಹಂಸ’ ಚಿತ್ರದ ಮೂಲಕ ರಂಜನಿ ಕನ್ನಡ ಚಿತ್ರರಂಗಪ್ರವೇಶಿಸಿದ್ದರು.

ನಂತರ ಪುಣ್ಯ, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ, ನೈಟ್ ಕರ್ಫ್ಯೂ ಸೇರಿದಂತೆ ಕೆಲವು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.

ನಟಿ ನೇಹಾಗೌಡ ಬೇಬಿ ಬಂಪ್