ಉಡುಪಿ ಬೀಚ್ ನಲ್ಲಿ ಬಿಕಿನಿ ಫೋಟೋಶೂಟ್‌; ಯಾರು ಈ Khyati shree?

Srinivasa Murthy VN

ಉಡುಪಿ ಬೀಚ್​ನಲ್ಲಿ ಬಿಕಿನಿ ಫೋಟೋಶೂಟ್ ಮಾಡಿಸಲು ಮುಂದಾಗಿ ಪೊಲೀಸರಿಂದ ಎಚ್ಚರಿಕೆ ಪಡೆದ ಮಹಿಳೆ khyatishree2 ಇನ್ ಸ್ಟಾಗ್ರಾಂ ಇನ್ಫ್ಲುಯೆನ್ಸರ್ ಆಗಿದ್ದಾರೆ.

khyatishree2 ಎಂಬ ಇನ್ ಸ್ಟಾಗ್ರಾಂ ಖಾತೆ ಹೊಂದಿರುವ ಆಕೆ ಕರ್ನಾಟಕ ಪ್ರವಾಸದಲ್ಲಿದ್ದು ಕರ್ನಾಟಕದ ಉಡುಪಿ ಜಿಲ್ಲೆಯ ಪಡುಕೆರೆ ಬೀಚ್‌ನಲ್ಲಿ ಬಿಕಿನಿ ಫೋಟೋ ಮಾಡಿಸಿದ್ದಾರೆ.

ಆಕೆಯ ಈ ಬಿಕಿನಿ ಫೋಟೋಶೂಟ್ ಗೆ ಆಕೆಯ ಪತಿಯೇ ಫೋಟೋಗ್ರಾಫರ್ ಆಗಿದ್ದು, ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಈಕೆಗೆ ಮದುವೆಯಾಗಿದ್ದು ಗಂಡನೇ ಈಕೆಯ ಫೋಟೋಗ್ರಾಫರ್‌ ಆಗಿದ್ದಾನೆ.

khyatishree2 ಡಿಜಿಟಲ್ ಕ್ರಿಯೇಟರ್ ಆಗಿದ್ದು, ಇನ್ ಸ್ಟಾಗ್ರಾಂನಲ್ಲಿ ಆಕೆಗೆ 7ಲಕ್ಷಕ್ಕೂ ಅಧಿಕ ಅನುಯಾಯಿಗಳಿದ್ದಾರೆ.

ಇನ್ನು ಉಡುಪಿ ವಿಚಾರವಾಗಿ ಆಕ್ಷೇಪ ವ್ಯಕ್ತಪಡಿಸಿರುವ ಮಹಿಳೆ, ಪಡುಕೆರೆ ಬೀಚ್‌ ತಮಗೆ ಕಹಿ ಅನುಭವಾಗಿದೆ ಎಂದು ಹೇಳಿದ್ದಾರೆ.

ಫೋಟೋಶೂಟ್ ಮಾಡಿಸುತ್ತಿದ್ದಾಗ ಬಟ್ಟೆ ಬದಲಿಸುವಂತೆ ಸ್ಥಳೀಯ ಪೊಲೀಸರು ಸೂಚಿಸಿದ್ದಾರೆ.

ಬೇರೆ ಬಟ್ಟೆ ಹಾಕದಿದ್ದರೆ ಸ್ಥಳೀಯರು ಹಲ್ಲೆ ನಡೆಸುತ್ತಾರೆ. ನೈತಿಕ ಪೊಲೀಸ್‌ಗಿರಿ ನಡೆಸಲು ಸ್ಥಳೀಯರು ಯಾರು ಎಂದು ಮಹಿಳೆ ಆಕ್ರೋಶ ಹೊರಹಾಕಿದ್ದಾರೆ.

ಅಲ್ಲದೆ ಬೀಚ್‌ ಸಾರ್ವಜನಿಕ ಪ್ರದೇಶ, ಫೋಟೋಶೂಟ್‌ ಮಾಡಿದ್ರೆ ತಪ್ಪೇನು? ಬಿಕಿನಿ ಹಾಕಿ ಫೋಟೋಶೂಟ್‌ ಮಾಡುವುದು ಕಾನೂನು ಉಲ್ಲಂಘನೆಯೇ?

ಬಿಕಿನಿ ಹಾಕಬಾರದು ಎಂದು ಕಾನೂನು ಇದೆಯೇ ಎಂದು ಸಾಮಾಜಿಕ ಜಾಲತಾಣದ ಮೂಲಕ ಮಹಿಳೆ ಉಡುಪಿ ಪೊಲೀಸರನ್ನು ಪ್ರಶ್ನಿಸಿದ್ದಾರೆ.

'ಬಾಯ್ ಫ್ರೆಂಡ್' ಪರಿಚಯಿಸಿದ ರಂಜನಿ ರಾಘವನ್!