ನಾಗ ಚೈತನ್ಯ ತಂದೆ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ವಿವಾಹ ಸಮಾರಂಭದ ಫೋಟೋಗಳನ್ನು ಶೇರ್ ಮಾಡಿ ಸಂತೋಷ ಹಂಚಿಕೊಂಡಿದ್ದಾರೆ.
ಹೈದರಾಬಾದ್‌ನಲ್ಲಿ ತೆಲುಗು ಸಂಪ್ರದಾಯದಂತೆ ನಡೆದ ಆಚರಣೆಯಲ್ಲಿ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಳ ವಿವಾಹವಾಗಿದ್ದಾರೆ.
ಹೈದರಾಬಾದ್ ನಲ್ಲಿ ಅಕ್ಕಿನೇನಿ ಕುಟುಂಬ ಒಡೆತನದ ಅನ್ನಪೂರ್ಣ ಸ್ಟುಡಿಯೊದಲ್ಲಿ ವಿವಾಹ ಕಾರ್ಯಕ್ರಮ ನೆರವೇರಿದೆ. ಅಕ್ಕಿನೇನಿ ನಾಗೇಶ್ವರ ರಾವ್ ಅವರ ಪ್ರತಿಮೆ ಅನಾವರಣಗೊಂಡ ನಂತರ ಅವರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ನೆರವೇರಿದ ಅದ್ದೂರಿ ಕಾರ್ಯಕ್ರಮ ಇದಾಗಿದೆ.
ನಾಗ ಚೈತನ್ಯ ಮತ್ತು ಶೋಭಿತಾ ಕಳೆದ ಆಗಸ್ಟ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 2022 ರಲ್ಲಿ ಯುರೋಪ್ ನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದು ಅಲ್ಲಿಂದ ಪರಿಚಯ, ಸ್ನೇಹಿತರಾಗಿ ಡೇಟಿಂಗ್ ಮಾಡುತ್ತಿದ್ದರು.
ಹಳದಿ ಶಾಸ್ತ್ರದಲ್ಲಿ ಮಿಂದೆದ್ದ ನವ ವಧು ಶೋಭಿತಾ ಧೂಳಿಪಾಲ
ನೂತನ ವಧೂ ವರರು ಹಳದಿ ಶಾಸ್ತ್ರದಲ್ಲಿ, ಸೋದರ-ಸೋದರಿ ಜೊತೆ ವಧು ಶೋಭಿತಾ ಧೂಳೀಪಾಲ.
ಹಳದಿ ಶಾಸ್ತ್ರ, ಬಳೆ ಶಾಸ್ತ್ರದ ದೃಶ್ಯ.
ಹಳದಿ ಶಾಸ್ತ್ರದಲ್ಲಿ ಮಿಂದೆದ್ದ ನವ ವಧು ಶೋಭಿತಾ ಧೂಳಿಪಾಲ
ಬಳೆ ಶಾಸ್ತ್ರದಲ್ಲಿ ವಧು ಶೋಭಿತಾ
ಅಕ್ಕಿನೇನಿ ನಾಗೇಶ್ವರ ರಾವ್ ಪ್ರತಿಮೆ ಎದುರು ಗ್ರೂಪ್ ಫೋಟೋ.