ಕೊನೆಗೂ ಎಂಗೇಜ್ ಆದ ಟಾಲಿವುಡ್ ನಟ ಅಖಿಲ್ ಅಕ್ಕಿನೇನಿ, ಹುಡುಗಿ ಇವರೇನಾ?

Srinivasa Murthy VN

ಟಾಲಿವುಡ್ ಹೀರೋ ಅಕ್ಕಿನೇನಿ ನಾಗಾರ್ಜುನ ಅವರ ಕಿರಿಯ ಪುತ್ರ ಹಾಗೂ ನಟ ಅಖಿಲ್ ಅಕ್ಕಿನೇನಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಝೈನಬ್ ರಾವ್ಜಿ ಎಂಬ ಯುವತಿಯನ್ನು ವಿವಾಹವಾಗುತ್ತಿರುವುದಾಗಿ ಅಖಿಲ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದ್ದಾರೆ.

ಹೈದರಾಬಾದ್ ಮೂಲದ ಯುವತಿ ಝೈನಬ್ ರಾವ್ಜಿ ಉದ್ಯಮಿಯೊಬ್ಬರ ಪುತ್ರಿ ಎನ್ನಲಾಗಿದೆ.

ಇತ್ತೀಚೆಗಷ್ಟೇ ಆಕೆ ಲಂಡನ್ ಮತ್ತು ದುಬೈನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ಪೂರ್ಣಗೊಳಿಸಿ ಭಾರತಕ್ಕೆ ವಾಪಸಾಗಿದ್ದರು.

ಅನೇಕ ವರ್ಷಗಳಿಂದ ಅಖಿಲ್ ಮತ್ತು ಝೈನಬ್ ರಾವ್ಜಿ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.

ಆದರೆ ಅವರಿಬ್ಬರೂ ಎಲ್ಲಿ ಮತ್ತು ಯಾವಾಗ ಭೇಟಿಯಾದರು ಎಂಬುದು ಸದ್ಯಕ್ಕೆ ಸಸ್ಪೆನ್ಸ್ ಆಗಿದೆ.

ಕಲೆಯಲ್ಲಿ ಆಸಕ್ತಿ ಹೊಂದಿರುವ ಝೈನಬ್ ರಾವ್ಜಿ ಈ ಹಿಂದೆ ಹೈದರಾಬಾದಿನಲ್ಲೇ ರಿಫ್ಲೆಕ್ಷನ್ ಹೆಸರಿನ ಆರ್ಟ್ ಗ್ಯಾಲರಿಯಲ್ಲಿ ಪೇಂಟ್ ಎಕ್ಸಿಬಿಷನ್ನಲ್ಲಿ ಪಾಲ್ಗೊಂಡಿದ್ದರು.

ಇಲ್ಲಿ ಆಕೆಯ ಆಧುನಿಕ ಮತ್ತು ಅಮೂರ್ತ ವರ್ಣಚಿತ್ರಗಳನ್ನು ಸಹ ಪ್ರದರ್ಶಿಸಲಾಗಿತ್ತು.

ಇದೇ ವರ್ಣಚಿತ್ರ ಪ್ರದರ್ಶನದಲ್ಲಿ ಅಖಿಲ್ ಮತ್ತು ರಾವ್ಜಿ ಭೇಟಿಯಾಗಿದ್ದರು. ಬಳಿಕ ಸ್ನೇಹ-ಪ್ರೀತಿಯಾಗಿ ಮಾರ್ಪಟ್ಟಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Kadalekai Parishe: ಬಸವನಗುಡಿ ಕಡಲೆಕಾಯಿ ಪರಿಷೆ; ಹಿನ್ನೆಲೆ ಏನು?