Kadalekai Parishe: ಬಸವನಗುಡಿ ಕಡಲೆಕಾಯಿ ಪರಿಷೆ; ಹಿನ್ನೆಲೆ ಏನು?

Online Team

ಬೆಂಗಳೂರಿನ ಬಸವನಗುಡಿ ಕಡಲೆ ಪರಿಷೆ ನವೆಂಬರ್‌ 25ರಂದು ಸೋಮವಾರ ಪ್ರಾರಂಭವಾಗಿದ್ದು, ಈ ವಾರಾಂತ್ಯದವರೆಗೆ ಇದರ ಸಂಭ್ರಮ ಹಾಗೂ ಕಡಲೆಕಾಯಿ ಮಾರಾಟ ಇರಲಿದೆ.

TNIE Photo | Allen Egenuse J

ಪ್ರತಿ ವರ್ಷವೂ ಬಸವನಗುಡಿ ಕಡಲೆ ಪರಿಷೆ ನಡೆಯುತ್ತದೆ. ಇದರ ಮೂಲ ಹಾಗೂ ಕೇಂದ್ರ ಬಿಂದುವೇ ಕಡಲೆಕಾಯಿ.

TNIE Photo | Allen Egenuse J

ಕಡಲೆ ಪರಿಷೆಗೆ ಚಿಣ್ಣರಿಂದ ಹಿರಿಯ ವರೆಗೆ ಸಾವಿರಾರು ಜನ ಆಗಮಿಸುತ್ತಿದ್ದು, ಕಡಲೆಕಾಯಿ ಹಾಗೂ ವಿವಿಧ ವಸ್ತುಗಳನ್ನು ಖರೀದಿಸುತ್ತಿದ್ದಾರೆ.

ಕಡಲೆಕಾಯಿ ಪರಿಷೆಗೆ ಐತಿಹಾಸಿಕ ಹಿನ್ನೆಲೆ ಇದೆ. ಇದರ ಬಗ್ಗೆ ಇರುವ ಪ್ರಮುಖ ಪ್ರತೀತಿ ಹಾಗೂ ಹಿನ್ನೆಲೆ ಬಸವಣ್ಣನಿಗೆ ಸಂಬಂಧಿಸಿದ್ದಾಗಿದೆ.

TNIE Photo | Allen Egenuse J

ಶತಮಾನಗಳ ಹಿಂದೆ ಬಸವನಗುಡಿಯಲ್ಲಿ ಕಡಲೆಕಾಯಿಯನ್ನು ಯಥೇಚ್ಛವಾಗಿ ಬೆಳೆಯಲಾಗುತ್ತಿತ್ತು. ಈ ರೀತಿ ಬೆಳೆಯುತ್ತಿದ್ದ ಕಡಲೆ ಕಟಾವಿಗೆ ಬಂದಾಗ ಸಂಕಷ್ಟ ಎದುರಾಗುತ್ತಿತ್ತು.

TNIE Photo | Allen Egenuse J

ತೋಟಗಳಿಗೆ ಬರ್ತಿದ್ದ ಬಸವ (ನಂದಿ)ನಿಂದ ಇಲ್ಲಿ ಬೆಳೆ ಹಾಳಾಗುತ್ತಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ರೈತರು ನಂದಿ ಮೊರೆ ಹೋದರು ಎನ್ನುವುದು ಇತಿಹಾಸ.

TNIE Photo | Allen Egenuse J

ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಬಸವಣ್ಣನಿಗೆ ಕಡಲೆಕಾಯಿ ಅರ್ಪಿಸುವುದು ವಾಡಿಕೆ. ನಾವೇ ಬಂದು ನಿನಗೆ ಕಡಲೆ ಅರ್ಪಿಸುತ್ತೇವೆ.

TNIE Photo | Allen Egenuse J

ನಮ್ಮ ಬೆಳೆಗಳನ್ನು ಹಾಳು ಮಾಡಬೇಡ ನಂದಿ (ಬಸವ) ಎಂದು ಅಂದಿನ ರೈತರು ಬೇಡಿಕೊಂಡಿದ್ದು. ಇದಾದ ಮೇಲೆ ಕಡಲೆ ಹಾನಿ ತಪ್ಪಿತ್ತು. ಅದೇ ಸಂಪ್ರದಾಯವನ್ನು ಶತಮಾನಗಳಿಂದಲೂ ಪಾಲಿಸಿಕೊಂಡು ಬರಲಾಗುತ್ತಿದೆ.

TNIE Photo | Allen Egenuse J
ಚಾಮುಂಡೇಶ್ವರಿ ದೇವಾಲಯ
ಚಾಮುಂಡೇಶ್ವರಿಗೆ ಚಿನ್ನದ ರಥ ನಿರ್ಮಾಣಕ್ಕೆ ಪ್ರಸ್ತಾವನೆ