ಹಿನ್ನೋಟ 2024: ಈ ವರ್ಷ ಸದ್ದು ಮಾಡಿದ ಸ್ಯಾಂಡಲ್‌ವುಡ್ ಹೀರೋಗಳು

Lingaraj Badiger

ಶಿವರಾಜ್ ಕುಮಾರ್

ಶಿವರಾಜ್‌ ಕುಮಾರ್ ನಟನೆಯ 'ಭೈರತಿ ರಣಗಲ್' ಸಿನಿಮಾ ನವೆಂಬರ್ 15ಕ್ಕೆ ತೆರೆ ಕಂಡಿದ್ದು, ಉತ್ತಮ ಪ್ರದರ್ಶನ ಕಂಡಿತ್ತು.

ಉಪೇಂದ್ರ

ರಿಯಲ್ ಸ್ಟಾರ್ ಉಪೇಂದ್ರ ಅವರು ನಿರ್ದೇಶಿಸಿ, ನಟಿಸಿರುವ 'ಯುಐ' ಚಿತ್ರ ಈ ವರ್ಷದ ಅಂತ್ಯದಲ್ಲಿ ತೆರೆ ಕಂಡಿದ್ದು, ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಿಸಿಕೊಂಡು ಸಾಗುತ್ತಿದೆ. 98 ಸಾವಿರ ಟಿಕೆಟ್‌ಗಳು ಮೊದಲ ಪ್ರದರ್ಶನಕ್ಕಿಂತ ಮುನ್ನವೇ ಬುಕ್ ಆಗಿತ್ತು.

ಸುದೀಪ್

ನಟ ಕಿಚ್ಚ ಸುದೀಪ್ ಅಭಿನಯದ 'ಮ್ಯಾಕ್ಸ್' ಸಿನಿಮಾ ಡಿಸೆಂಬರ್ 25 ರಂದು ತೆರೆ ಕಂಡಿದ್ದು, ಮೊದಲ ಪ್ರದರ್ಶನ ಆರಂಭಕ್ಕೂ ಮುನ್ನ 1 ಲಕ್ಷದ 10 ಸಾವಿರ ಟಿಕೆಟ್ ಬುಕ್ ಆಗಿತ್ತು. ಆ ಮೂಲಕ ವರ್ಷದ ಕೊನೆಗೆ ಬಂದ 'ಮ್ಯಾಕ್ಸ್' ಮೊದಲ ಸ್ಥಾನಕ್ಕೇರಿದೆ.

ನಟ ಗಣೇಶ್

ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ ಕೃಷ್ಣಂ ಪ್ರಣಯ ಸಖಿ ಸಿನಿಮಾ ಸಹ ಗೆದ್ದು ಬೀಗಿದೆ. ಇತ್ತೀಚೆಗಷ್ಟೇ 75 ದಿನಗಳನ್ನು ಪೂರೈಸಿ, ಇದೀಗ ಶತ ದಿನೋತ್ಸವದ ಸನಿಹದಲ್ಲಿದೆ.

ಶ್ರೀ ಮುರಳಿ

ನಟ ಶ್ರೀಮುರಳಿ ಅಭಿನಯದ ಹಾಗೂ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಬಘೀರ' ಸಿನಿಮಾ ಕೂಡ ಈ ವರ್ಷ ಗೆದ್ದು ಬೀಗಿದೆ. ಈ ಸಿನಿಮಾ ಆಕ್ಷನ್ ಧಮಾಕ ಪ್ರೇಕ್ಷಕರಿಗೆ ಇಷ್ಟವಾಗಿತ್ತು.

ದುನಿಯಾ ವಿಜಯ್

ದುನಿಯಾ ವಿಜಯ್ ಅವರು ನಿರ್ದೇಶಿಸಿ ನಟಿಸಿದ 'ಭೀಮ' ಸಿನಿಮಾ ಬಾಕ್ಸಾಫೀಸ್‌ ಕೊಳ್ಳೆ ಹೊಡೆದಿದ್ದು ಗೊತ್ತೇಯಿದೆ. ಆಕ್ಷನ್ ಎಂಟರ್‌ಟೈನರ್ ಸಿನಿಮಾ ಹೀಗೆ ಬಂದು ಹಾಗೆ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು.

ಧ್ರುವ ಸರ್ಜಾ

ದೃವ ಸರ್ಜಾ ಅಭಿನಯದ 'ಮಾರ್ಟಿನ್' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿದ್ದರೂ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಆದರೂ ಧ್ರುವ ಫ್ಯಾನ್ಸ್ ಸಿನಿಮಾ ನೋಡಲು ಉತ್ಸುಕತೆ ತೋರಿದ್ದರು.

ಯುವ ರಾಜ್ ಕುಮಾರ್

ಯುವ ರಾಜ್ ಕುಮಾರ್ ಅಭಿನಯದ ಹಾಗೂ ಸಂತೋಷ್ ಆನಂದ್‌ರಾಮ್ ನಿರ್ದೇಶನದ 'ಯುವ' ಸಿನಿಮಾ ಈ ವರ್ಷ ಸದ್ದು ಮಾಡಿತ್ತು. ಈ ಸಿನಿಮಾ ಮೂಲಕ ಅಣ್ಣಾವ್ರ ಮೊಮ್ಮಗನಿಗೆ ಭರ್ಜರಿ ಸ್ವಾಗತವೇ ಸಿಕ್ಕಿತ್ತು.

ವಿನಯ್ ರಾಜ್ ಕುಮಾರ್

ನಟ ವಿನಯ್ ರಾಜ್‌ಕುಮಾರ್ ಅಭಿನಯದ, ಸಿಂಪಲ್ ಸುನಿ ನಿರ್ದೇಶನದ ‘ಒಂದು ಸರಳ ಪ್ರೇಮ ಕಥೆ’ ಸಿನಿಮಾ ಫೆಬ್ರುವರಿ 8 ರಂದು ರಾಜ್ಯದಾದ್ಯಂತ ತೆರೆಕಂಡಿದ್ದು, ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ವಿನಯ್ ರಾಜ್‌ಕುಮಾರ್ ಅವರಿಗೆ ಜೊತೆಯಾಗಿ ಸ್ವಾತಿಷ್ಠ ಕೃಷ್ಣನ್ ಮತ್ತು ಮಲ್ಲಿಕಾ ಸಿಂಗ್ ನಾಯಕಿಯರಾಗಿ ನಟಿಸಿದ್ದಾರೆ.

'100 ಕೋಟಿ ಕ್ಲಬ್‌' ಸೇರಿದ ದಕ್ಷಿಣ ಭಾರತದ ಸಿನಿಮಾಗಳು

ದೀಕ್ಷಿತ್ ಶೆಟ್ಟಿ

ದೀಕ್ಷಿತ್ ಶೆಟ್ಟಿ ಅಭಿನಯದ ಹಾಗೂ ಶ್ರೀನಿಧಿ ಬೆಂಗಳೂರು ನಿರ್ದೇಶನದ ಬ್ಲಿಂಕ್ ಒಂದು ಸಹ ಈ ವರ್ಷ ಸದ್ದು ಮಾಡಿದ್ದು, ಇದೊಂದು ವೈಜ್ಞಾನಿಕ ಥ್ರಿಲ್ಲರ್ ಸಿನಿಮಾ ಆಗಿದೆ.