ಕೇಂದ್ರದ ಮಾಜಿ ಸಚಿವ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರು ಡಿಸೆಂಬರ್ 10ರಂದು ನಿಧನ ಹೊಂದಿದ್ದರು, ಎಸ್.ಎಂ.ಕೃಷ್ಣ ಅವರಿಗೆ 92 ವರ್ಷ ವಯಸ್ಸಾಗಿತ್ತು.
ನಟ ದ್ವಾರಕೀಶ್
ಕನ್ನಡ ಚಿತ್ರರಂಗದ ಹಿರಿಟ ನಟ ಹಾಗೂ ನಿರ್ಮಾಪಕ ದ್ವಾರಕೀಶ್ ಅವರು ವಯೋಸಹಜ ಕಾಯಿಲೆಯಿಂದಾಗಿ ಏ.16 ರಂದು ವಿಧಿವಶರಾಗಿದ್ದರು. ದ್ವಾರಕೀಶ್ ಅವರಿಗೆ 81 ವರ್ಷ ವಯಸ್ಸಾಗಿತ್ತು.
ರತನ್ ಟಾಟಾ
ಖ್ಯಾತ ಉದ್ಯಮಿ, ಟಾಟಾ ಸನ್ಸ್ ಗೌರವಾಧ್ಯಕ್ಷ ಹಾಗೂ ಕೊಡುಗೈ ದಾನಿ ರತನ್ ಟಾಟಾ ಅಕ್ಟೋಬರ್ 10 ರಂದು ಇಹಲೋಕ ತ್ಯಜಿಸಿದ್ದರು. ರತನ್ ಟಾಟಾ ಅವರಿಗೆ 86 ವರ್ಷ ವಯಸ್ಸಾಗಿತ್ತು.
ಅಪರ್ಣಾ
ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಅಪರ್ಣಾ(57) ಅವರು ಕ್ಯಾನ್ಸರ್ ನಿಂದಾಗಿ ಜುಲೈ.11ರಂದು ವಿಧಿವಶರಾಗಿದ್ದರು. ಅಪರ್ಣಾ ಅವರಿಗೆ 57 ವರ್ಷ ವಯಸ್ಸಾಗಿತ್ತು.
ನಟ ಕೆ.ಶಿವರಾಂ
ಕನ್ನಡ ಚಿತ್ರರಂಗದ ಜನಪ್ರಿಯ ನಟರಾಗಿ ಗುರುತಿಸಿಕೊಂಡಿದ್ದ ಕೆ.ಶಿವರಾಮ್ ಅವರು ಅನಾರೋಗ್ಯದಿಂದಾಗಿ ಫೆ.29ರಂದು ಇಹಲೋಕ ತ್ಯಜಿಸಿದ್ದರು. ಶಿವರಾಮ್ ಅವರಿಗೆ 72 ವರ್ಷ ವಯಸ್ಸಾಗಿತ್ತು.
ಪವಿತ್ರಾ ಜಯರಾಮ್
ಮಂಡ್ಯ ಜಿಲ್ಲೆಯವರಾಗಿದ್ದ ಕಿರುತೆರೆಯ ಜನಪ್ರಿಯ ನಟಿ ಪವಿತ್ರಾ ಜಯರಾಮ್ ಅವರು ಭೀಕರ ರಸ್ತೆ ಅಪಘಾತದಲ್ಲಿ ಮೇ.12 ರಂದು ಸಾವನ್ನಪ್ಪಿದ್ದರು. ಪವಿತ್ರ ಅವರಿಗೆ 53 ವರ್ಷ ವಯಸ್ಸಾಗಿತ್ತು.
ನಿರ್ದೇಶಕ ಗುರುಪ್ರಸಾದ್
ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕ ಹಾಗೂ ನಟರಾಗಿ ಗುರುತಿಸಿಕೊಂಡಿದ್ದ ಗುರುಪ್ರಸಾದ್ ಅವರು ನವೆಂಬರ್ 2 ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಗುರುಪ್ರಸಾದ್ ಅವರಿಗೆ 52 ವರ್ಷ ವಯಸ್ಸಾಗಿತ್ತು.
ನಟಿ ಶೋಭಿತಾ
ಕನ್ನಡದ ಕಿರುತೆರೆ ನಟಿ ಶೋಭಿತಾ ಶಿವಣ್ಣ ಅವರು ಡಿ.2 ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಶೋಭಿತಾ ಅವರಿಗೆ 30 ವರ್ಷ ವಯಸ್ಸಾಗಿತ್ತು.
ನಟ ಟಿ ತಿಮ್ಮಯ್ಯ
ಹಿರಿಯ ನಟ ಟಿ ತಿಮ್ಮಯ್ಯ ಅವರು ನ.16 ರಂದು ವಯೋಸಹಜ ಕಾಯಿಲೆಯಿಂದ ನಿಧನರಾದರು. ತಿಮ್ಮಯ್ಯ ಅವರಿಗೆ 92 ವರ್ಷ ವಯಸ್ಸಾಗಿತ್ತು.
ಶ್ರೀನಿವಾಸ್ ಪ್ರಸಾದ್
ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ, ಮಾಜಿ ಕೇಂದ್ರ ಸಚಿವ ವಿ. ಶ್ರೀನಿವಾಸ ಪ್ರಸಾದ್ ಅವಕು ಏಪ್ರಿಲ್ 29 ರಂದು ಹೃದಯಾಘಾತದಿಂದ ನಿಧನ ಹೊಂದಿದ್ದರು. ಶ್ರೀನಿವಾಸ ಪ್ರಸಾದ್ ಅವರಿಗೆ 76 ವರ್ಷ ವಯಸ್ಸಾಗಿತ್ತು.
ಪ್ರಕಾಶ್ ಹೆಗ್ಗೋಡು
ಕನ್ನಡ ಚಿತ್ರರಂಗದ ಖ್ಯಾತ ನಟ ಪ್ರಕಾಶ್ ಹೆಗ್ಗೋಡು ಅವರು ಮಾರ್ಚ್ 30 ರಂದು ಕ್ಯಾನ್ಸರ್ ನಿಂದಾಗಿ ನಿಧನ ಹೊಂದಿದ್ದರು. ಪ್ರಕಾಶ್ ಹೆಗ್ಗೋಡು ಅವರಿಗೆ 58 ವರ್ಷ ವಯಸ್ಸಾಗಿತ್ತು.
ಸೀತಾರಾಂ ಯೆಚೂರಿ
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ, ಹಿರಿಯ ನಾಯಕ ಸೀತಾರಾಮ್ ಯೆಚೂರಿ ಸೆ.12 ರಂದು ಇಹಲೋಕ ತ್ಯಜಿಸಿದ್ದರು. ಸೀತಾರಾಂ ಅವರಿಗೆ 72 ವರ್ಷ ವಯಸ್ಸಾಗಿತ್ತು.
ಎಸ್ ಕೆ ಜೈನ್
ಖ್ಯಾತ ಜ್ಯೋತಿಷಿ ಡಾ ಸುರೇಂದ್ರ ಕುಮಾರ್ ಜೈನ್ ಅವರು ಶ್ವಾಸಕೋಶದ ಸಮಸ್ಯೆಯಿಂದಾಗಿ ಏಪ್ರಿಲ್ 12 ರಂದು ನಿಧನಹೊಂದಿದ್ದರು, ಜೈನ್ ಅವರಿಗೆ 67 ವರ್ಷ ವಯಸ್ಸಾಗಿತ್ತು.
ಜಾಕಿರ್ ಹುಸೇನ್
ಪ್ರಸಿದ್ಧ ತಬಲಾ ಮಾಂತ್ರಿಕ ಮತ್ತು ಸಂಯೋಜಕ ಜಾಕಿರ್ ಹುಸೇನ್ ಅವರು ಡಿ.16 ರಂದು ನಿಧನರಾಗಿದ್ದರು. ಜಾಕಿರ್ ಹುಸೇನ್ ಅವರಿಗೆ 73 ವರ್ಷ ವಯಸ್ಸಾಗಿತ್ತು.