36ನೇ ವಯಸ್ಸಿಗೆ ಆತ್ಮಹತ್ಯೆಗೆ ಶರಣಾದ ನೀಲಿ ಚಿತ್ರತಾರೆ!

Vishwanath S

ಖ್ಯಾತ ನೀಲಿ ಚಿತ್ರತಾರೆ ಕ್ಯಾಗ್ನಿ ಲಿನ್ ಕಾರ್ಟರ್ 36 ವರ್ಷಕ್ಕೆ ನಿಧನರಾಗಿದ್ದಾರೆ.

ಅಮೆರಿಕದ ಓಹಿಯೋದಲ್ಲಿ ಆತ್ಮಹತ್ಯೆಗೆ ಶರಣಾಗುವ ಮೂಲಕ ಚಿತ್ರ ನಟಿ ತಮ್ಮ ಜೀವನವನ್ನು ಕೊನೆಗೊಳಿಸಿದ್ದಾರೆ.

ಕಾಗ್ನಿ ಅವರ ಅಂತ್ಯಕ್ರಿಯೆಯ ವೆಚ್ಚವನ್ನು ಭರಿಸಲು ಸಹಾಯ ಮಾಡಲು ಅವರ ಸ್ನೇಹಿತರು GoFundMe ಪುಟವನ್ನು ಸ್ಥಾಪಿಸಿದ್ದಾರೆ.

2000 ದಶಕದ ಮಧ್ಯಭಾಗದಲ್ಲಿ ನೀಲಿ ಚಿತ್ರದ ಲೋಕಕ್ಕೆ ಕಾಲಿಟ್ಟ ಅವರು ತನ್ನ ಕೆಲಸಕ್ಕಾಗಿ ಹಲವು ಅಮೇರಿಕನ್‌ ಅಡಲ್ಟ್‌ ವಿಡಿಯೋ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಕಾಗ್ನಿ ಲಿನ್ ಕಾರ್ಟರ್ ವರ್ಷಗಳು ಕಳೆದಂತೆ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಸ್ನೇಹಿತರು ಹೇಳಿರುವುದಾಗಿ ವರದಿ ತಿಳಿಸಿದೆ.