ನಟಿ ರಾಕುಲ್ ಪ್ರೀತ್ ಸಿಂಗ್- ಜಾಕಿ ಭಗ್ನಾನಿ ವಿವಾಹ

Sumana Upadhyaya

ಬಾಲಿವುಡ್ ನಟರಾದ ರಾಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ಬುಧವಾರ ಗೋವಾದಲ್ಲಿ ಪಂಚತಾರಾ ಹೋಟೆಲ್‌ನಲ್ಲಿ ದಾಂಪತ್ಯ ಜೀವನ ಪ್ರವೇಶಿಸಿದರು.

ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ಮತ್ತು ಶಿಲ್ಪಾ ಶೆಟ್ಟಿ ಕುಂದ್ರಾ ಸೇರಿದಂತೆ ಅವರ ಕುಟುಂಬ ಮತ್ತು ಉದ್ಯಮದ ಸ್ನೇಹಿತರ ಸಮ್ಮುಖದಲ್ಲಿ ದಂಪತಿಗಳು ಪಂಜಾಬಿ ಮತ್ತು ಸಿಂಧಿ ವಿಧಿಗಳ ಪ್ರಕಾರ ವಿವಾಹವಾದರು.

ದಂಪತಿಗಳು ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳೊಂದಿಗೆ ತಮ್ಮ ಮದುವೆಯ ವಿಶೇಷ ಕ್ಷಣಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರು.

ಸಂತೋಷದ ಸಂದರ್ಭದ ನಡುವೆ, ಭಗ್ನಾನಿ ಅವರು ಸಿಂಗ್‌ಗೆ ವಿಶೇಷ ಉಡುಗೊರೆಯನ್ನು ನೀಡಿದರು. ಇದು 'ಬಿನ್ ತೇರೆ' ಶೀರ್ಷಿಕೆಯ ಗೀತೆಯ ಹಾಡು. ಸ್ವತಃ ನಟ-ನಿರ್ಮಾಪಕರೇ ಹಾಡನ್ನು ಬರೆದಿದ್ದಾರೆ, ಸಂಯೋಜಿಸಿದ್ದಾರೆ ಮತ್ತು ಹಾಡಿದ್ದಾರೆ.

ವಿವಾಹ ಸಮಾರಂಭ ನಡೆದ ನಂತರ ಮಾಧ್ಯಮಗಳ ಮುಂದೆ ಫೋಟೋಗೆ ಫೋಸ್ ನೀಡಿದ ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ಮತ್ತು ಬಾಲಿವುಡ್ ನಿರ್ಮಾಪಕ ಜಾಕಿ ಭಗ್ನಾನಿ

ಜೋಡಿಯ ಉಡುಪುಗಳನ್ನು ಡಿಸೈನರ್ ತರುಣ್ ತಹಿಲಿಯಾನಿ ವಿನ್ಯಾಸಗೊಳಿಸಿದ್ದಾರೆ.

ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ಮತ್ತು ಬಾಲಿವುಡ್ ನಿರ್ಮಾಪಕ ಜಾಕಿ ಭಗ್ನಾನಿ