ಜಮ್ಮು-ಕಾಶ್ಮೀರದಲ್ಲಿ ಗಲ್ಲಿ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್

Srinivas Rao BV

ಸ್ಥಳೀಯರು ಸಚಿನ್ ತೆಂಡೂಲ್ಕರ್ ಅವರೊಂದಿಗೆ ಗಲ್ಲಿ ಕ್ರಿಕೆಟ್ ಆಡಿದ ಫೋಟೋ, ವೀಡಿಯೋಗಳು ನೆಟ್ಟಿಗರ ಗಮನ ಸೆಳೆಯುತ್ತಿದೆ.

ಸಚಿನ್ ಸ್ಥಳೀಯರೊಂದಿಗೆ ಕ್ರಿಕೆಟ್ ಆಡುತ್ತಿರುವುದಕ್ಕೆ ಕ್ರಿಕೆಟ್&ಕಾಶ್ಮೀರ: ಸ್ವರ್ಗದಲ್ಲಿ ಒಂದು ಪಂದ್ಯ ಎಂಬ ಶೀರ್ಷಿಕೆ ನೀಡಲಾಗಿದೆ.

ಕ್ರಿಕೆಟ್ ಬ್ಯಾಟ್ ತಯಾರಿಕಾ ಫ್ಯಾಕ್ಟರಿಗೆ ಭೇಟಿ ನೀಡಿದ್ದ ಸಚಿನ್, ನನಗೆ ಮೊದಲ ಬ್ಯಾಟ್ ನ್ನು ನೀಡಿದ್ದು ನನ್ನ ಸಹೋದರಿ, ಅದು ಕಾಶ್ಮೀರದ ವಿಲೋ ಬ್ಯಾಟ್ ಆಗಿತ್ತು. ನಾನು ಈಗ ಕಾಶ್ಮೀರದಲ್ಲಿದ್ದೇನೆ ಎಂದು ಫೋಟೋ ಕ್ಯಾಪ್ಷನ್ ನೀಡಿದ್ದಾರೆ.

ಕಾಶ್ಮೀರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಬ್ಯಾಟ್ ತಯಾರಿಕಾ ಫ್ಯಾಕ್ಟರಿಗೂ ಭೇಟಿ ನೀಡಿದ್ದರು. ಕಾಶ್ಮೀರದ ವಿಲೋ ಬ್ಯಾಟ್ ಗಳು ಜಗತ್ತಿನಲ್ಲೇ ಖ್ಯಾತಿ ಪಡೆದಿದೆ.

ಸಚಿನ್ ತೆಂಡೂಲ್ಕರ್ ತಮ್ಮ ಕುಟುಂಬದವರೊಂದಿಗೆ ಕಾಶ್ಮೀರಕ್ಕೆ ಭೇಟಿ ನೀಡಿದ್ದಾಗ ಹಿಮ ಆವರಿಸಿದ ಬೆಟ್ಟಗಳ ನಡುವಿನ ಪ್ರದೇಶದಲ್ಲಿ ಕಾರು ನಿಲ್ಲಿಸಿ ಅಲ್ಲಿದ್ದ ಸ್ಥಳೀಯರೊಂದಿಗೆ ಕ್ರಿಕೆಟ್ ಆಡಿದ್ದಾರೆ.

ಪತ್ನಿ ಅಂಜಲಿ ಮತ್ತು ಮಗಳು ಸಾರಾ ಅವರೊಂದಿಗೆ ಕಳೆದ ಕೆಲವು ದಿನಗಳ ಹಿಂದೆ ಸಚಿನ್ ಕಾಶ್ಮೀರಕ್ಕೆ ಭೇಟಿ ನೀಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಟಿ ರಾಕುಲ್ ಪ್ರೀತ್ ಸಿಂಗ್- ಜಾಕಿ ಭಗ್ನಾನಿ ವಿವಾಹ