ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರಕ್ಕೆ ಪ್ರಧಾನಿ ಮೋದಿ ಭೇಟಿ

Srinivas Rao BV

ಗಗನಯಾನ ಯೋಜನೆಯ ಮೂಲಕ ಬಾಹ್ಯಾಕಾಶಕ್ಕೆ ತೆರಳಲಿರುವ ಸಿಬ್ಬಂದಿಗಳಿಗೆ ತರಬೇತಿ ನೀಡುವ ಸಿಮ್ಯುಲೇಟರ್ ನ್ನು ಪ್ರಧಾನಿ ಮೋದಿ ಆಸಕ್ತಿಯಿಂದ ವೀಕ್ಷಿಸುತ್ತಿರುವುದು

'ನಾಲ್ಕು ದಶಕಗಳ ನಂತರ, ಒಬ್ಬ ಭಾರತೀಯನು ಬಾಹ್ಯಾಕಾಶಕ್ಕೆ ತೆರಳಲು ಸಿದ್ಧನಾಗಿದ್ದಾನೆ. "ಈ ಬಾರಿ ಕೌಂಟ್‌ಡೌನ್, ಸಮಯ ಮತ್ತು ರಾಕೆಟ್ ಕೂಡ ನಮ್ಮದಾಗಿರಲಿದೆ-ಮೋದಿ

ದೇಶದ ಚೊಚ್ಚಲ ಮಾನವ ಸಹಿತ ಬಾಹ್ಯಾಕಾಶ ಯಾನ ಗಗನಯಾನಗೆ ತರಬೇತಿ ಪಡೆಯುತ್ತಿರುವ ನಾಲ್ವರು ಗಗನಯಾತ್ರಿಗಳ ಹೆಸರನ್ನು ವಿಎಸ್ಎಸ್ ಸಿ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದರು.

ಪ್ರಶಾಂತ್ ಬಾಲಕೃಷ್ಣನ್ ನಾಯರ್, ಅಂಗದ್ ಪ್ರತಾಪ್, ಅಜಿತ್ ಕೃಷ್ಣನ್ ಮತ್ತು ಶುಭಾಂಶು ಶುಕ್ಲಾ ಪ್ರಧಾನಿ ಮೋದಿ ಘೋಷಣೆ ಮಾಡಿದ ನಾಲ್ವರು ಗಗನಯಾತ್ರಿಗಳಾಗಿದ್ದಾರೆ.

"2035 ರ ವೇಳೆಗೆ ಭಾರತಕ್ಕೆ ತನ್ನದೇ ಸ್ವಂತ ಬಾಹ್ಯಾಕಾಶ ನಿಲ್ದಾಣ ಇರಲಿದ್ದು, ಇದು ಬಾಹ್ಯಾಕಾಶದ ಅಧ್ಯಯನಕ್ಕೆ ಪೂರಕವಾಗಿರಲಿದೆ"- ಪ್ರಧಾನಿ ಮೋದಿ

ಗಗನ್‌ಯಾನ್ ಮಿಷನ್‌ನಲ್ಲಿ ಬಳಸಲಾಗುತ್ತಿರುವ ಉಪಕರಣಗಳು ಹೆಚ್ಚಾಗಿ ಭಾರತದಲ್ಲಿಯೇ ತಯಾರಿಸಲ್ಪಟ್ಟಿರುವ ಬಗ್ಗೆ ಪ್ರಧಾನಿ ಮೋದಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.