ಬೈ, ಬೈ ಕಿಂಗ್ಸ್: ಕೊಹ್ಲಿ, ರೋಹಿತ್‌ ಅಂತಾರಾಷ್ಟ್ರೀಯ T20 ಗೆ ನಿವೃತ್ತಿ ಘೋಷಣೆ

Prasad SN

ಭಾರತ 17 ವರ್ಷಗಳ ನಂತರ ಐಸಿಸಿ T20 ವಿಶ್ವಕಪ್ ಗೆದ್ದಿತು, ದಕ್ಷಿಣ ಆಫ್ರಿಕಾವನ್ನು 7 ರನ್‌ಗಳಿಂದ ಸೋಲಿಸಿತು.

2023 ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿದ್ದ ಭಾರತ, ಈ ಬಾರಿ ಗೆಲ್ಲಲೇಬೇಕಂದು ಪಣತೊಟ್ಟಿತ್ತು.

ಪ್ರಪಂಚದಾದ್ಯಂತದ ಅಭಿಮಾನಿಗಳು ಭಾರತದ ಗೆಲುವಿನ ಸಂಭ್ರಮಿಸಿದರು.

ಅಭಿಮಾನಿಗಳ ಸಂಭ್ರಮದ ಉದ್ಘೋಷಗಳ ನಡುವೆ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ T20 ಗೆ ನಿವೃತ್ತಿ ಘೋಷಿಸಿದರು.

ಇದು ಭಾರತದ ಪರ ಆಡುತ್ತಿರುವ ನನ್ನ ಕೊನೆಯ ಟಿ20 ವಿಶ್ವಕಪ್ ಆಗಲಿದೆ. ಇದು ಮುಂದಿನ ಪೀಳಿಗೆಗೆ ವಹಿಸುವ ಸಮಯ ಎಂದು ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟರು.

ಇದೇ ವೇಳೆ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಅಂತಾರಾಷ್ಟ್ರೀಯ T20 ಗೆ ತಮ್ಮ ನಿವೃತ್ತಿ ಘೋಷಿಸಿದ್ದಾರೆ.

ಇದು ನನ್ನ ಕೊನೆಯ ಪಂದ್ಯವೂ ಆಗಿತ್ತು. ನಾನು T20 ಸ್ವರೂಪವನ್ನು ಆಡಲು ಪ್ರಾರಂಭಿಸಿದ ಸಮಯದಿಂದ ಆನಂದಿಸಿದ್ದೇನೆ. ಮತ್ತು ವಿದಾಯ ಹೇಳಲು ಇದು ಒಳ್ಳೆಯ ಸಮಯ ಎಂದು ರೋಹಿತ್ ಶರ್ಮಾ ಅಭಿಪ್ರಾಯಪಟ್ಟರು.

ಇಬ್ಬರೂ ಅನುಭವಿ ಆಟಗಾರರು ತಮ್ಮ ನಿವೃತ್ತಿಯನ್ನು ಘೋಷಿಸಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸಿರುವುದರಿಂದ, ಆಟಕ್ಕೆ ಅವರ ಕೊಡುಗೆ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ.