ವಿಚ್ಛೇದನ ಸುದ್ದಿ ಬೆನ್ನಲ್ಲೇ ಹೊಸ ಚೆಲುವೆಯೊಂದಿಗೆ Hardik Pandya ಪೋಸ್! ಯಾರು ಈಕೆ?

Srinivasa Murthy VN

ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾನ್‌ಕೋವಿಕ್‌ ವಿಚ್ಛೇದನ ಸುದ್ದಿ ಬೆನ್ನಲ್ಲೇ ಕ್ರಿಕೆಟಿಗ ಪಾಂಡ್ಯ ಹೊಸ ಹುಡುಗಿಯೊಂದಿಗೆ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ.

ಹಾರ್ದಿಕ್ ತಮ್ಮ ನಿವಾಸದಲ್ಲಿ ಹೊಸ ಹುಡುಗಿ ಜೊತೆ ಕಾಣಿಸಿಕೊಂಡಿದ್ದು, ಈ ಕುರಿತ ಫೋಟೋಗಳು ಮತ್ತು ವಿಡಿಯೋ ವ್ಯಾಪಕ ವೈರಲ್ ಆಗುತ್ತಿವೆ.

ಈ ಹುಡುಗಿಯ ಹೆಸರು ಪ್ರಾಚಿ ಸೋಲಂಕಿ.. ಪ್ರಸಿದ್ಧ ಮೇಕಪ್ ಆರ್ಟಿಸ್ಟ್​, ಹಾಗೂ ಸೋಷಿಯಲ್ ಮೀಡಿಯಾ ಇನ್ಫುಲೆನ್ಸರ್...

ಹಾರ್ದಿಕ್​ ಜತೆಗಿರುವ ಹಲವು ಸುಂದರ ಕ್ಷಣದ ಫೋಟೊ ಮತ್ತು ವಿಡಿಯೊವನ್ನು ತನ್ನ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾಳೆ.

ಸೋಲಂಕಿ ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ ''ವಿಶ್ವಕಪ್​ ಹೀರೋ'' ಭೇಟಿ ಮಾಡಿದೆ ಎಂದು ಬರೆದುಕೊಂಡು ಲವ್​ ಎಮೊಜಿಯನ್ನು ಹಾಕಿದ್ದಾರೆ.

ಸೋಲಂಕಿ ಅವರು ಹಾರ್ದಿಕ್​ ಮನೆಗೆ ಬಂದು ಭೇಟಿಯಾಗಿರುವುದು ನೆಟ್ಟಿಗರಿಗೆ ಹಲವು ಅನುಮಾನ ಮೂಡುವಂತೆ ಮಾಡಿದೆ.

ಪಾಂಡ್ಯ ಕುಟುಂಬದ ಸದಸ್ಯರೊಂದಿಗೂ ಸೋಲಂಕಿ ಆತ್ಮೀಯವಾಗಿರುವ ಫೋಟೊವನ್ನು ಕೂಡ ಹಂಚಿಕೊಂಡಿದ್ದಾರೆ.

ಸದ್ಯಕ್ಕೆ ಇದೊಂದು ಆತ್ಮೀಯ ಭೇಟಿಯಂತೆ ತೋರುತ್ತಿದ್ದರೂ ಕೂಡ ನೆಟ್ಟಿಗರು ಮಾತ್ರ ಇವರಿಬ್ಬರ ಸಂಬಂಧದ ಕುರಿತು ವಿವಿಧ ರೀತಿ ಚರ್ಚೆ ನಡೆಸಿದ್ದಾರೆ.

ಟಿ20 ವಿಶ್ವಕಪ್​ ಗೆದ್ದು ತವರಿಗೆ ಮರಳಿದ ಹಾರ್ದಿಕ್​ ಪಾಂಡ್ಯ ತಮ್ಮ ಮಗನೊಂದಿಗೆ ವಿಶ್ವಕಪ್​ ಗೆಲುವನ್ನು ಸಂಭ್ರಮಿಸಿದ್ದರು.

ಅನಂತ್-ರಾಧಿಕಾ ವಿವಾಹ ಪೂರ್ವ ಸಂಭ್ರಮದಲ್ಲಿ ಸೆಲೆಬ್ರಿಟಿಗಳು ಭಾಗಿ