ಡಾ. ಶಿವರಾಜ್ ಕುಮಾರ್ ಜನ್ಮದಿನ: ಶಿವಣ್ಣನ ಮುಂಬರುವ ಚಿತ್ರಗಳ ಝಲಕ್ ಇಲ್ಲಿದೆ...

Srinivasa Murthy VN

ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ಗೆ ಇಂದು 63ನೇ ಹುಟ್ಟುಹಬ್ಬದ ಸಂಭ್ರಮ. 1962ರ ಜುಲೈ 12ರಂದು ಜನಿಸಿದ ನಾಗರಾಜು ಶಿವಪುಟ್ಟ ಸ್ವಾಮಿ ಕನ್ನಡಿಗರ ಪ್ರೀತಿಯ ಕರುನಾಡ ಚಕ್ರವರ್ತಿಯಾಗಿದ್ದಾರೆ.

ಕರುನಾಡ ಚಕ್ರವರ್ತಿಯ ಮುಂಬರುವ ಚಿತ್ರಗಳ ಕುರಿತು ಒಂದಷ್ಟು ಮಾಹಿತಿ ಇಲ್ಲಿದೆ.

ಉತ್ತರಕಾಂಡ

ಈ ವರ್ಷ ಬಿಡುಗಡೆಯಾಗುವ ಬಹುನಿರೀಕ್ಷಿತ ಸಿನಿಮಾ ಉತ್ತರಕಾಂಡ. ರೋಹಿತ್‌ ಪದಕಿ ನಿರ್ದೇಶನದಲ್ಲಿ ಉತ್ತರಕಾಂಡ ಸಿನಿಮಾ ಮೂಡಿಬರುತ್ತಿದೆ. ಡಾಲಿ ಧನಂಜಯ್‌ ರಗಡ್‌ ಅವತಾರದಲ್ಲಿಯೇ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಭೈರತಿ ರಣಗಲ್

ಈ ವರ್ಷ ಎಲ್ಲಕ್ಕಿಂತ ಮೊದಲು ಬಿಡುಗಡೆಯಾಗಲಿರುವ ಶಿವಣ್ಣನ ಸಿನಿಮಾವಿದು. ಮಫ್ತಿ ಚಿತ್ರದ ಮುಂದುವರೆದ ಭಾಗವಾಗಿ ಈ ಸಿನಿಮಾ ರಿಲೀಸ್‌ ಆಗುತ್ತಿದೆ. ಮಫ್ತಿ ಚಿತ್ರದ ಭೈರತಿ ರಣಗಲ್‌ ವಿಷಯವನ್ನು ಪ್ರತ್ಯೇಕ ಕಥೆ ಮಾಡಲಾಗಿದೆ.

ಶಿವಗಣ

ಗೋಲ್ಡನ್‌ ಸ್ಟಾರ್‌ ಗಣೇಶ್‌ ಮತ್ತು ಶಿವರಾಜ್‌ ಕುಮಾರ್‌ ಜತೆಯಾಗಿ ನಟಿಸಿರುವ ''ಶಿವಗಣ'' ಸಿನಿಮಾದ ಕುರಿತು ಇಂದು ಹೆಚ್ಚಿನ ವಿವರ ದೊರಕುವ ನಿರೀಕ್ಷೆಯಿದೆ.

ನೀ ಸಿಗುವರೆಗೂ

ಈ ಸಿನಿಮಾದಲ್ಲಿ ಶಿವಣ್ಣ ನಾಯಕನಾಗಿ ನಟಿಸಲಿದ್ದಾರೆ. ಸ್ವಾತಿ ವಾನಪಲ್ಲಿ, ಶ್ರೀಕಾಂತ್ ಧುಲಿಪುಡಿ ಮತ್ತು ನರಲಾ ಶ್ರೀನಿವಾಸ ರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.

45

ಸಂಗೀತ ನಿರ್ದೇಶಕ ಅರ್ಜುನ್ಯ ಜನ್ಯ ನಿರ್ದೇಶನದಲ್ಲಿ ಈ ಸಿನಿಮಾದಲ್ಲಿ ಶಿವರಾಜ್‌ ಕುಮಾರ್‌, ಉಪೇಂದ್ರ, ರಾಜ್‌ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ನನ್ನರಸಿ ಸೀರಿಯಲ್ ಮೂಲಕ ಖ್ಯಾತಿ ಗಳಿಸಿದ್ದ ಕೌಸ್ತುಭ ಮಣಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದು ಪ್ಯಾನ್‌ ಇಂಡಿಯಾ ಸಿನಿಮಾವಾಗಿರಲಿದೆ.

ಭೈರವನ ಕೊನೆಪಾಠ

ಸಪ್ತ ಸಾಗರದಾಚೆ ಎಲ್ಲೋ ನಿರ್ದೇಶಕ ಹೇಮಂತ್‌ ರಾವ್‌ ನಿರ್ದೇಶನದ ಸಿನಿಮಾ ಇದಾಗಿದ್ದು, ಮುಂದಿನ ವರ್ಷ ರಿಲೀಸ್‌ ಆಗವು ಸಾಧ್ಯತೆ ಇದೆ. ಈ ಸಿನಿಮಾದಲ್ಲಿ ಶಿವಣ್ಣ ಇದೇ ಮೊದಲ ಬಾರಿಗೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅಶ್ವತ್ಥಾಮ

ಸಚಿನ್ ರವಿ ಕಥೆ ಮತ್ತು ನಿರ್ದೇಶನದ ಅಶ್ವತ್ಥಾಮ ಚಿತ್ರದಲ್ಲಿ ಶಿವಣ್ಣ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ತಮ್ಮ ಪುಷ್ಕರ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.

ಆರ್‌ಡಿಎಕ್ಸ್‌

ರವಿ ಅರಸು ನಿರ್ದೇಶನದಲ್ಲಿ ಶಿವರಾಜ್‌ ಕುಮಾರ್‌ ನಟನೆಯೆ RDX ಎಂಬ ಸಿನಿಮಾವು ತೆರೆಗೆ ಬರಲು ಸರದಿಯಲ್ಲಿದೆ.

ಎಸ್‌ಆರ್‌ಕೆ

ಲಕ್ಕಿ ಗೋಪಾಲ್‌ ನಿರ್ದೇಶನದಲ್ಲಿ SRK ಚಿತ್ರ ಈ ವರ್ಷ ತೆರೆ ಕಾಣಲು ಸಿದ್ಧತೆ ನಡೆಸಿದೆ.

ಶಿವಣ್ಣ 131

ಭುವನೇಶ್ವರಿ ಪಿಕ್ಟರ್ಸ್ ನಿರ್ಮಾಣದ ಇನ್ನೂ ಹೆಸರಿಡದ ಚಿತ್ರದಲ್ಲಿ ಶಿವಣ್ಣ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇಂದು ಪಾತ್ರದ ಪರಿಚಯ ಮಾಡಿಕೊಡಲಾಗಿದೆ. ಚಿತ್ರದಲ್ಲಿ ಶಿವಣ್ಣ ದೇವಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದಲ್ಲದೇ ತೆಲುಗಿನ ನಟ ರಾಮ್ ಚರಣ್ ಅಭಿನಯದ ಇನ್ನೂ ಹೆಸರಿಡದ RC16 ಚಿತ್ರದಲ್ಲಿ ಮತ್ತು ತಮಿಳಿನ ಜಾವಾ ಚಿತ್ರದಲ್ಲಿ ಶಿವಣ್ಣ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

ಹೊಸ ಚೆಲುವೆಯೊಂದಿಗೆ Hardik Pandya ಪೋಸ್!