ಬೆಂಗಳೂರಿನ ಮೊಟ್ಟ ಮೊದಲ ಡಬಲ್ ಡೆಕ್ಕರ್ ಫ್ಲೈ ಓವರ್ ಲೋಕಾರ್ಪಣೆ; ಡಿಸಿಎಂ DK Shivakumar ಕಾರ್ ಡ್ರೈವಿಂಗ್!

Srinivasa Murthy VN

ಬೆಂಗಳೂರಿನ ರಾಗಿಗುಡ್ಡದಲ್ಲಿ ದಕ್ಷಿಣ ಭಾರತದ ಅತಿ ಎತ್ತರದ ಮತ್ತು ಮೊಟ್ಟಮೊದಲ ರೋಡ್-ಕಮ್-ರೈಲು ಮೇಲ್ಸೇತುವೆ ಲೋಕಾರ್ಪಣೆಗೊಂಡಿದೆ.

ಬೆಂಗಳೂರಿಗರ ಬಹುದಿನಗಳ ಕನಸು ಈಗ ನನಸಾಗಿದ್ದು, ಡಬ್ಬಲ್‌ ಡೆಕ್ಕರ್‌ ಫ್ಲೈ ಓವರ್ ವಾಹನ ಚಾಲಕರಿಗೆ ಓಪನ್ ಆಗಲಿದೆ.

NAGARAJAGADEKAL

ಇದೇ ಮೊದಲ ಬಾರಿಗೆ ನಗರದ ಫ್ಲೈಓವರ್ ಮೇಲೆ ಮೆಟ್ರೋ ಲೇನ್ ಹಾದು ಹೋಗಿದೆ.

449 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ 3.36 ಕಿಮೀ ಉದ್ದದ ಡಬ್ಬಲ್‌ ಡೆಕ್ಕರ್‌ ಫ್ಲೈ ಓವರ್‌ ಇದಾಗಿದೆ.

ಈ ಮೇಲ್ಸೇತುವೆಯನ್ನು ಡಿಸಿಎಂ ಡಿ.ಕೆ ಶಿವಕುಮಾರ್‌, ಸಚಿವ ರಾಮಲಿಂಗಾ ರೆಡ್ಡಿ ಲೋಕಾರ್ಪಣೆ ಮಾಡಿದರು.

ಬಳಿಕ ಖುದ್ದು ಡಿಕೆ ಶಿವಕುಮಾರ್‌ ಅವರೇ ಫ್ಲೈಓವರ್‌ ರಸ್ತೆಯಲ್ಲಿ ಕಾರು ಓಡಿಸುವ ಮೂಲಕ ಪ್ರಾಯೋಗಿಕ ವಾಹನ ಸಂಚಾರಕ್ಕೆ ಚಾಲನೆ ನೀಡಿದರು.

ಈ ವೇಳೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾಥ್ ನೀಡಿದ್ದು, ಈ ವಿಡಿಯೋವನ್ನು ಡಿಕೆ ಶಿವಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಎಚ್‌ಎಸ್‌ಆರ್‌ ಲೇಔಟ್‌ ಹಾಗೂ ಹೊಸೂರ್ ಲೇಔಟನ್ನು ಇದರಿಂದ ಟ್ರಾಫಿಕ್ ಕಿರಿಕಿರಿ ಇಲ್ಲದೆ ತಲುಬಹುದು.

ಮೆಟ್ಟುಪಾಳ್ಯಂ: ಪ್ರತಿಷ್ಠೆಯ ಪಂದ್ಯವಾಗಿರುವ ಕೋಳಿ