Google Maps ಹೊಸ ಫೀಚರ್ಸ್ ಬಿಡುಗಡೆ; ಏನೆಲ್ಲಾ ಇದೆ ಅಂದರೆ...

Srinivas Rao BV

ಸರ್ಚ್ ಇಂಜಿನ್ ದೈತ್ಯ ಸಂಸ್ಥೆ ಗೂಗಲ್, ಮ್ಯಾಪ್ಸ್ ನಲ್ಲಿ ಭಾರತದ ಗ್ರಾಹಕರಿಗೆ ಹೊಸ ಫೀಚರ್ ಗಳನ್ನು ಪರಿಚಯಿಸಿದೆ. ಪೆಟ್ರೋಲ್‌ ಬಂಕ್‌ ಮಾದರಿಯಲ್ಲೇ ಗೂಗಲ್‌ ಮ್ಯಾಪ್ಸ್‌ ನಲ್ಲಿ ಇನ್ನು ಮುಂದೆ ಇವಿ ಚಾರ್ಜಿಂಗ್‌ ಸ್ಟೇಷನ್‌ಗಳ ಮಾಹಿತಿ ಪಡೆಯಬಹುದಾಗಿದೆ.

ಗೂಗಲ್‌ ಮ್ಯಾಪ್ಸ್‌ ಬಳಕೆದಾರರಿಗೆ ಹಲವು ಬಾರಿ Flyover ಬಂದಾಗ ಗೊಂದಲ ಉಂಟಾಗುತ್ತಿತ್ತು. ಈ ಸಮಸ್ಯೆಯ ನಿವಾರಣೆಗೆ ಹೊಸ feature ನಲ್ಲಿ ಪರಿಹಾರ ನೀಡಲಾಗಿದೆ. ಫ್ಲೈ ಓವರ್‌ಗಳನ್ನು ಹೈಲೈಟ್‌ ಮಾಡುವುದರ ಜೊತೆಗೆ ಬಳಕೆದಾರರಿಗೆ ಮಾರ್ಗದ ಕುರಿತು ಸ್ಪಷ್ಟ ಮಾರ್ಗದರ್ಶನವನ್ನು google maps ನೀಡಲಿದೆ.

Metro rail ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನೂ ಗೂಗಲ್ ಮ್ಯಾಪ್ಸ್ ನಲ್ಲಿ ನೀಡಲಾಗಿದ್ದು, ಮೆಟ್ರೊ ರೈಲು ಟಿಕೆಟ್‌ ನ್ನು ಗೂಗಲ್‌ ಮ್ಯಾಪ್ಸ್‌ ಆ್ಯಪ್‌ ಮೂಲಕ ಪಡೆಯಬಹುದಾಗಿದೆ. ಈ ಸವಲತ್ತು ಕೊಚ್ಚಿ ಮತ್ತು ಚೆನ್ನೈ ನಗರಗಳಲ್ಲಿ ಮಾತ್ರ ಲಭ್ಯವಿದೆ.

ಹಲವು ಬಾರಿ ಬಳಕೆದಾರರಿಗೆ ಕಿರಿದಾದ ರಸ್ತೆಗಳನ್ನು ತೋರುತ್ತಿದ್ದ ಗೂಗಲ್ ಮ್ಯಾಪ್ ನಿಂದ ಅನಾನುಕೂಲ ಹೆಚ್ಚಾಗುತ್ತಿತ್ತು. ಇದಕ್ಕೂ ಹೊಸ ಫೀಚರ್ ನಲ್ಲಿ ಪರಿಹಾರ ನೀಡಲಾಗಿದ್ದು ಕಿರಿದಾದ ರಸ್ತೆಗಳ ಬಗ್ಗೆ ಮಾಹಿತಿ ನೀಡಿ ಬೈಪಾಸ್‌ ಮಾಡಿ ಬದಲಿ ಮಾರ್ಗವನ್ನು ತೋರಿಸುವ ಸವಲತ್ತನ್ನು ಒದಗಿಸಿದೆ.

ಗೂಗಲ್ ಮ್ಯಾಪ್ಸ್ ಮೂಲಕ ಬಳಕೆದಾರರು ಮಾರ್ಗ ಮಧ್ಯೆ ರಸ್ತೆ ಅವಘಡ, ರಸ್ತೆ ಬಂದ್‌ ಅಥವಾ ಇನ್ನಿತರ ರಸ್ತೆ ಸಂಬಂಧಿ ಸಮಸ್ಯೆಗಳ ಮಾಹಿತಿಯನ್ನು ವರದಿ ಮಾಡಬಹುದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಟಿ ಪ್ರಣಿತಾ ಸುಭಾಷ್: ಬೇಬಿ ಬಂಪ್ ಕ್ಯೂಟ್ ಫೋಟೋಗಳು