ಬ್ರೆಜಿಲ್ ಶಾರ್ಕ್‌ಗಳು ಕೊಕೇನ್ ಸೇವಿಸುತ್ತವೆ ಎಂದು ನಿಮಗೆ ತಿಳಿದಿದೆಯೇ?

Online Team

ಬ್ರೆಜಿಲ್ ಶಾರ್ಕ್‌ಗಳು ಕೊಕೇನ್‌ ಸೇವನೆಗೆ ಒಡ್ಡಿಕೊಳ್ಳುತ್ತಿವೆ. ಸಮುದ್ರ ಜೀವನದ ಮೇಲೆ ಪರಿಣಾಮ ಬೀರುವ ಮಾನವ ಮಾಲಿನ್ಯದ ಬಗೆಗಿನ ಕಳವಳವನ್ನು ಈ ಸಂಶೋಧನೆಯು ಹುಟ್ಟುಹಾಕುತ್ತದೆ.

ಬ್ರೆಜಿಲ್‌ನ ಓಸ್ವಾಲ್ಡೊ ಕ್ರೂಜ್ ಫೌಂಡೇಶನ್ ರಿಯೊ ಡಿ ಜನೈರೊ ಬಳಿ 13 ಶಾರ್ಕ್‌ನೋಸ್ ಶಾರ್ಕ್‌ಗಳ ಸ್ನಾಯುಗಳು ಮತ್ತು ಯಕೃತ್ತುಗಳಲ್ಲಿ ಕೊಕೇನ್ ಅನ್ನು ಪತ್ತೆ ಮಾಡಿದೆ.

ಮಾದಕವಸ್ತು ಕಳ್ಳಸಾಗಣೆದಾರರು ಕೊಕೇನ್ ಅನ್ನು ಸಮುದ್ರಕ್ಕೆ ಎಸೆಯುತ್ತಾರೆ. ಜೊತೆಗೆ, ಮಾನವ ಬಳಕೆ ಮತ್ತು ಅಕ್ರಮ ಸಂಸ್ಕರಣಾ ಪ್ರಯೋಗಾಲಯಗಳಿಂದ ತ್ಯಾಜ್ಯನೀರಿನ ಮಾಲಿನ್ಯವು ಹೆಚ್ಚು ಕಾರಣ ಎಂದು ಸಂಶೋಧಕರು ನಂಬಿದ್ದಾರೆ.

ಶಾರ್ಕ್‌ಗಳು ಕುತೂಹಲಕಾರಿ ಜೀವಿಗಳು. ಅವು ಕೊಕೇನ್‌ ಪ್ಯಾಕೇಜುಗಳೊಂದಿಗೆ ನೇರ ಸಂಪರ್ಕಕ್ಕೆ ಬರುತ್ತವೆ. ಅವುಗಳನ್ನು ಸೇವಿಸುವುದರಿಂದ ಅಥವಾ ಅವುಗಳ ಚರ್ಮದ ಮೂಲಕ ಆ ಅಂಶಗಳು ದೇಹದೊಳಕ್ಕೆ ಸೇರಿಕೊಳ್ಳುತ್ತವೆ ಎಂದು ಊಹಿಸಬಹುದಾಗಿದೆ.

ಶಾರ್ಕ್‌ಗಳಲ್ಲಿ ಕೊಕೇನ್ ಹೈಪರ್ಆಕ್ಟಿವ್ ನಡವಳಿಕೆಯನ್ನು ಉಂಟುಮಾಡಬಹುದು. ಅವುಗಳ ಆರೋಗ್ಯ ಮತ್ತು ನಡವಳಿಕೆಯ ಮೇಲೆ ಸಂಪೂರ್ಣ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ.

ಈ ಆವಿಷ್ಕಾರವು ಸಮುದ್ರ ಜೀವಿಗಳು ಮನರಂಜನಾ ಉದ್ದೇಶದ ಡ್ರಗ್ಸ್ ಗಳಿಂದ ಪ್ರಭಾವಿತವಾಗುತ್ತಿರುವ ಪುರಾವೆಗಳನ್ನು ತೋರುತ್ತದೆ. ಯುನೈಟೆಡ್ ಕಿಂಗ್ಡಮ್ ನಲ್ಲಿ, ಕೊಕೇನ್‌ಗೆ ಒಡ್ಡಿಕೊಂಡ ಈಲ್‌ಗಳು ಮೇಟಿಂಗ್ ಮಾಡಲು ಕಷ್ಟಪಡುತ್ತಿದ್ದವು ಎಂದು ತಿಳಿದುಬಂದಿದೆ.

ಶಾರ್ಕ್‌ಗಳು ಕುತೂಹಲಕಾರಿ ಜೀವಿಗಳು.

Google Maps ಹೊಸ ಫೀಚರ್ಸ್