ನೀವು ಕನ್ನಡದ ಉರ್ಫಿ ಜಾವೇದ್ ಆಗ್ತೀದ್ದೀರಾ: ನಟಿ ಭೂಮಿ ಶೆಟ್ಟಿ ವಿರುದ್ಧ ನೆಟ್ಟಿಗರು ಗರಂ
Vishwanath S
ನಟಿ ಭೂಮಿ ಶೆಟ್ಟಿ ಬಿಗ್ ಬಾಸ್ ಕನ್ನಡ 7ರಲ್ಲಿ ಭಾಗವಹಿಸಿದ ನಂತರ ಖ್ಯಾತರಾಗಿದ್ದರು. ಇನ್ನು ನಟಿ ಹಾಟ್ ಫೋಟೋಶೂಟ್‌ಗಳ ವಿಷಯದಲ್ಲಿ ಹಿಂದೆ ಬಿದ್ದಿಲ್ಲ.
ನಟಿ ಭೂಮಿ ಶೆಟ್ಟಿ ಕಿನ್ನರಿ ಎಂಬ ಕನ್ನಡ ಧಾರಾವಾಹಿ ಮೂಲಕ ಚಿರಪರಿಚಿತರಾಗಿದ್ದಾರೆ. ಈ ಧಾರಾವಾಹಿ 2017 ರಿಂದ 2019 ರವರೆಗೆ ಪ್ರಸಾರವಾಗಿತ್ತು. ನಂತರ 2021ರಲ್ಲಿ ಇಕ್ಕಟ್ ಎಂಬ ಕನ್ನಡ ಚಲನಚಿತ್ರದಲ್ಲಿ ಮೊದಲ ಬಾರಿಗೆ ಪಾದಾರ್ಪಣೆ ಮಾಡಿದರು.
ಈ ಚಿತ್ರದ ಮೂಲಕ ಭೂಮಿಗೆ ತನ್ನ ಛಾಪು ಮೂಡಿಸಲು ಸಾಧ್ಯವಾಗಲಿಲ್ಲ. ನಂತರ Instagram ನಲ್ಲಿ, ಪಾಶ್ಚಿಮಾತ್ಯ ಉಡುಪುಗಳನ್ನು ಧರಿಸಿರುವ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.
ಅಭಿಮಾನಿಯೊಬ್ಬರು 'ನಿಜವಾಗಿಯೂ ಇವು ಹಾಟ್ ಫೋಟೋ, ಭೂಮಿ ಶೆಟ್ಟಿ" ಎಂದು ಪೋಸ್ಟ್ ಮಾಡಿದ್ದಾರೆ. ಮತ್ತೊಬ್ಬರು ಬ್ಲ್ಯಾಕ್ ಬ್ಯೂಟಿ ಮತ್ತು ಹಾಟ್ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಭೂಮಿ ಶೆಟ್ಟಿಯನ್ನು ನಟಿ ಉರ್ಫಿ ಜಾವೇದ್ ಜೊತೆ ಹೋಲಿಸಿದ್ದಾರೆ.
ಭೂಮಿ ಸದ್ಯ ತೆಲುಗು ಟೆಲಿವಿಷನ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದು, ಅಪಾರ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದಾರೆ.