ಸ್ಪೇನ್ ಪ್ರವಾಹ: ಕೆಸರಿನಲ್ಲಿ ಮುಳುಗಿದ ನಗರ; ಕಿಂಗ್ ಫೆಲಿಪ್ VI ವಿರುದ್ಧ ಜನಾಕ್ರೋಶ
Online Team
ಸ್ಪೇನ್ ನಲ್ಲಿ ಕಳೆದ ವಾರ ಭಾರಿ ಪ್ರವಾಹಕ್ಕೆ 205 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಪ್ರಮುಖ ನಗರಗಳಾದ ವೆಲೆನ್ಸಿಯಾ, ಕ್ಯಾಸ್ಟಿಲ್ಲಾ ಲಾ ಮಂಚಾ ಮತ್ತು ಅಂಡಲೂಸಿಯಾ ಹಾಗೂ ಬಾರ್ಸಿಲೋನಾ ಪ್ರದೇಶಗಳು ಕೆಸರಿನಲ್ಲಿ ಮುಳುಗಿವೆ.
ಪ್ರಾದೇಶಿಕ ಮತ್ತು ಸ್ಥಳೀಯ ತುರ್ತು ಕಾರ್ಯಕರ್ತರಿಗೆ ಸಹಾಯ ಮಾಡಲು ಕನಿಷ್ಠ 1,700 ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ. ಇದುವರೆಗೂ ನೂರಾರು ವಾಹನಗಳು ಪತ್ತೆಯಾಗಿವೆ.
ಪ್ರವಾಹದ ದೃಶ್ಯ.
ಅವಶೇಷಗಳಡಿ ಸಿಲುಕಿರುವವರಿಗಾಗಿ ಭಾರಿ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಇದಕ್ಕೆ ಸ್ಥಳೀಯರು ಕೂಡ ಸ್ವಚ್ಛತಾ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ.
ಸ್ಪೇನ್‌ನ ಪ್ರವಾಹದಿಂದ ಅಸಹಾಯಕರಾಗಿರುವ ನಾಗರೀಕರು, ಅತಿ ಹೆಚ್ಚು ಹಾನಿಗೊಳಗಾದ ಪಟ್ಟಣಗಳಲ್ಲಿ ಒಂದಕ್ಕೆ ಭೇಟಿ ನೀಡಿದ ಸ್ಪೇನ್‌ನ ರಾಜ ಫೆಲಿಪ್ VI ಮತ್ತು ಸರ್ಕಾರಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರವಾಹ ನಂತರದ ದೃಶ್ಯ.
ಪ್ರಾದೇಶಿಕ ಮತ್ತು ಸ್ಥಳೀಯ ತುರ್ತು ಕಾರ್ಯಕರ್ತರಿಗೆ ಸಹಾಯ ಮಾಡಲು ಕನಿಷ್ಠ 1,700 ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ.
ಈ ಪರಿಸ್ಥಿತಿಗೆ ಭಾರಿ ಮಳೆ ಕಾರಣ ಎನ್ನಲಾಗಿದ್ದು, ವೆಲೆನ್ಸಿಯಾ, ಕ್ಯಾಸ್ಟಿಲ್ಲಾ ಲಾ ಮಂಚಾ, ಅಂಡಲೂಸಿಯಾ ಹಾಗೂ ಬಾರ್ಸಿಲೋನಾದಲ್ಲಿ 400 ರಿಂದ 600 ಮಿ. ಮಳೆಯಾಗಿದೆ.