AR Rahman ಗೆ ಪತ್ನಿ ಸೈರಾ ಬಾನು ವಿಚ್ಛೇದನ! ಕಾರಣ ಇದೇನಾ?

Srinivasa Murthy VN

ಆಸ್ಕರ್ ಪ್ರಶಸ್ತಿ ವಿಜೇತ, ಬಾಲಿವುಡ್​ನ ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ದಾಂಪತ್ಯದಲ್ಲಿ ಬಿರುಕು ಮೂಡಿದೆ.

ಎಆರ್ ರೆಹಮಾನ್ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿದ್ದು, ಪತ್ನಿ ಸೈರಾ ಬಾನು ವಿಚ್ಛೇದನ ಘೋಷಿಸಿದ್ದಾರೆ.

ಆ ಮೂಲಕ ಬರೊಬ್ಬರಿ 29 ವರ್ಷಗಳ ವೈವಾಹಿಕ ಜೀವನಕ್ಕೆ ಎ ಆರ್ ರೆಹಮಾನ್ ದಂಪತಿ ಅಂತ್ಯ ಹಾಡಿದ್ದಾರೆ.

ಸೈರಾ ಬಾನು ಪರ ವಕೀಲರಾದ ವಂದನಾ ಶಾ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ದಂಪತಿಗಳ ಸಂಬಂಧದಲ್ಲಿನ "ಭಾವನಾತ್ಮಕ ಒತ್ತಡಗಳು" ವಿಚ್ಛೇದನಕ್ಕೆ ಕಾರಣ ಎಂದಿದ್ದಾರೆ.

ಸಾಯಿರಾ ಅವರು ತಮ್ಮ ಪತಿ ಎಆರ್ ರೆಹಮಾನ್‌ನಿಂದ ಬೇರ್ಪಡುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ನಾವು 30 ವರ್ಷಗಳ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತೇವೆ ಎಂದು ಭಾವಿಸಿದ್ದೇವು. ಆದರೆ ದುರದೃಷ್ಟವಶಾತ್ ಅದು ಸಾಧ್ಯವಾಗಲಿಲ್ಲ.

ಛಿದ್ರವಾದ ಹೃದಯಗಳನ್ನು ನೋಡಿ ದೇವರೂ ಕೂಡ ನಡುಗಿಬಿಟ್ಟಿರುತ್ತಾನೆ. ಈ ಕಷ್ಟದ ಸಮಯದಲ್ಲಿ ನಮ್ಮ ಗೌಪ್ಯತೆಯನ್ನು ಗೌರವಿಸುವ ಎಲ್ಲರಿಗೂ ಧನ್ಯವಾದ ಎಂದು ರೆಹಮಾನ್ ಟ್ವೀಟ್ ಮಾಡಿದ್ದಾರೆ.

ರೆಹಮಾನ್ ಮತ್ತು ಸಾಯಿರಾ ಬಾನು ಜೋಡಿ 1995ರ ಮಾರ್ಚ್ 12ರಂದು ಮದುವೆ ಆಗಿತ್ತು.

ಡಾಲಿ-ಧನ್ಯತಾ ಎಂಗೇಜ್ ಮೆಂಟ್