ಅಮೆರಿಕ ಚುನಾವಣೆಗೆ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಪೆನ್ಸಿಲ್ವೇನಿಯಾದ ಮೆಕ್‌ಡೊನಾಲ್ಡ್‌ನಲ್ಲಿ ಫ್ರೈ ಸ್ಟೇಷನ್ ನಲ್ಲಿ ಕೆಲಸ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಈ ನಡುವೆ ಡ್ರೈವ್-ಥ್ರೂ ವಿಂಡೋದ ಮೂಲಕ ಜನರ ಪ್ರಶ್ನೆಗಳಿಗೆ ಉತ್ತರಿಸಿದರು.
ವೀಡಿಯೊ
(Photo : AP)
ವರದಿಗಾರರು ಮತ್ತು ಸಹಾಯಕರ ಎದುರು, ಉದ್ಯೋಗಿಯೊಬ್ಬರು ಟ್ರಂಪ್‌ಗೆ ಫ್ರೈಸ್ ಬುಟ್ಟಿಯನ್ನು ಎಣ್ಣೆಯಲ್ಲಿ ಮುಳುಗಿಸುವುದು, ಫ್ರೈಗಳನ್ನು ಉಪ್ಪು ಹಾಕುವುದು ಮತ್ತು ಸ್ಕೂಪ್ ಬಳಸಿ ಪೆಟ್ಟಿಗೆಗಳಲ್ಲಿ ಹಾಕುವುದು ಹೇಗೆ ಎಂಬುದನ್ನು ತೋರಿಸಿದರು.
ಕಾಲೇಜಿನಲ್ಲಿದ್ದ ವೇಳೆ ಫಾಸ್ಟ್‌ಫುಡ್ ಚೈನ್‌ನಲ್ಲಿ ಕೆಲಸ ಮಾಡಿದ ತಮ್ಮ ಅನುಭವದ ಕುರಿತು ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರ ಹೇಳಿಕೆಗಳಿಗೆ ಪ್ರತಿಯಾಗಿ ಟ್ರಂಪ್ ಈ ಭೇಟಿ ನೀಡಿದ್ದಾರೆ.
ಟ್ರಂಪ್ ತಾವೂ ಇದೇ ಅನುಭವ ಪಡೆದಿರುವುದಾಗಿ ಹೇಳಿಕೊಂಡರಾದರು ಅದಕ್ಕೆ ಸಾಕ್ಷ್ಯವನ್ನು ನೀಡಲಿಲ್ಲ. ಆದರೆ "ಈ ಜನರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಅವರು ಶ್ರೇಷ್ಠರು." ಎಂದಷ್ಟೇ ಹೇಳಿದರು.
ಮೆಕ್‌ಡೊನಾಲ್ಡ್ಸ್ ಉದ್ಯೋಗಿಗಳನ್ನು ನೋಡಿದ ನಂತರ ಅವರು ಕನಿಷ್ಠ ವೇತನ ಹೆಚ್ಚಳಕ್ಕೆ ಬೆಂಬಲಿಸಬಹುದೇ ಎಂಬ ಪ್ರಶ್ನೆಗೆ ಟ್ರಂಪ್ ನೇರವಾಗಿ ಉತ್ತರಿಸಲಿಲ್ಲ.