ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿರುವ ಡೊನಾಲ್ಡ್ ಟ್ರಂಪ್ ಪ್ರಚಾರದ ವೇಳೆ ಯುವತಿಯೊಬ್ಬಳು ತುಂಬಿದ ಸಭೆಯಲ್ಲಿ ತನ್ನ 'ತೆರೆದ ಎದೆ' ಪ್ರದರ್ಶನ ಮಾಡಿರುವ ಘಟನೆ ನಡೆದಿದೆ.
ಅಮೆರಿಕದ ಲಾಂಗ್ ಐಲೆಂಡ್ ನ Nassau Coliseum ವೇದಿಕೆಯಲ್ಲಿ ಡೊನಾಲ್ಡ್ ಟ್ರಂಪ್ ಪ್ರಚಾರದ ಭಾಷಣದಲ್ಲಿ ತೊಡಗಿದ್ದ ವೇಳೆ ಈ ಘಟನೆ ನಡೆದಿದೆ. ಟ್ರಂಪ್ ಭಾಷಣದ ವೇಳೆ ಯುವತಿ ತನ್ನ ಬಟ್ಟೆ ಟೀ ಶರ್ಟ್ ಎತ್ತಿ ತೆರೆದೆದೆ ಪ್ರದರ್ಶಸಿದ್ದಾರೆ.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದ್ದು, ಯುವತಿ ಕೃತ್ಯಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇನ್ನು ಯುವತಿಯ ಅನುಚಿತ ವರ್ತನೆ ಹಿನ್ನಲೆಯಲ್ಲಿ ಪ್ರಚಾರ ಕಾರ್ಯಕ್ರಮ ಆಯೋಜಕರು ಆಕೆಯನ್ನು ಕಾರ್ಯಕ್ರಮದಿಂದ ಹೊರ ಹಾಕಿದ್ದು, ಹೊರಗೆ ಹೋದ ಮೇಲೂ ಕೂಡ ಆಕೆ ಅದೇ ಕೃತ್ಯವನ್ನು ಮುಂದುವರೆಸಿದ್ದಾಳೆ.
ಅಂದಹಾಗೆ ಟ್ರಂಪ್ ಪ್ರಚಾರದ ವೇಳೆ ಅನುಚಿತ ವರ್ತನೆ ತೋರಿದ ಯುವತಿಯನ್ನು 26 ವರ್ಷದ ಅವಾ ಲೂಯಿಸ್ (Ava Louise) ಎಂದು ಪತ್ತೆ ಮಾಡಲಾಗಿದ್ದು, ವೃತ್ತಿಯಲ್ಲಿ ರೂಪದರ್ಶಿಯಾಗಿರುವ ಅವಾ ಲೂಯಿಸ್ ತನ್ನ ಇಂತಹುದೇ ಕೃತ್ಯಗಳಿಂದ ಕುಖ್ಯಾತಿ ಪಡೆದಿದ್ದಾರೆ.
ಅಮೆರಿಕದಲ್ಲಿ ನಡೆಯುವ ದೊಡ್ಡ ದೊಡ್ಡ ಈವೆಂಟ್ ಗಳಿಗೆ ಹೋಗಿ ಅಲ್ಲಿಯೂ ಇಂತಹುದೇ ಕೃತ್ಯ ಮಾಡಿ ಪ್ರಚಾರ ಪಡೆಯುತ್ತಿದ್ದಳು. ಅಲ್ಲದೆ ತನ್ನ ಕೃತ್ಯವನ್ನು ವಿಡಿಯೋ ಮಾಡಿಕೊಂಡು ತನ್ನ Instagram ಖಾತೆಯಲ್ಲಿ ಅಪ್ಲೋಡ್ ಮಾಡುತ್ತಿದ್ದಳು. ಆಕೆ ಈ ವರೆಗೂ 4 ಲಕ್ಷದ 22 ಸಾವಿರ ಫಾಲೋವರ್ಸ್ ಗಳನ್ನು ಹೊಂದಿದ್ದಾಳೆ.
Advertisement