ಭಾರತ ಎಲ್ಲರಿಗಿಂತ ಆಧುನಿಕವಾಗಿದೆ: ಭಾರತದ ಸಂಸ್ಕೃತಿಯ ಪ್ರಭಾವ ಒಪ್ಪಿ ನಮಸ್ಕರಿಸಿದ ಟ್ರಂಪ್!

ಕೊರೋನಾ ವೈರಸ್ ಗೆ ಅಮೆರಿಕ ಸಹ ನಲುಗಿದ್ದು, ವೈರಸ್ ಹರಡದಂತೆ ತಡೆಟ್ಟಲು ವಿಶ್ವವೇ ಹರಸಾಹಸಪಡುತ್ತಿದೆ. 
ಭಾರತ ಎಲ್ಲರಿಗಿಂತ ಆಧುನಿಕವಾಗಿದೆ: ಭಾರತದ ಸಂಸ್ಕೃತಿಯ ಪ್ರಭಾವ ಒಪ್ಪಿ ನಮಸ್ಕರಿಸಿದ ಟ್ರಂಪ್!
Updated on

ವಾಷಿಂಗ್ ಟನ್: ಕೊರೋನಾ ವೈರಸ್ ಗೆ ಅಮೆರಿಕ ಸಹ ನಲುಗಿದ್ದು, ವೈರಸ್ ಹರಡದಂತೆ ತಡೆಟ್ಟಲು ವಿಶ್ವವೇ ಹರಸಾಹಸಪಡುತ್ತಿದೆ. 

ಈ ನಡುವೆ ಕೊರೋನಾ ವೈರಸ್ ಹರಡುವಿಕೆ ತಡೆಗೆ ಭಾರತೀಯ ಸಂಸ್ಕೃತಿ ವಿಶ್ವಾದ್ಯಂತ ಜನಪ್ರಿಯವಾಗುತ್ತಿದೆ. ಈಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ ಭಾರತೀಯ ಸಂಸ್ಕೃತಿಗೆ ಮಾರುಹೋಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಪಾಶ್ಚಾತ್ಯ ದೇಶಗಳಲ್ಲಿ ಒಬ್ಬರನ್ನು ಭೇಟಿ ಮಾಡಿದಾಗ ಕೈಕುಲುಕಿ ಕುಶಲೋಪರಿ ಕೇಳುವುದು ಸಹಜ. ಈ ರೀತಿ ಮಾಡುವುದರಿಂದ ಕೊರೋನಾ ವೈರಸ್ ಹರಡುವ ಸಾಧ್ಯತೆಗಳು ಹೆಚ್ಚು. ಆದರೆ ಭಾರತದಲ್ಲಿ ನಮಸ್ಕಾರ ಮಾಡುವ ಪದ್ಧತಿ ಇದ್ದು, ವಿಶ್ವವೇ ಈ ಸಂಸ್ಕೃತಿಯನ್ನು ಅನುಕರಣೆ ಮಾಡಲು ನಿಂತಿದೆ. 

coronavirus burial pits so vast they are visible from space

ಇದಕ್ಕೆ ಸಾಕ್ಷಿಯಾಗಿ ಅಮೆರಿಕಕ್ಕೆ ಭೇಟಿ ನೀಡಿರುವ ಐರಿಷ್ ಪ್ರಧಾನಮಂತ್ರಿ ಲಿಯೋ ವರದಕರ್ ಅವರನ್ನು ಶ್ವೇತಭವನದಲ್ಲಿ ಸ್ವಾಗತಿಸಿದ ಟ್ರಂಪ್, ಕೈ ಮುಗಿದು ಶುಭ ಕೋರಿದರು. ಇಬ್ಬರೂ ನಾಯಕರು ಪರಸ್ಪರ ಕೈಮುಗಿದು ಶುಭಕೋರಿದ ನಂತರ, ಕೈಕುಲುಕಿ ಸ್ವಾಗತಿಸುವುದರ ಬದಲು ಈ ರೀತಿ ಕೈ ಜೋಡಿಸಿ ಸ್ವಾಗತಿಸುವುದು ಕೊರೋನಾ ವಿರುದ್ಧ ಹೋರಾಡಲು ಇರುವ ಪ್ರಾಥಮಿಕ ಅಸ್ತ್ರ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಈ ವೇಳೆ ಮಾತನಾಡಿದ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ನಾನು ಇತ್ತಿಚಿಗಷ್ಟೇ ಭಾರತದಿಂದ ವಾಪಸ್ಸಾದ ನಂತರ ನನ್ನ ಮೇಲೆ ಭಾರತೀಯ ಸಂಸ್ಕೃತಿ ಗಾಢವಾದ ಪ್ರಭಾವ ಬೀರಿದೆ. ಭಾರತ ಪ್ರವಾಸದಲ್ಲಿದ್ದಾಗ ಅಲ್ಲಿನ ಪ್ರಧಾನಿಯೂ ಸೇರಿಂದತೆ ಎಲ್ಲರೂ ತಮ್ಮನ್ನು ನಮಸ್ತೆ ಮೂಲಕವೇ ಸ್ವಾಗತಿಸಿದರು. ನಮಸ್ತೆಯ ಮಹತ್ವ ಭಾರತದ ಪ್ರವಾಸದ ಬಳಿಕಷ್ಟೇ ಅರ್ಥವಾಯಿತು, ಭಾರತ ಎಲ್ಲರಿಗಿಂತ ಆಧುನಿಕವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷರಷ್ಟೇ ಅಲ್ಲದೇ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮಾರ್ಕನ್ ಕೂಡ ಸ್ಪೇನ್ ರಾಜಮನೆತನದ ಪ್ರತಿನಿಧಿಗಳನ್ನು ನಮಸ್ತೆ ಮೂಲಕ ಸ್ವಾಗತಿಸಿದ್ದರು. ಅಲ್ಲದೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇಥನ್ಯಾಹು ಕೂಡ ನಮಸ್ತೆ ಹೇಳುವ ಮೂಲಕ ಕೊರೊನಾ ವೈರಸ್‌ನಿಂದ ದೂರ ಇರುವಂತೆ ಮನವಿ ಮಾಡಿದ್ದರು.

ಪ್ರಿನ್ಸ್ ಚಾರ್ಲ್ಸ್ ಕೂಡ ಶೇಕ್ ಹ್ಯಾಂಡ್ ನೀಡಲು ಭಯಪಡುತ್ತಿದ್ದಾರೆ. ಲಂಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಪ್ರಿನ್ಸ್ ಚಾರ್ಲ್ಸ್ ಶೇಕ್ ಹ್ಯಾಂಡ್ ನೀಡಲು ನಿರಾಕರಿಸಿ ಕೈಜೋಡಿಸಿ ನಮಸ್ತೆ ಎಂದು ಹೇಳಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬ್ರಿಟನ್ ನಲ್ಲಿ ಸುಮಾರು ೫೦೦ ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದು ಬ್ರಿಟಿಷ್ ರಾಜ ಕುಟುಂಬ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com