Nepotism ನಿಂದಾಗಿ ಹಲವು ಅವಕಾಶಗಳು ಕೈತಪ್ಪಿವೆ: ನಟಿ ರಕುಲ್ ಪ್ರೀತ್

Srinivasa Murthy VN

Nepotism ನಿಂದಾಗಿ ಹಲವು ಅವಕಾಶಗಳು ಕೈತಪ್ಪಿವೆ ಎಂದು ಖ್ಯಾತ ನಟಿ ರಕುಲ್ ಪ್ರೀತ್ ಸಿಂಗ್ ಹೇಳಿದ್ದಾರೆ.

ದಕ್ಷಿಣದಲ್ಲಿ ಹಲವು ಚಿತ್ರಗಳಲ್ಲಿ ನಟಿಸಿ ಖ್ಯಾತಿಗಳಿಸಿರುವ ನಟಿ ರಕುಲ್ ಪ್ರೀತ್ ಇದೀಗ ಬಾಲಿವುಡ್ ನಲ್ಲೂ ನೆಲೆಯೂರಲು ಹರಸಾಹಸ ಪಡುತ್ತಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ನೆಪೋಟಿಸಂನಿಂದ ಎದುರಿಸಿದ ಸಮಸ್ಯೆಯ ಕುರಿತು ನಟಿ ಮಾತನಾಡಿದ್ದಾರೆ.

ನೆಪೋಟಿಸಂನಿಂದ ನಾನು ಕೂಡ ಸಮಸ್ಯೆ ಎದುರಿಸಿದ್ದೇನೆ. ಇದರಿಂದ ಹಲವು ಅವಕಾಶಗಳು ಕೈತಪ್ಪಿವೆ.

ಅದನ್ನೇ ಇಟ್ಟುಕೊಂಡು ದ್ವೇಷ ಸಾಧಿಸುವ ವ್ಯಕ್ತಿ ನಾನಲ್ಲ. ನನ್ನ ತಂದೆ ಸೇನೆಯದಲ್ಲಿದ್ದವರು.

ನಾನು ಕೂಡ ಸೇನೆಗೆ ಸೇರಲು ನಿರ್ಧರಿಸಿದ್ದರೆ, ಅವರು ನನಗೆ ಸಹಾಯ ಮಾಡುತ್ತಿದ್ದರು, ಸಲಹೆ ನೀಡುತ್ತಿದ್ದರು.

ಅದನ್ನು ತಪ್ಪು ಎಂದೂ ಹೇಳಲಾಗದು ಎಂದು ನೆಪೋಟಿಸಂ ಪರವಾಗಿಯೇ ರಕುಲ್ ಮಾತನಾಡಿದ್ದಾರೆ.

ನಟಿ ರಕುಲ್ ಪ್ರೀತ್ ಅವರ ಹೇಳಿಕೆಗೆ ಇದೀಗ ಪರ ವಿರೋಧದ ಚರ್ಚೆಯಾಗುತ್ತಿದೆ.

ಇನ್ನು ಜುಲೈ 12ರಂದು ‘ಇಂಡಿಯನ್ 2’ (Indian 2) ಸಿನಿಮಾ ರಿಲೀಸ್ ಆಗಿತ್ತು. ಇದರಲ್ಲಿ ಕಮಲ್ ಹಾಸನ್, ಸಿದ್ಧಾರ್ಥ್ ಜೊತೆ ರಕುಲ್ ನಟಿಸಿದ್ದರು.

ಇದೀಗ ಅಜಯ್ ದೇವಗನ್ ಜೊತೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ಜೊತೆಗೆ ಕೆಲ ಟಾಲಿವುಡ್ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.

2009ರಲ್ಲಿ ಕನ್ನಡದ ಗಿಲ್ಲಿ ಸಿನಿಮಾದಲ್ಲಿ ಜಗ್ಗೇಶ್‌ ಪುತ್ರ ಗುರುರಾಜ್‌ಗೆ ನಾಯಕಿಯಾಗಿ ರಕುಲ್‌ ನಟಿಸಿದ್ದರು.

ಬಳಿಕ ಸೌತ್‌ ಸಿನಿಮಾಗಳಲ್ಲಿ ಪ್ರಮುಖವಾಗಿ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಹೆಚ್ಚು ಗುರುತಿಸಿಕೊಂಡಿದ್ದರು.

ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಮಿಲನಾ ನಾಗರಾಜ್