ಅದಿತಿ ರಾವ್ ಹೈದರಿ ಮತ್ತು ಸಿದ್ಧಾರ್ಥ್ ವಿವಾಹ: Stunning Photos

Online Team

ನಟ ದಂಪತಿ ಅದಿತಿ ರಾವ್ ಹೈದರಿ ಮತ್ತು ಸಿದ್ಧಾರ್ಥ್ ಕುಟುಂಬಸ್ಥರ ಸಮ್ಮುಖದಲ್ಲಿ ಪುರಾತನ ದೇವಾಲಯವೊಂದರಲ್ಲಿ ಸರಳವಾಗಿ ವಿವಾಹವಾದರು.

(Photo | Instagram/aditiraohydari)
(Photo | Instagram/aditiraohydari)

ಅದಿತಿ ಮತ್ತು ಸಿದ್ಧಾರ್ಥ್ ಮಾರ್ಚ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದಿತಿ ಕುಟುಂಬಕ್ಕೆ ಮಹತ್ವದ್ದಾಗಿರುವ ತೆಲಂಗಾಣದ ವನಪರ್ತಿಯಲ್ಲಿರುವ 400 ವರ್ಷಗಳಷ್ಟು ಹಳೆಯದಾದ ದೇವಾಲಯದಲ್ಲಿ ಇಂದು ದಾಂಪತ್ಯ ಜೀವನ ಪ್ರವೇಶಿಸಿದರು.

(Photo | Instagram/aditiraohydari)

ಅದಿತಿ (37) ಮತ್ತು ಸಿದ್ಧಾರ್ಥ್ (45), ಜಂಟಿ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ನವವಿವಾಹಿತರಾಗಿ ತಮ್ಮ ಮೊದಲ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

(Photo | Instagram/aditiraohydari)

ದಂಪತಿಗಳು ಪ್ರಸಿದ್ಧ ಡಿಸೈನರ್ ಸಬ್ಯಸಾಚಿ ಮುಖರ್ಜಿ ವಿನ್ಯಾಸಗೊಳಿಸಿದ ಉಡುಗೆ ಮತ್ತು ಆಭರಣಗಳನ್ನು ಧರಿಸಿದ್ದರು.

(Photo | Instagram/aditiraohydari)

ಅದಿತಿ ಚಿನ್ನದ ಸೀರೆಯನ್ನು ಧರಿಸಿದ್ದರೆ, ಸಿದ್ಧಾರ್ಥ್ ಬಿಳಿ ಕುರ್ತಾ ಮತ್ತು ಧೋತಿಯನ್ನು ಧರಿಸಿದ್ದರು.

(Photo | Instagram/aditiraohydari)

ಅದಿತಿ ಕೊನೆಯದಾಗಿ ನೆಟ್‌ಫ್ಲಿಕ್ಸ್ ಸರಣಿ "ಹೀರಾಮಂಡಿ: ದಿ ಡೈಮಂಡ್ ಬಜಾರ್" ನಲ್ಲಿ ಕಾಣಿಸಿಕೊಂಡಿದ್ದರು ಮತ್ತು ಸಿದ್ಧಾರ್ಥ್ ಅವರ ಇತ್ತೀಚಿನ ಹೊಸ ಚಿತ್ರ "ಇಂಡಿಯನ್ 2" ಆಗಿತ್ತು.

(Photo | Instagram/aditiraohydari)
ಪುರಾತನ ದೇವಸ್ಥಾನದಲ್ಲಿ ಅದಿತಿ, ಸಿದ್ಧಾರ್ಥ್ ವಿವಾಹ