ನವದೆಹಲಿ: ತಾರಾ ಜೋಡಿ ಅದಿತಿ ರಾವ್ ಹೈದರಿ ಮತ್ತು ತಮಿಳು ಸ್ಟಾರ್ ನಟ ಸಿದ್ಧಾರ್ಥ್ ಸದ್ದಿಲ್ಲದೇ ಸೋಮವಾರ 400 ವರ್ಷಗಳಷ್ಟು ಹಳೆಯದಾದ ಪುರಾತನ ದೇವಸ್ಥಾನದಲ್ಲಿ ಅತ್ಯಂತ ಸರಳವಾಗಿ ವಿವಾಹವಾಗಿದ್ದಾರೆ.
ಕಳೆದ ಮಾರ್ಚ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ, ತೆಲಂಗಾಣದ ವನಪರ್ತಿಯಲ್ಲಿರುವ 400 ವರ್ಷಗಳಷ್ಟು ಹಳೆಯದಾದ ದೇವಾಲಯದಲ್ಲಿ ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
37 ವರ್ಷದ ಅದಿತಿ ಮತ್ತು 45 ವರ್ಷದ ಸಿದ್ಧಾರ್ಥ್ ಇಬ್ಬರಿಗೂ ಇದು ಎರಡನೇ ಮದುವೆಯಾಗಿದೆ. ಸಿದ್ಧಾರ್ಥ್ ಅವರು ತಮ್ಮ ಮೊದಲ ಪತ್ನಿ ಮೇಘನಾ ಅವರಿಗೆ 2007ರಲ್ಲಿ ವಿಚ್ಛೇದನ ನೀಡಿದ್ದರು. ಹಾಗೆಯೇ ಅದಿತಿ ರಾವ್ ಅವರು ತಮ್ಮ ಮೊದಲ ಪತಿ ಸತ್ಯದೀಪ್ ಮಿಶ್ರಾಗೆ 2013ರಲ್ಲಿ ಡಿವೋರ್ಸ್ ನೀಡಿದ್ದರು. ಆ ಬಳಿಕ ಅದಿತಿ ರಾವ್ ಅವರಿಗೆ ಸಿದ್ದಾರ್ಥ್ ಜೊತೆ ಪ್ರೀತಿ ಚಿಗುರಿತ್ತು. ಈಗ ಅವರಿಬ್ಬರು ಸತಿ-ಪತಿ ಆಗಿದ್ದಾರೆ.
ಈ ಜೋಡಿ ಇನ್ಸ್ಟಾಗ್ರಾಮ್ನಲ್ಲಿ ತಮ್ಮಿಬ್ಬರ ಫೋಟೋಗಳನ್ನು ಆಗಾಗ ಶೇರ್ ಮಾಡಿಕೊಳ್ಳುತ್ತಿದ್ದರು. 2024ರ ಆರಂಭದಲ್ಲಿ ಇಬ್ಬರು ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಈಗ ಸದ್ದಿಲ್ಲದೇ ಮದುವೆ ಆಗಿದ್ದಾರೆ.
ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ನವವಿವಾಹಿತರಾಗಿ ತಮ್ಮ ಮೊದಲ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
‘ನೀನೇ ನನ್ನ ಸೂರ್ಯ, ನೀನೇ ನನ್ನ ಚಂದ್ರ, ನೀನೇ ನನ್ನ ಎಲ್ಲಾ ನಕ್ಷತ್ರ’ ಎಂದು ಕ್ಯಾಪ್ಷನ್ ನೀಡುವ ಮೂಲಕ ಅದಿತಿ ರಾವ್ ಹೈದರಿ ಅವರು ತಮ್ಮ ಮದುವೆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮದುವೆಯಲ್ಲಿ ಕುಟುಂಬದವರು ಮತ್ತು ಆಪ್ತ ಸ್ನೇಹಿತರು ಮಾತ್ರ ಭಾಗಿ ಆಗಿದ್ದರು.
ದಂಪತಿಗಳು ಪ್ರಸಿದ್ಧ ಡಿಸೈನರ್ ಸಬ್ಯಸಾಚಿ ಮುಖರ್ಜಿ ವಿನ್ಯಾಸಗೊಳಿಸಿದ ಬಟ್ಟೆ ಮತ್ತು ಆಭರಣಗಳನ್ನು ಧರಿಸಿದ್ದರು.
ಅದಿತಿ ಅವರು ಗೋಲ್ಡ್ ಕಲರ್ ಸೀರೆ ಧರಿಸಿದ್ದರೆ, ಸಿದ್ಧಾರ್ಥ್ ಬಿಳಿ ಕುರ್ತಾ ಮತ್ತು ಧೋತಿಯನ್ನು ಧರಿಸಿದ್ದರು.
Advertisement